ಮೊಬೈಲ್ ಥಿಯೇಟರ್ ವ್ಯಾನ್ ಚಾಲನೆ
ಬೆಂಗಳೂರು: ಭಾರತ ಅಂಚೆ ಇಲಾಖೆ ‘24 ಸ್ಪೀಡ್ ಪೋಸ್ಟ್’ ಸೇವೆಯನ್ನು ಮಾರ್ಚ್ 17ರಂದು ಆರಂಭಿಸಿದೆ. ಈ ಸೇವೆಯನ್ನು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಹಾಗೂ ಸಂವಹನ ರಾಜ್ಯ ಸಚಿವ ಚಂದ್ರಶೇಖರ್ ಪೆಮ್ಮಸಾನಿ ಉದ್ಘಾಟಿಸಿದರು.
ಈ ಸೇವೆಗಳ ಪ್ರಚಾರ ಮತ್ತು ಜನಜಾಗೃತಿಗಾಗಿ ಬೆಂಗಳೂರಿನಲ್ಲಿ ವಿಶಿಷ್ಟ ಅಭಿಯಾನ ಕೈಗೊಳ್ಳಲಾಗಿದ್ದು, ಅದರ ಭಾಗವಾಗಿ ಮೊಬೈಲ್ ಥಿಯೇಟರ್ ವ್ಯಾನ್‌ಗಳನ್ನು ನಗರಾದ್ಯಂತ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಈ ವ್ಯಾನ್‌ಗಳ ಮೂಲಕ ಸಾರ್ವಜನಿಕರಿಗೆ ಸ್ಪೀಡ್ ಪೋಸ್ಟ್ ಸೇವೆಗಳ ವೈಶಿಷ್ಟ್ಯಗಳು ಹಾಗೂ ಪ್ರಯೋಜನಗಳ ಕುರಿತು ನೇರವಾಗಿ ತಿಳಿಸುವ ಪ್ರಯತ್ನ ನಡೆದಿದೆ.
ಮಾರ್ಚ್ 24ರಂದು ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್ ಆವರಣದಿಂದ ಕರ್ನಾಟಕ ಅಂಚೆ ವಲಯದ ಮುಖ್ಯ ಅಂಚೆ ಮಹಾನಿರ್ದೇಶಕ ಕೆ. ಪ್ರಕಾಶ್ ಅವರು ಈ ಮೊಬೈಲ್ ಥಿಯೇಟರ್ ವ್ಯಾನ್‌ಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜೂಲಿಯಾ ಮಹಾಪಾತ್ರ (ಜನರಲ್ ಮ್ಯಾನೇಜರ್ – ಪಿಎ & ಎಫ್), ಸಂದೇಶ್ ಮಹಾದೇವಪ್ಪ (ಡಿಪಿಎಸ್, ಹೆಡ್‌ಕ್ವಾರ್ಟರ್ಸ್) ಹಾಗೂ ವಿ. ತಾರಾ (ಡಿಪಿಎಸ್, ಬೆಂಗಳೂರು ವಲಯ) ಉಪಸ್ಥಿತರಿದ್ದರು.
ಒಂದು ತಿಂಗಳ ಕಾಲ ಈ ಮೊಬೈಲ್ ಥಿಯೇಟರ್ ವ್ಯಾನ್ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ, 24 ಹಾಗೂ 48 ಗಂಟೆಗಳೊಳಗಿನ ವೇಗದ ವಿತರಣಾ ವ್ಯವಸ್ಥೆಯ ಕುರಿತು ಜಾಗೃತಿ ಮೂಡಿಸಲಿದೆ. ವಿಶೇಷವಾಗಿ ದೆಹಲಿ, ಮುಂಬಯಿ, ಚೆನ್ನೈ, ಕೋಲ್ಕತ ಹಾಗೂ ಹೈದರಾಬಾದ್ ಮೊದಲಾದ ಮಹಾನಗರಗಳಿಗೆ ತ್ವರಿತ ಪಾರ್ಸೆಲ್ ರವಾನೆ ಸೇವೆಗಳ ಕುರಿತು ಮಾಹಿತಿ ನೀಡಲಾಗುತ್ತದೆ.
ಪ್ರತಿ ಸ್ಥಳದಲ್ಲೂ ‘24 ಸ್ಪೀಡ್ ಪೋಸ್ಟ್’ ಮತ್ತು ‘48 ಸ್ಪೀಡ್ ಪೋಸ್ಟ್’ ಸೇವೆಗಳ ಕುರಿತ ಆಡಿಯೋ-ವಿಶುವಲ್ ಪ್ರದರ್ಶನಗಳನ್ನು ನಡೆಸಲಾಗುತ್ತದೆ. ಜೊತೆಗೆ, ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಿ, ಸಮಯಬದ್ಧ ವಿತರಣೆಯ ಪ್ರಯೋಜನಗಳು, ಟ್ರ್ಯಾಕ್-ಅಂಡ್-ಟ್ರೇಸ್ ಸೌಲಭ್ಯಗಳು ಹಾಗೂ ಭಾರತ ಅಂಚೆ ಇಲಾಖೆಯ ವ್ಯಾಪಕ ಜಾಲದ ಬಗ್ಗೆ ವಿವರಿಸಲಾಗುತ್ತದೆ.
ಸಾರ್ವಜನಿಕರು ತಮ್ಮ ಪ್ರದೇಶಕ್ಕೆ ಈ ವ್ಯಾನ್ ಬರುವಾಗ ಭೇಟಿ ನೀಡಿ, ವೈಯಕ್ತಿಕ ಹಾಗೂ ವ್ಯವಹಾರಿಕ ಸಂಪರ್ಕ ಅಗತ್ಯಗಳಿಗೆ ಸ್ಪೀಡ್ ಪೋಸ್ಟ್ ಸೇವೆಗಳ ಉಪಯೋಗವನ್ನು ತಿಳಿದುಕೊಳ್ಳುವಂತೆ ಅಂಚೆ ಇಲಾಖೆ ಮನವಿ ಮಾಡಿದೆ.
ಈ ಅಭಿಯಾನವು ಅಂಚೆ ಇಲಾಖೆಯು ತನ್ನ ಪ್ರೀಮಿಯಂ ಸೇವೆಗಳ ಬಗ್ಗೆ ಜಾಗೃತಿ ಹೆಚ್ಚಿಸುವುದರ ಜೊತೆಗೆ, ಗ್ರಾಹಕರೊಂದಿಗೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ದಿಶೆಯಲ್ಲಿ ಕೈಗೊಂಡ ಪ್ರಮುಖ ಹೆಜ್ಜೆಯಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

