ಮೌನಿಯಾದೆ ನಿನ್ನ ಪ್ರೀತಿಯಿಂದ

Upayuktha
0


ಪ್ರೀತಿ ಕುರುಡು ಹೌದು, ಆದರೆ ನಾನು ನಿನ್ನ ಪ್ರೀತಿಯಲ್ಲಿ ಕುರುಡಿಯಾದೆ. ಮೊದಲ ನೋಟವೇ ಕಂಪನ. ಕದ್ದು ಕದ್ದು ನೋಡುವ ಹಂಬಲ. ಆ ದಿನಕ್ಕೆ ಕಾತುರದಿಂದ ಕಾಯುತ್ತಿದ್ದೆ ನಿನ್ನ ಸವಿ ನುಡಿಗೆ. ಹೇಳಿಯೇ ಬಿಟ್ಟೆ ಮನಸಿನ ಭಾವನೆಯ...


ಒಪ್ಪಿಯೇ ಬಿಟ್ಟೆ ನಿನ್ನ ಮನಸಾರೆಯೇ. ಪ್ರೇಮ ಪಕ್ಷಿಗಳ ರೀತಿಯಲ್ಲಿ ಊರು ಊರು ಕೈ ಹಿಡಿದುಕೊಂಡು ತಿರುಗಾಡಿದೆವು. ನಿನ್ನ ಜೊತೆ  ಜೀವನ ಪರ್ಯಂತ  ಜೀವಿಸುವ ಕನಸೊಂದನ್ನು ಕಂಡೆ. ಪ್ರೀತಿಯ ಜೊತೆಯಲ್ಲಿ ನಂಬಿಕೆಯು ಹೆಚ್ಚಾಯಿತು. ಗೆದ್ದಾಗ ಬೆನ್ನು ತಟ್ಟಿ ಅತ್ತಾಗ ಕಣ್ಣೀರು ಒರೆಸಲು ಜೊತೆಯಾದೆ.


ಆದರೆ ಆ ಸಂಭ್ರಮ ಹೆಚ್ಚು ದಿನ ಇರಲಿಲ್ಲ,  ಕಣ್ಣ ಎದುರೇ ತನ್ನ ಕೊರಳಿಗೆ ಬೀಳಬೇಕಿದ್ದ ತಾಳಿ ಇನ್ನೊಂದು ಕೊರಳಿಗೆ ಬಿಗಿಯಾಯಿತು. ಏನೂ ಗೊತ್ತಿಲ್ಲದ ರೀತಿಯಲ್ಲಿ ಮನೆಯಲ್ಲಿ ತೋರಿಸಿದ ಹುಡುಗಿಯ ಜೊತೆಯಲ್ಲಿ ಅವನು ಹಸೆಮಣೆ ಏರಿದ. ನೂರಾರು ಕನಸನ್ನು ತೋರಿಸಿ ನಿನಗೂ ನನಗೂ ಸಂಬಂಧ ಇಲ್ಲ ಎಂದು ಮರೆಯಾದ.


ಇನ್ನು ಅವನು ನನ್ನವನು ಅಲ್ಲ ಎಂದು ನೆನೆಸಿಕೊಂಡಾಗಲೇ ಮನಸ್ಸು ಭಾರವಾಯಿತು. ನೆನಪುಗಳು ಕಣ್ಣೀರಾಯಿತು. ಬದುಕು ಕುರುಡಾಯಿತು. ಪ್ರೀತಿ ಕಳೆದುಕೊಂಡ ನಾನು ಬಾಯಿದ್ದು ಮೌನಿಯಾದೆ...

(ಕಾಲ್ಪನಿಕ)




- ಕೃತಿ ಬಲ್ಯಾಯ ನೆಕ್ಕಿಲು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top