ಬೊಲ್ಕಿನಡ್ಕದಲ್ಲಿ ಹಟ್ಟಿಗೆ ಬೆಂಕಿ: ಸಕಾಲಿಕ ಕಾರ್ಯಾಚರಣೆ, ಅಪಾಯದಿಂದ ಪಾರು

Upayuktha
0


ಪೆರ್ಲ: ಪಜ್ಜಾನ ಸಮೀಪದ ಬೊಲ್ಕಿನಡ್ಕದಲ್ಲಿ ದನ ಸಾಕಣೆಯ ಹಟ್ಟಿಯೊಂದಕ್ಕೆ ಬೆಂಕಿ ತಗುಲಿದ್ದು ಮನೆಯವರ ಮತ್ತು ಕಾಸರಗೋಡು ಅಗ್ನಿಶಾಮಕ ದಳದವರ ಸಕಾಲಿಕ ಕಾರ್ಯಚರಣೆಯಿಂದ ಅಪಾಯದಿಂದ ಪಾರಾಗಿದೆ. ಇಲ್ಲಿನ ಬೊಲ್ಕಿನಡ್ಕ ನಿವಾಸಿ ಜೇಮ್ಸ್ ಡಿಸೋಜರ ಮನೆ ಸಮೀಪ ಇರುವ ಹಟ್ಟಿಯ ಕೊಟ್ಟಿಗೆಗೆ ಮಧ್ಯರಾತ್ರಿ 3 ಗಂಟೆಗೆ ಬೆಂಕಿ ತಗುಲಿದ್ದು ದನ ಕರುಗಳ ಅರಚಾಟದಿಂದ ಮನೆಯವರ ಅರಿವಿಗೆ ಬಂದಿದ್ದು ತಕ್ಷಣ ಸಾಹಸಿಕ ರೀತಿಯಲ್ಲಿ ಜಾನುವಾರುಗಳನ್ನು ಹಟ್ಟಿಯೊಳಗಿನಿಂದ ತೆರವುಗೊಳಿಸಲಾಯಿತು.


ಹಟ್ಟಿಯ ಮಾಡಿನಲ್ಲಿ ಸಂಗ್ರಹಿಸಿಟ್ಟಿದ್ದ ಬೈ ಹುಲ್ಲಿಗೆ ಬೆಂಕಿ ತಗುಲಿದ್ದು ಶಾರ್ಟ್ ಸಕ್ಯೂಟಿನಿಂದ ದುರಂತ ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. ಕಾಸರಗೋಡಿನ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಸಹಕರಿಸಿತು. ಸುಮಾರು 3 ಲಕ್ಷ ರೂಗಳ ನಾಶ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top