ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Upayuktha
0


ಮಂಗಳೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಿಮೆನ್ ಎಪೌಂವೆರ್ಮೆಂಟ್ ಸೆಲ್ ಮತ್ತು ಆ್ಯಂಟಿ ವಿಮೆನ್ ಹಾರ್ರಸಮೆಂಟ್ ಸೆಲ್ ಇದರ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.


ಪುತ್ತೂರು ಉಪ ವಿಭಾಗದ ಅಬಕಾರಿ ನಿರೀಕ್ಷಕರಾದ ಜೋಸಲಿನ್ ಫೆರ್ನಾಂಡಿಸ್ ಅವರು ಗೌರವ ಅಥಿತಿಯಾಗಿ ಆಗಮಿಸಿ ಮಾತನಾಡಿ, ಎದ್ದೇಳಿ, ಜಾಗೃತರಾಗಿ, ಆದರೆ ಯಾವಾಗಲೂ ಪರಸ್ಪರ ಮಹಿಳೆಯರಿಗೆ ಬೆಂಬಲ ನೀಡಿ. ಎಂದಿಗೂ ಅಸೂಯೆ ಪಡಬೇಡಿ, ಇತರರಿಗೆ ಮಾರ್ಗದರ್ಶನ ನೀಡಿ. ಯಾವಾಗಲೂ ಆರ್ಥಿಕವಾಗಿ ಸ್ವತಂತ್ರರಾಗಿರಿ, ನಿಮ್ಮ ಗುರಿಯನ್ನು ಎಂದಿಗೂ ಬಿಡಬೇಡಿ. ಯಾರ ಮೇಲೂ ಅವಲಂಬಿತರಾಗಬೇಡಿ ಮತ್ತು ನಿಮ್ಮ ನೈತಿಕತೆಯನ್ನು ಸದಾ ಕಾಪಾಡಿಕೊಳ್ಳಿ ನಿಮ್ಮ ನೈತಿಕ ಮೌಲ್ಯಗಳು ಯಾವಾಗಲೂ ಉನ್ನತ ಮಟ್ಟದಲ್ಲಿರಲಿ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ ಫಾ ಡಾ ಆ್ಯಂಟನಿ ಪ್ರಕಾಶ್ ಮೊಂತೆರೊ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿ,ಮಹಿಳೆಯಿಲ್ಲದೆ ಪುರುಷನಿಲ್ಲ, ಪುರುಷನಿಲ್ಲದೆ ಮಹಿಳೆಯಿಲ್ಲ. ನಾವು ಪುರುಷರನ್ನು ಗೌರವಿಸಬೇಕು ಮತ್ತು ಮಹಿಳೆಯರನ್ನು ಗೌರವಿಸಬೇಕು. ಸೋಮಾರಿಯಾಗಬೇಡಿ, ಸ್ವಾರ್ಥಿಗಳಾಗಬೇಡಿ. ಯಾವಾಗಲೂ ಶಿಸ್ತುಬದ್ಧರಾಗಿ ಮತ್ತು ಕಠಿಣ ಪರಿಶ್ರಮಿಗಳಾಗಿರಿ. ಕಠಿಣ ಪರಿಶ್ರಮಿ ಪುರುಷನಾಗಲಿ ಅಥವಾ ಮಹಿಳೆಯಾಗಲಿ, ಜೀವನದಲ್ಲಿ ಎಂದಿಗೂ ಬಡವರಾಗುವುದಿಲ್ಲ. ಸೋಮಾರಿತನವು ನಿಮ್ಮ ಜೀವನದಲ್ಲಿ ಪ್ರಗತಿ ಹೊಂದಲು ಬಿಡುವುದಿಲ್ಲ. ನೀವು ಸ್ವಾರ್ಥಿಯಾಗಿದ್ದರೆ, ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ.


ನಿಮ್ಮನ್ನು ನೀವು ಸರಿಯಾದ ರೀತಿಯಲ್ಲಿ ನಿಭಾಯಿಸಲು ಶಕ್ತರಾಗಿರಬೇಕು. ಶಿಸ್ತು ಎಂಬುದು ನಿಮ್ಮನ್ನು ಬಲಿಷ್ಠರನ್ನಾಗಿ ಮಾಡುವ ಅತ್ಯುತ್ತಮ ತತ್ವವಾಗಿದೆ ಎಂದು ಹೇಳಿದರು.


ವಿಮೆನ್ ಎಪೌಂವೆರ್ಮೆಂಟ್ ಸೆಲ್ ಸಂಯೋಜಕರಾದ ಪ್ರೇಮಲತಾ ಕೆ ಮತ್ತು ಆ್ಯಂಟಿ ವಿಮೆನ್ ಹಾರ್ರಸಮೆಂಟ್ ಸೆಲ್ ಸಂಯೋಜಕರಾದ ಶ್ರೀಮತಿ ನೋವ್ಲಿನ್ ಎನ್ ಡಿ ಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಬಿಕಾಂ ವಿದ್ಯಾರ್ಥಿನಿ ಫರಾಹತ್ ಮುಶ್ರೀನ್ ಮುಖ್ಯ ಅತಿಥಿಯನ್ನು ಪರಿಚಯಿಸಿದರು,


ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಅಪೂರ್ವ ಮತ್ತು ಬಳಗ ಪ್ರಾರ್ಥಿಸಿದರು, ತ್ರಿತೀಯ ಬಿಎಸ್ಸಿ ವಿದ್ಯಾರ್ಥಿನಿ ಹಿಬಾ ಶೇಕ್ ಸ್ವಾಗತಿಸಿ, ಪ್ರಥಮ ಬಿ ಕಾಂ ವಿದ್ಯಾರ್ಥಿನಿ ಶಮಾನ ಬಾನು ವಂದಿಸಿದರು. ದ್ವಿತೀಯ ಬಿ ಬಿ ಎ ವಿದ್ಯಾರ್ಥಿನಿ ಪ್ರಿಯಾ ಸಭಾ ಕಾರ್ಯಕ್ರಮವನ್ನು ನಿರೂಪಿಸಿ, ಮಹಿಳಾ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಸಾಂಸ್ಕೃತಿಕ ಕಾರ್ಯಕ್ರಮವನ್ನು ತ್ರಿತೀಯ ಬಿ ಎ ವಿದ್ಯಾರ್ಥಿನಿ ಕಣೀಸ್ ನಿರೂಪಿಸಿದರು..



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top