ರಕ್ತದಾನವೇ ಶ್ರೇಷ್ಟ ದಾನ: ಡಾ ಚೂಂತಾರು

Upayuktha
0


ಮಂಗಳೂರು: ಹವ್ಯಕ ಸಭಾ ಮಂಗಳೂರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಇಂದು (ಮಾ.15) ಶ್ರೀ ಭಾರತಿ ಕಾಲೇಜು ನಂತೂರು ಇಲ್ಲಿ ಬೆಳಿಗ್ಗೆ 9 ರಿಂದ ಅಪರಾಹ್ನ 1 ಗಂಟೆಯ ವರೆಗೆ ರಕ್ತದಾನ ಶಿಬಿರ ಜರುಗಿತು. 


ಪೋಲಿಸ್ ಇಲಾಖೆಯ ಬಾಲಕೃಷ್ಣ ಭಟ್ ಕೊಂಚಾಡಿ ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು. ಚೂಂತಾರು ಸರೋಜಿನಿ ಪ್ರತಿಷ್ಟಾನದ ಕಾರ್ಯದರ್ಶಿ ಡಾ ಮುರಲೀ ಮೋಹನ್ ಚೂಂತಾರು ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಟ ದಾನ. ಅದಕ್ಕಿಂತ ಮಿಗಿಲಾದ ದಾನ ಇನ್ನೊಂದಿಲ್ಲ. ನಿರಂತರವಾಗಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದಲ್ಲಿ ರಕ್ತದ ಕೊರತೆ ಉಂಟಾಗದು ಎಂದು ತಿಳಿಸಿದರು.


ಹವ್ಯಕ ಸಭಾದ ಕಾರ್ಯದರ್ಶಿ ಶ್ರೀಮತಿ ಸೌಜನ್ಯ ಸ್ವಾಗತಿಸಿದರು. ಹವ್ಯಕ ಸಮಾಜ ಶ್ರೀಮತಿ ಸವಿತಾ, ದಂತವೈದ್ಯೆ ಡಾ ರಾಜಶ್ರೀ, ಮಕ್ಕಳ ತಜ್ಞ ಡಾ ಸದಾಶಿವರಾವ್, ತೇಜಸ್ವಿನಿ ಆಸ್ಪತ್ರೆಯ ಡಾ ಗಣೇಶ್, ಲಯನ್ಸ್ ಕ್ಲಬ್ ನ ಎ ಜಿ ಶರ್ಮ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುಮಾರು ಹದಿನೈದು ಮಂದಿ ರಕ್ತದಾನ ಮಾಡಿದರು. ತೇಜಸ್ವಿನಿ ಆಸ್ಪತ್ರೆ ವೈದ್ಯರು ಶಿಬಿರ ನಡೆಸಿ ಕೊಟ್ಟರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top