ಅಕ್ಷಯ ಪದವಿ ಕಾಲೇಜಿನಲ್ಲಿ ಅದ್ವಯ ಕನ್ನಡ ಸಾಹಿತ್ಯ ಸಂಘದಿಂದ 'ಅಂಕುರ' ಭಿತ್ತಿಪತ್ರ ಅನಾವರಣ

Upayuktha
0


ಪುತ್ತೂರು: ಪುತ್ತೂರಿನ ಅಕ್ಷಯ ಪದವಿ ಕಾಲೇಜಿನಲ್ಲಿ ಇಂದು (ಮಾ.25) ಅದ್ವಯ ಕನ್ನಡ ಸಾಹಿತ್ಯ ಸಂಘದಿಂದ 'ಅಂಕುರ' ಭಿತ್ತಿಪತ್ರ ಅನಾವರಣ ಕಾರ್ಯಕ್ರಮವು ನಡೆಯಿತು.


ಕರ್ನಾಟಕ ಸಂಘ, ಪುತ್ತೂರು ಇದರ ಅಧ್ಯಕ್ಷರಾದ ಶ್ರೀ ಪುರಂಧರ ಭಟ್ ಬಿ. ಇವರು 'ಅಂಕುರ' ಭಿತ್ತಿಪತ್ರಿಕೆಯ ಅನಾವರಣ ಮಾಡಿ, ದೀಪ ಪ್ರಜ್ವಲನೆಗೈದು ತಮ್ಮ ಬಾಲ್ಯದ ದಿನಗಳಲ್ಲಿನ ನೆನಪನ್ನು ಬಿತ್ತರಿಸಿ ಮುಂದಿನ ದಿನಗಳಲ್ಲಿ 'ಅಂಕುರ' ಹೆಮ್ಮರವಾಗುವಂತೆ ಶುಭ ಹಾರೈಸಿದರು.


ಅತಿಥಿಗಳಾಗಿದ್ದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಉಮೇಶ್ ನಾಯಕ್ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಭಿತ್ತಿಪತ್ರ ಸಾಹಿತ್ಯದ ಮೊದಲ ಹಂತ. ಇದರ ಸದುಪಯೋಗ ಪಡೆದುಕೊಂಡು ಸಾಹಿತ್ಯದ ವಿಷಯಗಳನ್ನು ಕಲಿಯಲು ಮತ್ತು ವಿಸ್ತರಿಸಲು ಉತ್ತಮ ಅವಕಾಶ ಎಂದು ಹೇಳಿದರು. 


ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಶ್ರೀ ಜಯಂತ್ ನಡುಬೈಲು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಸಾಹಿತ್ಯದ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರೆಸಿ ಅದನ್ನು ಹವ್ಯಾಸವಾಗಿ ಬೆಳೆಸಿಕೊಳ್ಳಬೇಕು. ಮುಂದೆ ಅದೇ ಹವ್ಯಾಸ ಕೌಶಲಗಳನ್ನು ಬೆಳೆಸುವಂತೆ ಮಾಡುತ್ತದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಅದ್ವಯ ಕನ್ನಡ ಸಾಹಿತ್ಯ ಸಂಘದ ಸಂಯೋಜಕರಾದ ಶ್ರೀ ಹರೀಶ್ಚಂದ್ರ, ಅಕ್ಷಯ ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ರಕ್ಷಣ್, ಅದ್ವಯ ಕನ್ನಡ ಸಾಹಿತ್ಯ ಸಂಘದ ವಿದ್ಯಾರ್ಥಿ ಅಧ್ಯಕ್ಷ ಸಂತೋಷ್  ಮತ್ತು ಕಾರ್ಯದರ್ಶಿ ಸುದೀಪ್ ಉಪಸ್ಥಿತರಿದ್ದರು. 


ಉಪನ್ಯಾಸಕರಾದ ಶ್ರೀ ಹರಿಶ್ಚಂದ್ರ ಪ್ರಸ್ತಾವನೆಗೈದು, ಉಪನ್ಯಾಸಕಿ ಶ್ರೀಮತಿ ರಶ್ಮಿತಾ. ಎಸ್ ಬಹುಮಾನಿತರ ಪಟ್ಟಿ ವಾಚನ ಮಾಡಿ, ವಿದ್ಯಾರ್ಥಿಗಳಾದ ಕೋಮಲಾಕ್ಷಿ ಮತ್ತು ಕನಕ ಅತಿಥಿಗಳ ಪರಿಚಯಿಸಿದರೆ, ದೀಪಶ್ರೀ ಪ್ರಾರ್ಥಿಸಿದರು. ಲಾವಣ್ಯ ವಂದಿಸಿ, ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.



إرسال تعليق

0 تعليقات
إرسال تعليق (0)
To Top