ಗುರಿ ತಲುಪಲು ಶಿಸ್ತು ಮುಖ್ಯ

Upayuktha
0


ಮೂಡುಬಿದಿರೆ: ಜೀವನದಲ್ಲಿ ಶಿಸ್ತು ಎಂದರೆ ಕೇವಲ ನಿಯಮಗಳನ್ನು ಪಾಲಿಸುವುದು ಮಾತ್ರವಲ್ಲ; ಅದು ವ್ಯಕ್ತಿಯ ಚಿಂತನೆ, ವರ್ತನೆ ಮತ್ತು ಕಾರ್ಯಪದ್ಧತಿಯಲ್ಲಿರುವ ಸುವ್ಯವಸ್ಥೆ ಎಂದು ಚೆನ್ನೈ ಮೂಲದ 11 ವರ್ಷದ ಉದ್ಯಮಿ ಹಾಗೂ ಜೋಜೋ ಕನೆಕ್ಟ್ ಸ್ಥಾಪಕ ಅಥ್ವಿಕ್ ಅಮಿತ್ ಕುಮಾರ್ ಹೇಳಿದರು.


ಅವರು ಆಳ್ವಾಸ್‌ನ ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ರೋಸ್ಟ್ರಂ ಸ್ಪೀಕರ್ಸ್ ಕ್ಲಬ್ ವತಿಯಿಂದ ನಡೆದ "ತರಗತಿಯಿಂದ ಸಮ್ಮೇಳನದ ವರೆಗೆ ನನ್ನ ಉದ್ಯಮಶೀಲತಾ ಪ್ರಯಾಣ" ಪ್ರೇರಣಾದಯಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ತನ್ನ ತಂದೆಯ ಉದ್ಯಮಕ್ಕೆ ಸಂಬಂದಿಸಿದ ಸಭೆಗಳಲ್ಲಿ ಭಾಗಿಯಾದ್ದರಿಂದ ತನ್ನದೇ ಆದ ಉದ್ಯಮವನ್ನು ಪ್ರಾರಂಭಿಸಲು ಸ್ಫೂರ್ತಿಯಾಯಿತು ಎಂದರು.


ಝೋಝೋ ಕನೆಕ್ಟ್ ವೃತ್ತಿಪರ ನೆಟ್‌ವರ್ಕಿಂಗ್ ಸೇವೆಗಳನ್ನು ಒದಗಿಸುವ ಸಂಸ್ಥೆಯಾಗಿದೆ, ಸಾಂಪ್ರದಾಯಿಕ ಬ್ಯುಸಿನೆಸ್ ಕಾರ್ಡ್ಗಳ ಬದಲಾಗಿ ಸ್ಕ್ಯಾನ್ ಮಾಡುವ ಮೂಲಕ ಡಿಜಿಟಲ್ ಕಾರ್ಡ್ ಆಗಿ ಪರಿವರ್ತಿಸುವ ಮೂಲಕ ಜೋಜೋ ಬ್ಯುಸಿನೆಸ್ ಕಾರ್ಡ್ ಕಾರ್ಯನಿರ್ವಹಿಸುತ್ತದೆ ಎಂದರು.


ನಾನು ವ್ಯವಹಾರಿಕ ಸಮ್ಮೇಳನಗಳಲ್ಲಿ ಭಾಗಿಯಾಗವುದರ ಮೂಲಕ ಜಾಗತಿಕ ಹೂಡಿಕೆದಾರರು, ಉದ್ಯಮಿಗಳನ್ನು ವಿವಿಧ ಕಂಪನಿಗಳ ಸ್ಥಾಪಕರ ಪರಿಚಯ ಮಾಡಿಕೊಂಡೆ. ಆದರೆ ನಂತರದ ದಿನಗಳಲ್ಲಿ ಆ ಸಂಪರ್ಕ ಉಳಿದುಕೊಳ್ಳಲಿಲ್ಲ. ಇದರಿಂದ ಹಲವು ಅವಕಾಶ ಕೈ ತಪ್ಪಿ ಹೋಯಿತು. ಆದ್ದರಿಂದ ನಾನು ಜೋಜೋ ಕನೆಕ್ಟ್ ಅನ್ನು ಸ್ಥಾಪಿಸಿದೆ ಎಂದರು. ಇದು ಉದ್ಯಮಿಗಳನ್ನು, ಹೂಡಿಕೆದಾರರನ್ನು ಸಂಪರ್ಕ ಮಾಡಲು ಸಹಾಯ ಮಾಡಿತು ಎಂದರು.


ನಂತರ ನಡೆದ ಪ್ರಶ್ನಾವಳಿಯಲ್ಲಿ ಶಿಕ್ಷಣ ಮತ್ತು ಉದ್ಯಮವನ್ನು ಹೇಗೆ ಜೊತೆಗೆ ನಿಭಾಯಿಸುತ್ತಾರೆ. ವ್ಯವಹಾರದಲ್ಲಿ ಅವರಿಗೆ ಉತ್ಸಾಹಬರಲು ಕಾರಣವೇನು ಇಂತಹ ಪ್ರಶ್ನೆಗಳಿಗೆ ಉತ್ತರಿಸಿದರು. ಯುವಕರು ತಮ್ಮ ಯೋಚನೆಗಳನ್ನು ಕಾರ್ಯಗತಗೊಳಿಸುವಂತೆ ಸಲಹೆ ನೀಡಿದರು. ಕೇವಲ ನಮ್ಮ ಯೋಜನೆಗಳ ಬಗ್ಗೆ ಯೋಚಿಸುವುದರ ಬದಲು ಅದನ್ನು ಪರಿಹಾರ ಮಾಡುವಂತಹ ಕೆಲಸ ಮಾಡಬೇಕು ಎಂದರು. ಆರಂಭಿಕ ಹಂತಗಳಲ್ಲಿ ಯುವ ಉದ್ಯಮಿಗಳು ಎದುರಿಸುವ ತೊಂದರೆಗಳು ಮತ್ತು ವೈಫಲ್ಯಗಳ ಬಗ್ಗೆಯೂ ಅವರು ಮಾತನಾಡಿದರು.


ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ರೋಸ್ಟ್ರುಮ್ ಸ್ಪೀಕರ್ಸ್ ಕ್ಲಬ್‌ನ ಅಧ್ಯಕ್ಷೆ ಡಾ. ದೀಪಾ ಕೊಟ್ಟಾರಿ ಉಪಸ್ಥಿತರಿದ್ದರು. ನಿಯತಿ ಅಮೀನ್ ಕಾರ್ಯಕ್ರಮ ನಿರೂಪಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top