ಸ್ವಾವಲಂಬಿ ಜೀವನಕ್ಕಾಗಿ ಕಂಪ್ಯೂಟರ್ ಜ್ಞಾನ ಅಗತ್ಯ: ಡಾ. ಸದಾನಂದ ಪೆರ್ಲ

Upayuktha
0

ಕಂಪ್ಯೂಟರ್ ಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ





ಕಲಬುರಗಿ: ಕೆಲವು ವರ್ಷಗಳ ಹಿಂದೆ ಸೀಮಿತ ಕ್ಷೇತ್ರಕ್ಕೆ ಮೀಸಲಾದ ಕಂಪ್ಯೂಟರ್ ಬಳಕೆ, ಪ್ರಸ್ತುತ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಿಗೆ ಅಗತ್ಯವಾಗಿದೆ. ಕಂಪ್ಯೂಟರ್ ಬಳಕೆ ಮಾಡುವುದರಿಂದ ಕೆಲಸದ ವೇಗ ಹೆಚ್ಚಳ, ಸಮಯದ ಉಳಿತಾಯ, ದಕ್ಷತೆ, ನಿಖರವಾಗಿ ಕೆಲಸವಾಗಲು ಸಾಧ್ಯವಾಗುತ್ತದೆ. ಕಂಪ್ಯೂಟ‍ರ್ ಜ್ಞಾನದಿಂದ ವಿಫುಲವಾದ ಉದ್ಯೋಗಾವಕಾಶಗಳಿರುವುದರಿಂದ ಉದ್ಯೋಗ ದೊರೆತು ಸ್ವಾವಲಂಬಿ ಜೀವನ ಸಾಗಿಸಲು ಕಂಪ್ಯೂಟರ್ ಶಿಕ್ಷಣ ಅಗತ್ಯವಾಗಿದೆ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಅಭಿಪ್ರಾಯಪಟ್ಟರು.


ಕಲಬುರಗಿಯ ಖಾದ್ರಿ ಚೌಕ್‌ನ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಸಂಸ್ಥೆ’ಯಲ್ಲಿ ಭಾನುವಾರ ಜರಗಿದ ಫೆಬ್ರವರಿ ಬ್ಯಾಚ್‌ನ ವಿದ್ಯ್ಯಾರ್ಥಿಗಳಿಗೆ ಪ್ರಮಾಣಪತ್ರಗಳ ವಿತರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಮೂಲಕ ಅಸ್ಲಾಂ ಶೇಕ್ ಈ ಭಾಗದ ಯುವಜನರಿಗೆ ಉದ್ಯೋಗದ ಅವಕಾಶ ಒದಗಿಸಿಕೊಡಲು ಪ್ರೇರಣೆ ನೀಡಿದ್ದಾರೆ. ಭಾರತದಲ್ಲಿ 25 ವರ್ಷಕ್ಕಿಂತ ಕಡಿಮೆ ವಯೋಮಾನದ  55ಕೋಟಿಯಷ್ಟು ಯುವಕರಿದ್ದಾರೆ. ಯುವಭಾರತದ ಯುವಕರಿಂದ ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ. ಅದಕ್ಕೆ ಯುವಕರು  ಕಂಪ್ಯೂಟರ್ ಶಿಕ್ಷಣ ಹೊಂದುವುದು ಅಗತ್ಯ ಕೂಡಾ ಎಂದರು.


ಸಂಸ್ಥೆಯ ಮುಖ್ಯಸ್ಥ ಅಸ್ಲಾಂ ಶೇಖ್ ಮಾತನಾಡಿ, ಕಂಪ್ಯೂಟರ್ ಜ್ಞಾನವಿಲ್ಲದಿದ್ದರೆ ಅನಕ್ಷರಸ್ಥ ಎಂಬ ಸ್ಥಿತಿಗೆ ಬಂದಿರುವುದು ಕಂಪ್ಯೂಟರ್‌ನ ಮಹತ್ವವವನ್ನು ಸಾರುತ್ತದೆ. ವಿದ್ಯಾರ್ಥಿಗಳು ಯಾವುದೇ ಪದವಿ, ಕೋರ್ಸ್ ಮಾಡುವುದರ ಜೊತೆಗೆ ಕಂಪ್ಯೂಟರ್ ಶಿಕ್ಷಣ ಪಡೆಯಬೇಕು. ಇದರಿಂದ ನಿಮಗೆ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ಕಂಪ್ಯೂಟರ್ ಇಲ್ಲದ ಕ್ಷೇತ್ರ ನಾವಿಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಕಳೆದ 14 ವರ್ಷಗಳಲ್ಲಿ ನಮ್ಮ ಸಂಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳು ತರಬೇತಿ ಪಡೆದು, ಪ್ರಸ್ತುತವಾಗಿ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ, ಸ್ವಾವಲಂಬಿ ಜೀವನ ಸಾಗಿಸುತ್ತಿರುವ ವಿದ್ಯಾರ್ಥಿಗಳು ಸಂಸ್ಥೆ ಹಾಗೂ ಕಲಿಕಾ ಗುಣಮಟ್ಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಉಪನ್ಯಾಸಕ ಎಚ್.ಬಿ. ಪಾಟೀಲ್, ಮುಖಂಡ ಓಂಕಾರ ವಠಾರ, ಸಮಾಜ ಸೇವಕ ರಾಜಶೇಖರ ಎಸ್. ಮಾತೋಳಿ ಮಾತನಾಡಿದರು.


ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪಾ ಎಸ್.ಬಿರಾದಾರ, ತರಬೇತಿ ಸಂಸ್ಥೆಯ ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ಸ್ನೇಹಾ ಚೌಹಾಣ, ರುಕ್ಸಾನಾ ಪಟೇಲ್ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯ 224 ಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top