ಶ್ರೀ ರಾಮರ ಅನುಸರಣೆಯೇ ಮೋಕ್ಷದಾಯಕ: ಡಾ. ಪಾವಗಡ ಪ್ರಕಾಶ ರಾವ್

Upayuktha
0

ರಾಷ್ಟ್ರೀಯ ವಿಚಾರ ಸಂಕಿರಣ




ಬಂಟ್ವಾಳ: ಶ್ರೀ ರಾಮರನ್ನು ಭಾರತದೊಂದಿಗೆ ಸಮೀಕರಿಸಿ ಜಗತ್ತಿನ ಜನ ನೋಡುತ್ತಾರೆ. ರಾಜನಾಗಿ ಪ್ರಜೆಗಳನ್ನು ತಂದೆಯ ಸ್ಥಾನದಲ್ಲಿ ನಿಂತು ಪ್ರಜಾ ಪರಿಪಾಲಕನಾಗಿದ್ದ ಶ್ರೀರಾಮ ರನ್ನು‌ ಅನುಸರಿಸುವುದೆಂದರೆ ಮೋಕ್ಷ ಗಾಮಿಗಳಾಗುವುದು ಎಂದು ಆಧ್ಯಾತ್ಮಿಕ  ಚಿಂತಕ, ಭಗವದ್ಗೀತಾ ವ್ಯಾಖ್ಯಾನಕಾರರಾದ ಡಾ. ಪಾವಗಡ ಪ್ರಕಾಶ ರಾವ್ ಹೇಳಿದರು.


ಅವರು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಸಾಧನಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.


ಪಿತೃ ಪೂಜಕ, ಸಹೋದರ ಪ್ರೇಮ ಸೇರಿದಂತೆ ಹದಿನಾರು ಗುಣಗಳ ಶ್ರೀರಾಮ ದರ್ಶನವೇ ರಾಷ್ಟ್ರವನ್ನು ಪ್ರತಿನಿಧಿಸುತ್ತದೆ. ಶ್ರೀ ರಾಮರ ಅಧ್ಯಯನ ಮಾಡಿದರೆ ಭಾರತವನ್ನು ಅಧ್ಯಯನ ಮಾಡಿದಂತೆ ಎಂದು‌ ಅವರು ವಿವರಿಸಿದರು.


ಶ್ರೀರಾಮರು ಸೀತೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿಲ್ಲ. ಸೀತೆಯೇ ಲಕ್ಷ್ಮಣನಲ್ಲಿ ಸಂಶಯ ವ್ಯಕ್ತಪಡಿಸಿ ಸಂಕಷ್ಟಕ್ಕೆ ಗುರಿಯಾದಳು. ಸ್ವ ಇಚ್ಚೆಯಿಂದ ಸೀತೆ ಅಗ್ನಿಪ್ರವೇಶ ಮಾಡಿರುವುದು ರಾಮಾಯಣದಲ್ಲಿದೆ. ಇಲ್ಲಿ ರಾಮರ ತಪ್ಪಿಲ್ಲ. ಯಾವುದೋ ನಾಟಕ, ಯಕ್ಷಗಾನದ ಪ್ರಸಂಗ ನೋಡಿ ಶ್ರೀರಾಮರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಪಾಶ್ಚಾತ್ಯ ಚಿಂತನೆಗಳ ಹೇರಿಕೆಯಿಂದ ದೇಶಿಯ ಮೌಲ್ಯಗಳನ್ನು ಕುಲಗೇಡಿಸಲಾಗಿದೆ. ಶ್ರೀ ಕೃಷ್ಣ ಕಳ್ಳನೆಂದು ನಿರೂಪಿಸುವುದೂ ಕೂಡ ರಾಮಾಯಣ, ಭಗವದ್ಗೀತೆಯ ಬಗ್ಗೆ ಇರುವ ಅಜ್ಞಾನದಿಂದ ಎಂದು ಸಂವಾದದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದರು.


ಜೀವನದಲ್ಲಿ ಒಮ್ಮೆಯಾದರೂ ರಾಮಾಯಣವನ್ನು ಮತ್ತು ಭಗವದ್ಗೀತೆಯನ್ನು ನೂರುಸಲ ಓದಬೇಕೆಂದರು. ಶ್ರೀರಾಮರು ಎಂದು ಬಹುವಚನದಲ್ಲಿಯೇ ಹೇಳಬೇಕು. ಲವಕುಶ ಎಂದು ಹೇಳದೆ ಕುಶಲವರೆಂದೇ ಹೇಳಬೇಕು. ಸರಸ್ವತಿ ಮಾತೆ ವಿದ್ಯಾ ಪೋಷಕಳು, ಶಿವನೇ ವಿದ್ಯೆಗೆ ಅಧಿಪತಿ ಎಂದು ಪ್ರತಿಪಾದಿಸಿದರು.


ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರಭಾವದ ಪ್ರತಿಬಿಂಬ ಗೋಷ್ಠಿಯಲ್ಲಿ ರಾಷ್ಟ್ರೀಯ ಪ್ರಜ್ಞೆ ಎಂಬ ವಿಷಯದಲ್ಲಿ ಸಹಾಯಕ ಪ್ರಾಧ್ಯಾಪಕ ಕರ್ನಾಟಕ ಕೇಂದ್ರೀಯ ವಿದ್ಯಾಲಯ ಕಲಬುರ್ಗಿಯ ಡಾ.ರೋಹಿಣಾಕ್ಷ ಶಿರ್ಲಾಲು ವಿಚಾರ ಮಂಡಿಸಿದರು.


ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ‌ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲರಲ್ಲಿಯೂ ರಾಷ್ಟ್ರಭಾವದ ಜಾಗರಣೆಯಾಗಬೇಕು. ನಮ್ಮತನ ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿಬಿಂಬಿಸಬೇಕೆಂದರು. ಪಾವಗಡ ಪ್ರಕಾಶ ರಾವ್ ಅವರನ್ನು ವಿದ್ಯಾರ್ಥಿಯೋರ್ವ ಮಾಡಿದ ಭಾವ ಚಿತ್ರದೊಂದಿಗೆ ಸನ್ಮಾನಿಸಿದರು.


ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮುಖ್ಯ ಅತಿಥಿಯಾಗಿ ಮಾತನಾಡಿ ಶುಭ ಹಾರೈಸಿದರು. ಡಾ.ಕಮಲ ಪ್ರಭಾಕರ ಭಟ್, ಕಲ್ಪನಾ ರಾನಡೆ, ಶ್ರೀಮತಿ ಸುಜಯ್, ಸಂಚಾಲಕ ವಸಂತ ಮಾಧವ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೃಷ್ಣ ಪ್ರಸಾದ ಕಾಯರ್ಕಟ್ಟೆ  ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಯತಿರಾಜ ಪೆರಾಜೆ ಸ್ವಾತಿಸಿದರು. ಪ್ರಣಮ್ಯ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top