ಗಮಕ ವಿದ್ವತ್ ಪರೀಕ್ಷೆಯಲ್ಲಿ ಚಿಕ್ಕಮಗಳೂರಿಗೆ ಮೂರನೆ ರ್‍ಯಾಂಕ್

Upayuktha
0



ಕೊಪ್ಪ: ಕರ್ನಾಟಕ ಗಮಕ ಕಲಾ ಪರಿಷತ್ತು, ಬೆಂಗಳೂರು ಇದರ ವತಿಯಿಂದ ನಡೆಸಿರುವ 2025-26ನೇ ವರ್ಷದ ಗಮಕ ವಿದ್ವತ್ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ವೈಕುಂಠಪುರದ ಶ್ರೀಮತಿ ಕಮಲಾಕ್ಷಿ ರಮೇಶ್ (ಕಲಾ ರಮೇಶ್) ಇವರು ರಾಜ್ಯಕ್ಕೆ 3ನೇ ರ್‍ಯಾಂಕ್ ಪಡೆದು ಶೃಂಗೇರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.


ಶ್ರೀಮತಿ ಕಮಲಾಕ್ಷಿ ರಮೇಶ್‌ರವರು ಶಾಸ್ತ್ರೀಯ ಹಾಗು ಸುಗಮ ಸಂಗೀತ ಕಲಾವಿದರೂ ಆಗಿದ್ದು, ಉತ್ತಮ ಹಾಡುಗಾರರಾಗಿ ಪ್ರಸಿದ್ಧರಾಗಿದ್ದಾರೆ.  ಹತ್ತಿಯನ್ನು ಬಳಸಿ ಹಾರ ಮಾಡುವ ಕಲೆ, ಹೂ ತೋಟದ ಬೆಳೆಸುವುದು, ರಂಗೋಲಿ ಕಲೆಗಳಲ್ಲಿ ನಿಷ್ಣಾತರಾಗಿದ್ದಾರೆ. ಕಮಲಾಕ್ಷಿ ರಮೇಶ್‌ರವರು ಪ್ರಸ್ತುತ ಶೃಂಗೇರಿ ಸುತ್ತಲಿನ ಅನೇಕ ಶಾಲೆಗಳಲ್ಲಿ ಸಂಗೀತ ಪಾಠ ಮಾಡುತ್ತಿದ್ದಾರೆ.


ರಾಜ್ಯಕ್ಕೆ ಮೂರನೇ ರ್‍ಯಾಂಕ್ ಪಡೆದ ಶ್ರೀಮತಿ ಕಮಲಾಕ್ಷಿ ರಮೇಶ್‌ರವರು, ಗಮಕವನ್ನು, ಗಮಕ ವಿದೂಷಿ ಶ್ರೀಮತಿ ಗಾಯತ್ರಿ ನಾಗರಾಜ್, ಉಂಟೊಳ್ಳಿ ಇವರ ಬಳಿ ಅಭ್ಯಾಸ ಮಾಡಿದ್ದಾರೆ.


ಗಮಕ ವಿದ್ವತ್ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶ್ರೀಮತಿ ಶಾರದಾಂಬಾ ಹಾಗೂ ಶ್ರೀಮತಿ ಕಸ್ತೂರಿ ನಾರಾಯಣ್‌ರವರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಹೊಂದಿದ್ದರೆ, ಅಗಳಗಂಡಿ ಸಹೋದರಿಯರಾದ ಶ್ರೀಮತಿ ವೀಣಾ, ಶ್ರೀಮತಿ ಮೀನಾಕ್ಷಿ, ಶ್ರೀಮತಿ ಸುನೀಲಾ, ಶ್ರೀಮತಿ ಯಶೋದಾ ಹಾಗೂ ಶ್ರೀಮತಿ ಅಶ್ವಿನಿ ಜಿ.ವಿ. ಪ್ರಥಮ ಸ್ಥಾನದೊಂದಿಗೆ ತೇರ್ಗಡೆಯಾಗಿದ್ದಾರೆ. ಅಗಳಗಂಡಿಯ ಶ್ರೀಮತಿ ರಜಿನಿ ಅವರು ಗಮಕ ಪ್ರೌಢ ಪರೀಕ್ಷೆಯಲ್ಲಿ ಪ್ರಥಮಸ್ಥಾನ ಪಡೆದಿದ್ದಾರೆ.


ಗಮಕ ವಿದ್ವತ್‌ನ‌ಲ್ಲಿ ಪ್ರಥಮ ರ‌್ಯಾಂಕ್‌‌ನ್ನು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಆಶಾ ಕೆ.ಎನ್. ಹಾಗು ದ್ವಿತೀಯ  ರ್‍ಯಾಂಕ್ ಅನ್ನು ಮೈಸೂರಿನ ಸುಬ್ಬುಲಕ್ಷ್ಮಿ ಎಂ.ಎಸ್. ರವರುಗಳು ಪಡೆದಿರುತ್ತಾರೆ.


ಕರ್ನಾಟಕ ಗಮಕ ಕಲಾ ಪರಿಷತ್ತು, ಬೆಂಗಳೂರು ನೆಡೆಸುವ ಗಮಕ ಕೋರ್ಸ್‌ ಮೂರು ವರ್ಷಗಳದ್ದಾಗಿದ್ದು, ಮೊದಲ ವರ್ಷವನ್ನು 'ಗಮಕ ಪ್ರಥಮ' ಎಂದೂ, ಎರಡನೆ ವರ್ಷವನ್ನು 'ಗಮಕ ಪ್ರೌಢ' ಎಂದೂ ಹಾಗೂ ಮೋರನೇ ಮತ್ತು ಅಂತಿಮ ವರ್ಷವನ್ನು 'ಗಮಕ ವಿದ್ವತ್' ಎಂದೂ ಪರೀಕ್ಷಾ ಗ್ರೇಡ್ ಹೊಂದಿರುತ್ತದೆ.


ಕರ್ನಾಟಕ ಗಮಕ ಕಲಾ ಪರಿಷತ್ತು ನಡೆಸಿದ 2025-26 ರ ಪ್ರಥಮ, ಪ್ರೌಢ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ.  ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಹಾಗೂ ತರಬೇತಿ ನೀಡಿದ ಎಲ್ಲ ಶಿಕ್ಷಕರಿಗೂ, ಪರೀಕ್ಷಕರಿಗೂ ಅಭಿನಂದನೆಗಳನ್ನು ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಕರ್ನಾಟಕ ಕಲಾಶ್ರೀ. ಡಾ.ಎ.ವಿ.ಪ್ರಸನ್ನರವರು ತಿಳಿಸಿದ್ದಾರೆ.

  

ವರದಿ: ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top