ಗೂಡಂಗಡಿಯ ನೆನಪುಗಳೇ ಸವಿನೆನಪಿನ ಪ್ರತಿ ಮಿಡಿತ

Upayuktha
0


ಚಿಕ್ಕ ವಯಸ್ಸಿನಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆದು ಬಂದ ಕಿರು ವಯಸ್ಸಿನ ಮಕ್ಕಳಿಗೆ ಅಜ್ಜನ ಗೂಡನಂಗಡಿ ಎಂಬುದು ಎಲ್ಲರ ಮನದಲ್ಲಿ ಆ ಅಂಗಡಿಯ ದೃಶ್ಯವೇ ಕಣ್ಣ ಮುಂದೆ ಓಡಾಡಿಬಿಡುತ್ತದೆ. ಒಂದು ಊರಿನಲ್ಲಿ ಒಂದಾದರು ಗೂಡಂಗಡಿಗಳ ಅಂಗಡಿಗಳು ಇದ್ದೇ ಇರುತ್ತಿತ್ತು. ಬೆಳಗ್ಗಿನ ಸಮಯ ಶಾಲೆಗೆ ಹೋಗಬೇಕಾದರೆ ಗೂಡನಂಗಡಿಯ ಬಾಗಿಲು ತೇರೆದಿದೆಯಾ? ಇಲ್ಲವಾ? ಎಂದು ನೋಡಿಕೊಂಡು ಹೋಗಿರುತ್ತೇವೆ. ಶಾಲೆಯಿಂದ ಮನೆಗೆ ಹೋಗಬೇಕಾದರೆ ಗೆಳತಿಯರ ಜೊತೆ ಸೇರಿಕೊಂಡು ಯಾವ ತಿಂಡಿ ತೆಗೆದುಕೊಳ್ಳುವುದು ಎಂದು ತೀರ್ಮಾನಿಸಿ ಗೂಡಂಗಡಿಗೆ(ಅಜ್ಜನ ಅಂಗಡಿ) ಕಾಲಿಡುತ್ತಿದ್ದೆವು. ಇಲ್ಲದ್ದಿದ್ದರೆ ಅಂಗಡಿಗೆ ಹೋಗಿ ಅದು ಬೇಕು ಇದು ಬೇಕು ಅಂತ ಚರ್ಚೆ ಮಾಡಿ ಯಾವುದಾದರೊಂದು ಚಾಕೊಲೇಟ್,ಮಿಠಾಯಿ, ಕಡಲೆ, ಚಿಕ್ಕದೊಂದು ಸ್ವೀಟ್ ಅನ್ನು ತೆಗೆದುಕೊಂಡು ತಿನ್ನುತ್ತಾ ಹೋಗುತಿದ್ದೆವು.ಸ್ನೇಹಿತರಲ್ಲಿ ಬಗೆ ಬಗೆಯ ತಿನಿಸುಗಳನ್ನು ತೆಗೆದುಕೊಂಡಿದ್ದರೆ, ಅದರಲ್ಲೂ ಸಮಪಾಲು ಮಾಡಿ ಹಂಚಿಕೊಂಡು ತಿನ್ನುತ್ತಿದ್ದೆವು.ಆದರೆ ಈಗ ಆ ನೆನಪುಗಳು ಮಾತ್ರ ಉಳಿದು ಬಿಟ್ಟಿದೆ. 


ಗೂಡಂಗಡಿಯಲ್ಲಿದ್ದ ಅಜ್ಜ ಮಾತ್ರ ದಿನಾಲೂ ಖುಷಿ ಖುಷಿಯಿಂದ ಶಾಲೆಯಲ್ಲಿ ಹೇಗೆ ನಡೆಯಿತು ಎಂದು ದಿನಾಲೂ ವಿಚಾರಿಸುತ್ತಿದ್ದರು. ಹಾಗೆಯೇ ಮುಗುಳು ನಕ್ಕು ಮಾತನಾಡಿಸುತಿದ್ದರು. ಆದರೆ ಈಗ ಅಪರೂಪವಾಗಿ ಊರುಗಳಲ್ಲಿ ಗೂಡಂಗಡಿಗಳು ಕಾಣಸಿಗುವುದನ್ನು ನಾವು ಕಾಣುತ್ತೇವೆ.ಈಗ ಎಲ್ಲಾ ದೊಡ್ಡ ದೊಡ್ಡದಾದ ಅಂಗಡಿಗಳು, ಹಣಕೊಟ್ಟರೆ ಮಾತ್ರ ಸಿಗುವಂತಹ ವಸ್ತುಗಳು, ಪರಿಚಯವಿದ್ದರೂ ಇಲ್ಲದಂತೆ ಮಾಡುವ ವ್ಯಕ್ತಿಗಳು ಕಾಣುತ್ತಾರೆ. ಗೂಡಂಗಡಿ ಎಂಬುದು ನಮ್ಮ ಜೀವನದಲ್ಲಿ ಕೇವಲ ಒಂದು ಸ್ಥಳವಲ್ಲ; ಅದು ಒಂದು ಅನುಭವ, ಒಂದು ಭಾವನೆಯ ಸಂಕೇತವಾಗಿದೆ. ಅಲ್ಲಿ ಕಳೆದ ಕ್ಷಣಗಳು ನಮ್ಮ ಮನಸ್ಸಿನಲ್ಲಿ ಸದಾ ಉಳಿಯುವ ಅಮೂಲ್ಯವಾದ ದಿನಗಳು. ಆ ನೆನಪುಗಳು ಯಾವತ್ತೂ ಮರೆಯಾಗುವುದಿಲ್ಲ. ಅವು ನಮ್ಮ ಬದುಕಿನ ಪ್ರತಿಯೊಂದು ಹಂತದಲ್ಲೂ ಸವಿನೆನಪಿನಂತೆ ಮಿಡಿಯುತ್ತಲೇ ಇರುತ್ತವೆ.


ಹೀಗಾಗಿ, ಗೂಡಂಗಡಿಯ ನೆನಪುಗಳು ನಮ್ಮ ಜೀವನದ ಒಂದು ಸುಂದರ ನೆನಪು. ಅವು ನಮ್ಮ ಮನಸ್ಸಿನ ಆಳದಲ್ಲಿ ನೆಲೆಸಿರುವ ಸಂತೋಷದ ಕ್ಷಣಗಳು. ಯಾವಾಗಲೂ ಅವುಗಳನ್ನು ನೆನೆಸಿಕೊಂಡರೆ, ನಮ್ಮ ಮುಖದಲ್ಲಿ ನಗು ಮೂಡುತ್ತದೆ ಮತ್ತು ಮನಸ್ಸು ಸಂತೋಷದಿಂದ ತುಂಬುತ್ತದೆ.


-ಚೈತನ್ಯ ಇಂದಬೆಟ್ಟು

ಪತ್ರಿಕೋದ್ಯಮ ವಿಭಾಗ

ಎಸ್ ಡಿ ಎಂ ಕಾಲೇಜು ಉಜಿರೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top