ಮಹನೀಯರ ಆರಾಧನಾ ಮಹೋತ್ಸವ

Upayuktha
0



ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಮಾರ್ಚ್ 5ರಿಂದ 7ರವರೆಗೆ ಶ್ರೀ ಸುಧೀಂದ್ರತೀರ್ಥರು, ಶ್ರೀ ವಾದಿರಾಜರು ಹಾಗೂ ಶ್ರೀ ವ್ಯಾಸರಾಜರು ಇವರ ಆರಾಧನಾ ಮಹೋತ್ಸವವನ್ನು ನಗರದ ಪ್ರಕಾಶನಗರದ 10ನೇ ಮುಖ್ಯರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.


ಕಾರ್ಯಕ್ರಮಗಳ ವಿವರ


ಮಾರ್ಚ್ 5 (ಗುರುವಾರ):

ಶ್ರೀ ಸುಧೀಂದ್ರತೀರ್ಥರು ಹಾಗೂ ಬಾಳಗಾರು ಶ್ರೀ ರಘುಮಾನ್ಯತೀರ್ಥರ ಆರಾಧನೆ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಪಂಚಾಮೃತ ಅಭಿಷೇಕ, ಸುಮಧ್ವ ವಿಜಯ ಸಚ್ಛಾಸ್ತ್ರ ಪಾರಾಯಣ, ಶ್ರೀಕಾಂತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ನಡೆಯಲಿದೆ. ನಂತರ ಮ||ಶಾ||ಸಂ|| ಶ್ರೀ ಅಬ್ಬೂರು ಬದರಿ ಆಚಾರ್ಯರಿಂದ “ಶ್ರೀ ಸುಧೀಂದ್ರತೀರ್ಥರ ಸಂಕ್ಷಿಪ್ತ ಜೀವನ ಚರಿತ್ರೆ ಹಾಗೂ ತತ್ವಜ್ಞಾನಕ್ಕೆ ಅವರ ವಾಙ್ಮಯ ಕೊಡುಗೆ” ವಿಷಯದ ಕುರಿತು ಧಾರ್ಮಿಕ ಪ್ರವಚನ ನೀಡಲಾಗುತ್ತದೆ.


ಮಾರ್ಚ್ 6 (ಶುಕ್ರವಾರ):

ಶ್ರೀ ವಾದಿರಾಜರ ಆರಾಧನೆ ಅಂಗವಾಗಿ ಬೆಳಗ್ಗೆ 8 ಗಂಟೆಯಿಂದ ಪಂಚಾಮೃತ ಅಭಿಷೇಕ, ಸುಮಧ್ವ ವಿಜಯ ಸಚ್ಛಾಸ್ತ್ರ ಪಾರಾಯಣ ಹಾಗೂ ರುಕ್ಮಿಣಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ನಡೆಯಲಿದೆ. ಬಳಿಕ ಮ||ಶಾ||ಸಂ|| ಶ್ರೀ ಸಾಂಗ್ಲಿ ವಾಸುದೇವಾಚಾರ್ಯರಿಂದ “ಶ್ರೀ ವಾದಿರಾಜರ ಸಂಕ್ಷಿಪ್ತ ಜೀವನ ಚರಿತ್ರೆ ಹಾಗೂ ಶ್ರೀಮದಾಚಾರ್ಯರ ತತ್ವಜ್ಞಾನಕ್ಕೆ ಅವರ ಕೊಡುಗೆ” ವಿಷಯದ ಮೇಲೆ ಧಾರ್ಮಿಕ ಪ್ರವಚನ ನಡೆಯಲಿದೆ.


ಮಾರ್ಚ್ 7 (ಶನಿವಾರ):

ಶ್ರೀ ವ್ಯಾಸರಾಜರ ಆರಾಧನೆಯಂದು ಬೆಳಗ್ಗೆ 8 ಗಂಟೆಯಿಂದ ಪಂಚಾಮೃತ ಅಭಿಷೇಕ, ಸುಮಧ್ವ ವಿಜಯ ಸಚ್ಛಾಸ್ತ್ರ ಪಾರಾಯಣ ಹಾಗೂ ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ನಡೆಯಲಿದೆ. ನಂತರ ಮ||ಶಾ||ಸಂ|| ಶ್ರೀ ಆತನೂರು ಭೀಮಸೇನಾಚಾರ್ಯರಿಂದ “ಶ್ರೀ ವ್ಯಾಸರಾಜರ ಸಂಕ್ಷಿಪ್ತ ಜೀವನ ಚರಿತ್ರೆ ಮತ್ತು ವ್ಯಾಸತ್ರಯಗಳ ಪರಿಚಯ” ವಿಷಯದ ಕುರಿತು ಧಾರ್ಮಿಕ ಪ್ರವಚನ ನಡೆಯಲಿದೆ.


ಈ ಮೂರು ದಿನಗಳ ಆರಾಧನಾ ಮಹೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀಮಠದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top