ವಿದ್ವತ್ ಪ್ರತಿಭಾನ್ವೇಷಣೆ ಪರೀಕ್ಷೆಗೆ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸ್ಪಂದನೆ

Upayuktha
0

ವೃತ್ತಿ ಮಾರ್ಗದರ್ಶನದ ಕುರಿತು ಪೋಷಕರಿಗೂ ಮಾಹಿತಿ




ಬೆಳ್ತಂಗಡಿ: ವಿದ್ವತ್ ಪಿಯು ಕಾಲೇಜು ವತಿಯಿಂದ ಪ್ರಸ್ತುತ 10ನೇ ತರಗತಿಯಲ್ಲಿ ಅಧ್ಯಯನ ನಡೆಸುತ್ತಿಯವ ವಿದ್ಯಾರ್ಥಿಗಳಿಗಾಗಿ ಮಾ.8 ರಂದು ರವಿವಾರ ಆಯೋಜಿಸಿದ್ದ ಪ್ರತಿಭಾನ್ವೇಷಣೆ ಪರೀಕ್ಷೆ (Talent Test) ಹಾಗೂ ವೃತ್ತಿ ಮಾರ್ಗದರ್ಶನ ಶಿಬಿರಕ್ಕೆ ವ್ಯಾಪಕ ಸ್ಪಂದನೆ ದೊರೆತಿದೆ.


ಮಾ.8 ರಂದು ಬೆಳಗ್ಗೆ 10 ಗಂಟೆಗೆ ಆರಂಭಗೊಂಡ ಪರೀಕ್ಷೆಗೆ ಬೆಳ್ತಂಗಡಿ ತಾಲೂಕಿನ ಆಂಗ್ಲಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಗಳಿಂದ (ಕನ್ನಡ ಮಾಧ್ಯಮ, ಸಿಬಿಎಸ್ಇ, ಸ್ಟೇಟ್, ಐಸಿಎಸ್ಇ) ವಿಭಾಗ 10 ನೇ ತರಗತಿ ವಿದ್ಯಾರ್ಥಿಗಳು ಸುಮಾರು 150 ಕ್ಕೂ ಅಧಿಕ ಮಂದಿ ಬಹಳ ಉತ್ಸುಕತೆಯಿಂದ ಮುಂಜಾನೆಯೇ ಪರೀಕ್ಷೆಗೆ ಹಾಜರಾದರು.


10ನೇ ತರಗತಿಯ ಬಳಿಕ ಮುಂದೇನು?” ಎಂಬ ಪ್ರಶ್ನೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಸಾಮಾನ್ಯವಾಗಿ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಸರಿಯಾದ ಮಾರ್ಗದರ್ಶನ ನೀಡುವ ಉದ್ದೇಶದಿಂದ ವಿದ್ವತ್ ಪಿಯು ಕಾಲೇಜು ಗುರುವಾಯನಕೆರೆ ಕ್ಯಾಂಪಸ್ ನಲ್ಲಿ ಮಾರ್ಚ್ 8ರಿಂದ ಮಾರ್ಚ್ 11ರವರೆಗೆ ಪ್ರತಿದಿನ ಬೆಳಗ್ಗೆ 10.00 ರಿಂದ 11.10 ರವರೆಗೆ ಹಾಗೂ ಮಧ್ಯಾಹ್ನ 2.30 ರಿಂದ 3.40 ರವರೆಗೆ ಪರೀಕ್ಷೆ ಆಯೋಜಿಸಲಾಗಿದೆ.


ಪರೀಕ್ಷೆಗೆ ಪ್ರವೇಶ ಸಂಪೂರ್ಣ ಉಚಿತವಾಗಿದೆ. ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳು (Multiple Choice Questions) ಇರಲಿದ್ದು, ವಿಜ್ಞಾನ (Science) ವಿಭಾಗದಿಂದ 30 ಪ್ರಶ್ನೆಗಳು ಹಾಗೂ ಗಣಿತ (Mathematics) ವಿಭಾಗದಿಂದ 30 ಪ್ರಶ್ನೆಗಳು, ಒಟ್ಟು 60 ಪ್ರಶ್ನೆಗಳಿರಲಿವೆ. ಪರೀಕ್ಷೆಯ ಅವಧಿ 70 ನಿಮಿಷಗಳು ಆಗಿರುತ್ತದೆ.


ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ವಿಶೇಷ ಬಹುಮಾನವಾಗಿ ಲ್ಯಾಪ್‌ಟಾಪ್, ಗಮನಾರ್ಹ ಸಾಧನೆ ಮಾಡಿದ ವಿಜೇತರಿಗೆ ಟ್ಯಾಬ್‌ಗಳು ಬಹುಮಾನವಾಗಿ ನೀಡಲಾಗುತ್ತದೆ. ಜೊತೆಗೆ, ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪಿಯು ದಾಖಲಾತಿ ಸಂಪೂರ್ಣ ಉಚಿತವಾಗಿದ್ದು, ಶೇಖಡಾ 75 ಕ್ಕಿಂತ ಅಧಿಕ ಹಾಗೂ ಶೇಖಡಾ 50 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪಿಯು ದಾಖಲಾತಿಯಲ್ಲಿ ವಿಶೇಷ ರಿಯಾಯಿತಿ ನೀಡಲು ವಿದ್ವತ್ ಪಿಯು ಕಾಲೇಜು ಮುಂದಾಗಿದೆ.


ಇದೇ ವೇಳೆ 10 ನೇ ತರಗತಿ ಬಳಿಕ ಯಾವೆಲ್ಲ ಆಯ್ಕೆಗಳು ವಿದ್ಯಾರ್ಥಿಗಳ ಮುಂದಿದೆ ಹಾಗೂ ವಿದ್ವತ್ ಕಾಲೇಜಿನಿಂದ ಒದಗಿಸುವ ವೃತ್ತಿ ಮಾರ್ಗದರ್ಶನ ಶಿಬಿರದ ಕುರಿತು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ್ ಮಂಡಗಳಲೆ ಮಾಹಿತಿ, ಮಾರ್ಗದರ್ಶನ ನೀಡಿದರು. 


ಈ ವೇಳೆ ಸಂಸ್ಥೆಯ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ, ಪ್ರಾಂಶುಪಾಲರಾದ ಹರೀಶ್ ಕೆ.ಆರ್. ಸಹಿತ ಉಪನ್ಯಾಸಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top