ಮಹಾವೀರ- ಮಹಾತ್ಯಾಗಿ

Upayuktha
0



ಅವರ ಜೀವನವೇ ನಮಗೆ ಸತ್ಯದ ದಾರಿದೀಪ.

ತ್ಯಾಗ ತಪಸ್ಸಿನಿಂದ ಲೋಕಕ್ಕೆ ತೋರಿದ ಮಾರ್ಗ,

ಪ್ರೀತಿ, ದಯೆಯಿಂದ ತುಂಬಿದ ಅವರ ಹೃದಯ ಭಾಗ.


ರಾಜಭವನ ತೊರೆದು ಧರ್ಮದ ದಾರಿ ಹಿಡಿದು,

ಲೋಕಕ್ಕೆ ಶಾಂತಿಯ ಸಂದೇಶವನ್ನು ನೀಡಿ

ಕೋಪ, ದ್ವೇಷ ಎಲ್ಲವನ್ನೂ ದೂರ ಮಾಡು ಎಂದರು,

ಸತ್ಯ, ಅಹಿಂಸೆ ಮಾರ್ಗದಲ್ಲಿ ನಡೆಯು ಎಂದರು.


ಜೀವದ ಮೇಲಿರುವ ದಯೆಯೇ ದೊಡ್ಡ ಧರ್ಮ,

ಪ್ರೀತಿಯೇ ಮಾನವನ ನಿಜವಾದ ಕರ್ಮ.

ಮಹಾವೀರರ ಉಪದೇಶ ನಮ್ಮ ಜೀವನದ ಬೆಳಕು,

ಅವರ ಆದರ್ಶವೇ ನಮ್ಮ ಬದುಕಿನ ದಿಕ್ಕು.


ಈ ಜಯಂತಿಯಂದು ಮಾಡೋಣ ಒಂದು ಪ್ರತಿಜ್ಞೆ,

ಅಹಿಂಸೆ, ಸತ್ಯ ಪಾಲಿಸೋಣ ಪ್ರತಿದಿನ ನಿಜವಾಗಿ.

ಮಹಾವೀರರ ಮಾರ್ಗದಲ್ಲಿ ನಡೆಯುವ ನಾವು ಎಲ್ಲರು,

ಶಾಂತಿಯ ಲೋಕವನ್ನು ನಿರ್ಮಿಸೋಣ ಒಟ್ಟಾಗಿ.




- ಭಾಗ್ಯಶ್ರೀ ಜೀವಂಧರ ಕಾಶಿನ (ಬಳಿಗಾರ)

ಕನ್ನಡ ಉಪನ್ಯಾಸಕರು 

ಚೇತನ ವಾಣಿಜ್ಯ ಪದವಿ ಮಹಾವಿದ್ಯಾಲಯ ಹುಬ್ಬಳ್ಳಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top