ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಈದುಲ್ ಫಿತ್ರ್ ಆಚರಣೆ

Upayuktha
0


ಮಂಗಳೂರು: ವಳಚ್ಚಿಲ್‌ನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. 


ವೈದ್ಯಕೀಯ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಕರಾವಳಿಯ ಕೊಡುಗೆ ಅನನ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಯು.ಟಿ. ಇಫ್ತಿಕರ್ ಫರೀದ್ ಎಂದರು. 


ವಳಚ್ಚಿಲ್‌ನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಈದುಲ್ ಫಿತ್ರ್  ಹಬ್ಬದ ಪ್ರಯುಕ್ತ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.


ಎಕ್ಸ್‌ಪರ್ಟ್ ಒಂದು ಶಿಸ್ತು ಬದ್ಧ ಕಾಲೇಜು. ಇಲ್ಲಿ ಕಲಿಯುವುದೇ ವಿದ್ಯಾರ್ಥಿಗಳ ಭಾಗ್ಯ. ದೇಶದ ವೈದ್ಯಕೀಯ ಕಾಲೇಜುಗಳಲ್ಲಿ ಶೇ. 50 ರಷ್ಟು ಎಕ್ಸ್‌ಪರ್ಟ್ ವಿದ್ಯಾರ್ಥಿಗಳು ಇರುವುದು ಅಸಾಮಾನ್ಯ ಸಾಧನೆ ಎಂದವರು ಮೆಚ್ಚುಗೆ ಸೂಚಿಸಿದರು.


ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಧೆಗಳ ಅಧ್ಯಕ್ಷ ಪ್ರೊ ನರೇಂದ್ರ ಎಲ್. ನಾಯಕ್ ಅವರು ಮಾತನಾಡಿ, ನಮ್ಮ ತೃಪ್ತಿಗೆ ಧರ್ಮವಿದೆಯೇ ಹೊರತು ಅನ್ಯರಿಗೆ ಕೇಡು ಮಾಡಲು ಧರ್ಮ ಬಳಸಬಾರದು ಎಂದರು.  ಪ್ರತಿಯೊಬ್ಬರೂ  ಧರ್ಮವನ್ನು ಪರಸ್ಪರ ಗೌರವಿಸಿ ಬದುಕಬೇಕು. ಉತ್ತಮ ಒಗ್ಗಟ್ಟು ಯಾವುದೇ ಹಬ್ಬದ ಆಶಯವಾಗಿರಬೇಕು ಎಂದು ಅವರು ಹೇಳಿದರು.


ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್. ನಾಯಕ್, ವಾಸ್ತು ಶಿಲ್ಪಿ ದೀಪಿಕಾ ಎ. ನಾಯಕ್, ಟ್ರಸ್ಟಿ ಉಸ್ತಾದ್ ರಫೀಕ್ ಖಾನ್, ಅರ್ಕುಳ ಗ್ರಾಮ ಪಂಚಾಯತ್ ಅಧ್ಯಕ್ಷ ಯಾಸಿನ್, ಉಪ ಪ್ರಾಂಶುಪಾಲೆ(ಆಡಳಿತ) ಧೃತಿ ವಿ ಹೆಗ್ಡೆ, ಕೋಚಿಂಗ್ ಮುಖ್ಯಸ್ಥ ಗುರುದತ್ ಎನ್, ಕ್ಯಾಂಪಸ್ ನಿವಾಸಿ ಮಾರ್ಗದರ್ಶಕಿ  ಅನಿತಾ ಪಿ. ಶೆಟ್ಟಿ, ಕಾರ್ಯಕ್ರಮ ನಿರ್ದೇಶಕ ಶಿವಪ್ಪ ಎಸ್. ಪಿ. ಉಪಸ್ಥಿತರಿದ್ದರು.


ಉಪಪ್ರಾಂಶುಪಾಲ(ಶೈಕ್ಷಣಿಕ) ಸುಬ್ರಹ್ಮಣ್ಯ ಉಡುಪ ಸ್ವಾಗತಿಸಿದರು. ವಿದ್ಯಾರ್ಥಿನಿ ಯಶಿತಾ ಯು. ರಾಜ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಬ್ಬದ ಅಂಗವಾಗಿ ವಿಶೇಷ ಬಿರಿಯಾನಿ ಭೋಜನವನ್ನು ವಿದ್ಯಾರ್ಥಿಗಳು ಸವಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top