ಹೆಂಡತಿಯಾದವಳು ತನ್ನ ಅತಿಯಾದ ಸ್ವಾಭಿಮಾನವನ್ನು ಗಂಡನ ಮುಂದೆ ಅಥವಾ ಅವನ ಪರವಾಗಿ ಪ್ರತಿಯೊಂದು ಹಂತದಲ್ಲೂ ಪ್ರದರ್ಶಿಸಬಾರದು. ಗಂಡನಾದವನು ಸಾಮಾನ್ಯವಾಗಿ ಸಹಜ ನೆಲೆಯಲ್ಲೇ ತನ್ನ ಬದುಕನ್ನು ರೂಪಿಸಿಕೊಂಡಿರುತ್ತಾನೆ. ಆದರೆ ಕೆಲವೊಮ್ಮೆ ಹೆಂಡತಿಯೇ ತನ್ನ ಗಂಡನ ಬಗ್ಗೆ ಇಲ್ಲದ ‘ಸ್ಥಿತಿ’ಯನ್ನು ಭ್ರಮೆಯಲ್ಲಿ ಕಟ್ಟಿಕೊಂಡು, ಅದನ್ನೇ ಇತರರಲ್ಲೂ ನಿರ್ಮಿಸಲು ಪ್ರಯತ್ನಿಸುತ್ತಾಳೆ.
ತನ್ನ ಗಂಡ ಹೀಗೆ, ಹಾಗೆ ಎಂದು, ಅವನ ಇಷ್ಟ–ಅನಿಷ್ಟಗಳನ್ನು ತಾನೇ ಊಹಿಸಿ ಎಲ್ಲರ ಎದುರು ಪ್ರತಿಯೊಂದು ಸಂದರ್ಭದಲ್ಲೂ ಹೇಳತೊಡಗಿದರೆ, ಗಂಡ ಅನಾವಶ್ಯಕ ಅಸೌಕರ್ಯಕ್ಕೆ ಒಳಗಾಗುವ ಪರಿಸ್ಥಿತಿ ಉಂಟಾಗುತ್ತದೆ. ಸತ್ಯವೆಂದರೆ, ಹೆಂಡತಿ ಭ್ರಮಿಸಿದಂತೆಯೇ ಗಂಡ ಇರುವುದಿಲ್ಲ — ಇರಬೇಕೆಂದೂ ಇಲ್ಲ.
ಅವನು ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರೂ, ತನ್ನ ಘನತೆ ಮತ್ತು ಅಂತರವನ್ನು ಕಾಪಾಡಿಕೊಂಡಿದ್ದರೂ, ಎಲ್ಲರನ್ನೂ ಹಾಗೆಯೇ ಸ್ವೀಕರಿಸುವ ಮನೋಭಾವ ಅವನಲ್ಲಿರುತ್ತದೆ. ಆದರೆ ಅಂಥವನ ಸುತ್ತ ಹೆಂಡತಿ ನಿರ್ಮಿಸುವ ಭ್ರಮೆಯ ಕೋಟೆಯಿಂದ, ಅವನು ದೇವರಂತೆ ಕಾಣಲು ಆರಂಭವಾಗುತ್ತಾನೆ. ಯಾರೂ ಸದಾಕಾಲ ದೇವರಾಗಿರಲು ಸಾಧ್ಯವಿಲ್ಲ. ಒಂದು ದಿನ ಆ ಕೋಟೆ ಕುಸಿದು, ವಾಸ್ತವಿಕತೆ ಹೊರಬಂದೇ ಬರುತ್ತದೆ.
ಹೆಂಡತಿಯಾದವಳು ದಾಂಪತ್ಯದ ಈ ನಿಜವನ್ನು ಅರಿತುಕೊಂಡರೆ, ಇಬ್ಬರ ಜೀವನವೂ ಸಮನ್ವಯದಿಂದ, ನೆಮ್ಮದಿಯಿಂದ ಸಾಗುತ್ತದೆ.
- ಟಿ. ದೇವಿದಾಸ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


