ಭಾರತದಲ್ಲಿ ಇವಿ (EV) ಸ್ವೀಕೃತಿ: ಆರ್ಥಿಕತೆಗೂ ಮಾನಸಿಕತೆಗೂ ತಾಕಲಾಟ

Upayuktha
0


ಮುಂಬಯಿ: ವಿದ್ಯುತ್ ಚಾಲಿತ ವಾಹನಗಳು (EVs) ಭವಿಷ್ಯದ ಸಂಚಾರ ವ್ಯವಸ್ಥೆಯಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿವೆ. ಇದಕ್ಕೆ ಸಮರ್ಥ ಕಾರಣಗಳೂ ಇವೆ. ಇವು ಶಬ್ದ ಕಡಿಮೆ, ಪರಿಸರ ಸ್ನೇಹಿ ಹಾಗೂ ಸಂಪ್ರದಾಯಿಕ ಇಂಧನ ಆಧಾರಿತ (ICE) ವಾಹನಗಳಿಗಿಂತ ಬಳಸಲು ಕಡಿಮೆ ವೆಚ್ಚದವು. ಇಂಧನ ಖರ್ಚಿನ ಇಳಿಕೆ, ನಿರ್ವಹಣಾ ವೆಚ್ಚದ ಕಡಿತ ಹಾಗೂ ಸರ್ಕಾರದ ನೀತಿ ಬೆಂಬಲ— ಎಲ್ಲವೂ ಸೇರಿ EVಗಳಿಗೆ ಬಲವಾದ ಆರ್ಥಿಕ ನೆಲೆ ಒದಗಿಸುತ್ತವೆ.


ಆದರೂ, ಈ ಎಲ್ಲಾ ಲಾಭಗಳಿದ್ದರೂ ಭಾರತದಲ್ಲಿ ಹಲವಾರು ಗ್ರಾಹಕರು EVಗಳಿಗೆ ಬದಲಾಯಿಸಲು ಹಿಂಜರಿಯುತ್ತಿದ್ದಾರೆ. ಆರ್ಥಿಕ ಲಾಜಿಕ್ ಮತ್ತು ಗ್ರಾಹಕ ಮನೋಭಾವಗಳ ನಡುವಿನ ಈ ವ್ಯತ್ಯಾಸವೇ ಇಂದಿನ EV ಸ್ವೀಕೃತಿಯ ಪ್ರಮುಖ ಕಥನವಾಗಿದೆ.


ಆರ್ಥಿಕ ಲಾಭ ಸ್ಪಷ್ಟವಾಗಿದೆ

ಪ್ರತಿ ಕಿಲೋಮೀಟರ್‌ಗೆ ಖರ್ಚಿನ ದೃಷ್ಟಿಯಿಂದ EVಗಳು ಈಗಾಗಲೇ ಮೇಲುಗೈ ಸಾಧಿಸಿವೆ. ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳಿಗಿಂತ ಇವು ಬಹಳ ಕಡಿಮೆ ವೆಚ್ಚದಲ್ಲಿ ಓಡುತ್ತವೆ. ಕಡಿಮೆ ಚಲಿಸುವ ಭಾಗಗಳು, ಎಂಜಿನ್ ಆಯಿಲ್ ಬದಲಾವಣೆಯ ಅಗತ್ಯವಿಲ್ಲದಿರುವುದು ಹಾಗೂ ಸರಳ ಯಾಂತ್ರಿಕ ರಚನೆ—ಇವುಗಳೆಲ್ಲ ನಿರ್ವಹಣಾ ವೆಚ್ಚವನ್ನು ಇಳಿಸುತ್ತವೆ.


ದೀರ್ಘಾವಧಿಯಲ್ಲಿ ಒಟ್ಟು ಸ್ವಾಮ್ಯ ವೆಚ್ಚ (Total Cost of Ownership - TCO) ಸ್ಪಷ್ಟವಾಗಿ EVಗಳ ಪರವಾಗಿದೆ. ವಿಶೇಷವಾಗಿ ಫ್ಲೀಟ್ ಆಪರೇಟರ್‌ಗಳು ಹಾಗೂ ಹೆಚ್ಚು ಬಳಸುವ ವಲಯಗಳಲ್ಲಿ ಇದನ್ನು ವೇಗವಾಗಿ ಅಳವಡಿಸಿಕೊಂಡಿರುವುದು ಇದರ ಸಾಕ್ಷಿ.


ಆದರೆ, ವೈಯಕ್ತಿಕ ಗ್ರಾಹಕರ ನಿರ್ಧಾರಗಳಲ್ಲಿ ಆರ್ಥಿಕ ಲೆಕ್ಕಾಚಾರ ಮಾತ್ರ ಸಾಕಾಗುವುದಿಲ್ಲ.



ಹಿಂಜರಿಕೆಯ ಮನಸ್ಥಿತಿ

EVಗಳತ್ತ ಇರುವ ಹಿಂಜರಿಕೆ ತಿಳುವಳಿಕೆಯ ಕೊರತೆಯಲ್ಲ, ಬದಲಾವಣೆಯ ಬಗ್ಗೆ ಸಹಜ ವಿರೋಧವಾಗಿದೆ. ವಾಹನ ಖರೀದಿ ಸಂಪೂರ್ಣ ಆರ್ಥಿಕ ನಿರ್ಧಾರವಲ್ಲ; ಅದು ಭಾವನಾತ್ಮಕ ನಿರ್ಧಾರವೂ ಹೌದು—ನಂಬಿಕೆ, ಪರಿಚಿತತೆ ಹಾಗೂ ಅಪಾಯದ ಭಾವನೆಗಳ ಮೇಲೆ ಅವಲಂಬಿತವಾಗಿದೆ.


ಅನೇಕ ಗ್ರಾಹಕರಿಗೆ EVಗಳು ಇನ್ನೂ ಹೊಸದು. ಬ್ಯಾಟರಿ ಆಯುಷ್ಯ, ಮರುಮಾರಾಟ ಮೌಲ್ಯ ಹಾಗೂ ದೀರ್ಘಾವಧಿ ನಂಬಿಕೆ ಬಗ್ಗೆ ಪ್ರಶ್ನೆಗಳು ಇವೆ. ಈ ಅನಿಶ್ಚಿತತೆಯ ಭಯವು, ಆರ್ಥಿಕ ಲಾಭ ಸ್ಪಷ್ಟವಾಗಿದ್ದರೂ, ನಿರ್ಧಾರವನ್ನು ಮುಂದೂಡುತ್ತದೆ.


ಇದು ವಾಸ್ತವಿಕತೆಯನ್ನು ಮೀರಿದ ಭಾವನೆಯ ಉದಾಹರಣೆ.


ಮೂಲಸೌಕರ್ಯದ ಪ್ರಶ್ನೆ

ಚಾರ್ಜಿಂಗ್ ಮೂಲಸೌಕರ್ಯವು ಪ್ರಮುಖ ಆತಂಕಗಳಲ್ಲಿ ಒಂದಾಗಿದೆ. ಭಾರತದಲ್ಲಿ ಇದರ ವಿಸ್ತರಣೆ ನಡೆಯುತ್ತಿದ್ದರೂ, ಇದು ಇನ್ನೂ ಪೆಟ್ರೋಲ್ ಬಂಕ್‌ಗಳಷ್ಟು ವ್ಯಾಪಕವಾಗಿಲ್ಲ ಅಥವಾ ಸುಲಭವಾಗಿ ಲಭ್ಯವಿಲ್ಲ.


ಇದು ಕೇವಲ ಲಭ್ಯತೆಯ ವಿಷಯವಲ್ಲ, ನಂಬಿಕೆಯಾಗಿಯೂ ಇದೆ. ಚಾರ್ಜರ್ ಕಾರ್ಯನಿರ್ವಹಿಸುತ್ತ ದೆಯೇ? ಅದು ಖಾಲಿಯಿದೆಯೇ? ಚಾರ್ಜ್ ಮಾಡಲು ಎಷ್ಟು ಸಮಯ ಬೇಕು? ಇಂತಹ ಪ್ರಶ್ನೆಗಳು ಗ್ರಾಹಕರಲ್ಲಿ ಅನುಮಾನ ಮೂಡಿಸುತ್ತವೆ.


ಚಾರ್ಜಿಂಗ್ ಪ್ರಕ್ರಿಯೆ ಇಂಧನ ತುಂಬುವಷ್ಟು ಸುಲಭ ಹಾಗೂ ನಿರಂತರವಾಗುವವರೆಗೂ ಈ ಹಿಂಜರಿಕೆ ಮುಂದುವರಿಯುತ್ತದೆ.



ಪ್ರಾರಂಭಿಕ ವೆಚ್ಚದ ಅಡೆತಡೆ

EVಗಳನ್ನು ಬಳಸುವುದು ಕಡಿಮೆ ವೆಚ್ಚದ್ದಾದರೂ, ಆರಂಭಿಕ ಬೆಲೆ ಸಾಮಾನ್ಯವಾಗಿ ಹೆಚ್ಚು. ಸಬ್ಸಿಡಿ ಇದ್ದರೂ, ಬೆಲೆ ಸಂವೇದನಾಶೀಲ ಗ್ರಾಹಕರು ಹೆಚ್ಚಿನ ಆರಂಭಿಕ ಹೂಡಿಕೆಗೆ ಹಿಂದೇಟು ಹಾಕುತ್ತಾರೆ.


ಬಹುತೇಕರು ದೀರ್ಘಾವಧಿಯ ಲಾಭಕ್ಕಿಂತ ತಕ್ಷಣದ ಖರ್ಚಿನ ಮೇಲೆ- ವಿಶೇಷವಾಗಿ EMI ಆಧಾರಿತ ಖರೀದಿಗಳಿಗೆ ಹೆಚ್ಚು ಗಮನ ಕೊಡುತ್ತಾರೆ.


ಈ ಅಂತರವನ್ನು ಕಡಿಮೆ ಮಾಡಲು ಲೀಸಿಂಗ್ ಮಾದರಿ, ಬ್ಯಾಟರಿ-ಆಸ್-ಎ-ಸರ್ವೀಸ್ (BaaS) ಹಾಗೂ ಹೊಂದಾಣಿಕೆಯ ಮಾಲೀಕತ್ವ ವ್ಯವಸ್ಥೆಗಳಂತಹ ನವೀನ ಹಣಕಾಸು ಪರಿಹಾರಗಳು ಅಗತ್ಯ.



ನಂಬಿಕೆಯೇ ಮುಖ್ಯ ಕೊರತೆ


EV ಸ್ವೀಕೃತಿಯ ಮೂಲ ಪ್ರಶ್ನೆ ನಂಬಿಕೆಯಾಗಿದೆ. 


ಗ್ರಾಹಕರಿಗೆ ಈ ವಿಚಾರಗಳಲ್ಲಿ ಖಾತರಿ ಬೇಕಾಗಿದೆ:

ವಾಹನವು ದೀರ್ಘಾವಧಿಯಲ್ಲಿ ವಿಶ್ವಾಸಾರ್ಹವಾಗಿರುತ್ತದೆ.

ಸೇವಾ ಸಹಾಯ ಸುಲಭವಾಗಿ ಲಭ್ಯವಾಗುತ್ತದೆ.

EV ಪರಿಸರ ವ್ಯವಸ್ಥೆ ದೈನಂದಿನ ಅಗತ್ಯಗಳನ್ನು ಪೂರೈಸಲು ಸಮರ್ಥವಾಗಿದೆ.


ಫ್ಲೀಟ್ ಆಪರೇಟರ್‌ಗಳು ಆರ್ಥಿಕ ಲಾಭಕ್ಕಾಗಿ EVಗಳನ್ನು ಅಳವಡಿಸಿಕೊಂಡಿದ್ದಾರೆ, ಆದರೆ ಅವರ ನಿರಂತರ ಬಳಕೆ ನಂಬಿಕೆ ಹಾಗೂ ಸ್ಥಿರ ಕಾರ್ಯಕ್ಷಮತೆಯ ಮೇಲೆ ಅವಲಂಬಿತವಾಗಿದೆ.

ನಂಬಿಕೆ ಮಾತಿನಿಂದಲ್ಲ- ಅನುಭವದಿಂದ ನಿರ್ಮಾಣವಾಗುತ್ತದೆ.



ಉದ್ಯಮ ಮತ್ತು ನೀತಿಯ ಪಾತ್ರ

ಈ ಹಿಂಜರಿಕೆಯನ್ನು ನಿವಾರಿಸಲು ಎಲ್ಲಾ ಹಂತಗಳಲ್ಲಿ ಸಂಯೋಜಿತ ಪ್ರಯತ್ನ ಅಗತ್ಯ.

ತಯಾರಕರು: ಬಳಕೆದಾರ ಸ್ನೇಹಿ ಹಾಗೂ ವಿಶ್ವಾಸಾರ್ಹ ವಾಹನಗಳ ಮೇಲೆ ಒತ್ತು

ಸೇವಾ ಜಾಲಗಳು: ಸುಲಭ ಹಾಗೂ ಪರಿಣಾಮಕಾರಿ ಸೇವೆ

ಚಾರ್ಜಿಂಗ್ ಮೂಲಸೌಕರ್ಯ: ವಿಸ್ತರಣೆ ಮತ್ತು ವಿಶ್ವಾಸಾರ್ಹತೆ


ಪಾರದರ್ಶಕತೆ ಕೂಡ ಮುಖ್ಯ. ಬ್ಯಾಟರಿ ಆರೋಗ್ಯ, ಬಾಳಿಕೆಯ ವೆಚ್ಚ ಹಾಗೂ ಮರುಮಾರಾಟ ಮೌಲ್ಯದ ಕುರಿತು ಸ್ಪಷ್ಟ ಮಾಹಿತಿ ನೀಡುವುದು ಗ್ರಾಹಕರ ಆತಂಕ ಕಡಿಮೆ ಮಾಡುತ್ತದೆ.


ನೀತಿಗಳು ಸಬ್ಸಿಡಿಗಳಷ್ಟೇ ಅಲ್ಲ, ದೀರ್ಘಾವಧಿಯ ವಿಶ್ವಾಸ ಬೆಳೆಸುವ ಪರಿಸರವನ್ನು ನಿರ್ಮಿಸಬೇಕು.


ಯುದ್ಧದ ಪರಿಣಾಮಗಳು

ಇರಾನ್–ಇಸ್ರೇಲ್–ಅಮೆರಿಕಾ ನಡುವಿನ ಉದ್ವಿಗ್ನತೆ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ. ಭಾರತವು ಇದನ್ನು ಈಗಾಗಲೇ ನಿರ್ವಹಿಸುತ್ತಿದ್ದರೂ, ದೀರ್ಘಕಾಲದ ಸಂಘರ್ಷ ಇಂಧನದ ಬೆಲೆ ಏರಿಕೆಗೆ ಕಾರಣವಾಗಬಹುದು.


ಇದು EVಗಳ ಆರ್ಥಿಕ ಲಾಭವನ್ನು ಇನ್ನಷ್ಟು ಬಲಪಡಿಸುತ್ತದೆ ಮತ್ತು ಆಮದು ತೈಲದ ಅವಲಂಬನೆ ಅಪಾಯಕರ ಎಂಬುದನ್ನು ಹೈಲೈಟ್ ಮಾಡುತ್ತದೆ.


ಈ ಹಿನ್ನೆಲೆಯಲ್ಲಿಯೇ EVಗಳು ಪರಿಸರ ಸ್ನೇಹಿ ಆಯ್ಕೆಯಷ್ಟೇ ಅಲ್ಲ, ಶಕ್ತಿಯ ಸುರಕ್ಷತೆಗೆ ಸಂಬಂಧಿಸಿದ ತಂತ್ರಜ್ಞಾನದ ಆಯ್ಕೆಯೂ ಆಗಿವೆ.


ಹಿಂಜರಿಕೆಯಿಂದ ಸ್ವೀಕೃತಿಯತ್ತ

ಭಾರತದ EV ಪ್ರಯಾಣವು ತಂತ್ರಜ್ಞಾನ ಅಥವಾ ವೆಚ್ಚದ ಪ್ರಶ್ನೆಯಲ್ಲ, ಇದು ವಿಶ್ವಾಸದ ಪ್ರಶ್ನೆ.


ಆರ್ಥಿಕ ಲಾಭ ಈಗಾಗಲೇ ಸ್ಪಷ್ಟವಾಗಿದೆ. ಮುಂದಿನ ಹಂತವು ಗ್ರಾಹಕರ ಅರಿವು ಮತ್ತು ಭಾವನೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದರ ಮೇಲೆ ಅವಲಂಬಿತವಾಗಿದೆ.


ಪ್ರತಿ ಉತ್ತಮ ಅನುಭವ, ಪ್ರತಿ ಯಶಸ್ವಿ ಚಾರ್ಜ್ ಹಾಗೂ ತೃಪ್ತ ಗ್ರಾಹಕರು ಈ ಬದಲಾವಣೆಗೆ ಕಾರಣವಾಗುತ್ತಾರೆ.


EVಗಳ ಲಾಭ ತಿಳಿದುಕೊಳ್ಳುವುದಷ್ಟೇ ಸಾಕಾಗುವುದಿಲ್ಲ, ಅದರ ಮೇಲೆ ನಂಬಿಕೆ ಬರುವಾಗಲೇ ಸ್ವೀಕೃತಿ ವೇಗವಾಗಿ ನಡೆಯುತ್ತದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top