ದೆಹಲಿಯಲ್ಲಿ ಸಂತ ಸೇವಾಲಾಲರ ಜಯಂತಿಗೆ ಸರ್ವ ಬೆಂಬಲ

Upayuktha
0

ಪ್ರಧಾನಿ ಮೋದಿ, ಮುಖ್ಯಮಂತ್ರಿ ರೇಖಾ ಗುಪ್ತಾಗೆ ಡಾ. ಉಮೇಶ್ ಜಾಧವ್ ಅಭಿನಂದನೆ




ನವದೆಹಲಿ: ಕಳೆದ ಹಲವಾರು ವರ್ಷಗಳಿಂದ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಸಂತ ಸೇವಾಲಾಲರ ಜಯಂತಿ ಉತ್ಸವವನ್ನು ಅತ್ಯಂತ ವಿಜ್ರಂಭಣೆಯಿಂದ ನಡೆಸಲು ಸರ್ವ ರೀತಿಯ ಸಹಕಾರ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಹಾಗೂ ದೆಹಲಿ ಮುಖ್ಯಮಂತ್ರಿ ರೇಖಾ ಅವರಿಗೆ ಅಭಿನಂದನೆ ಹಾಗೂ ಫೆಬ್ರವರಿ 28 ಶನಿವಾರ ಕೂಡ ಅತ್ಯಂತ ವಿದ್ಯಾರಂಭದಿಂದ ಸಂತ ಸೇವಾಲಾಲರ 287ನೇ ಜಯಂತಿಸುವ ನಡೆಯಲಿದೆ ಎಂದು ಮಾಜಿ ಲೋಕಸಭಾ ಸದಸ್ಯರು ಹಾಗೂ ಅಖಿಲ ಭಾರತ ಬಂಜಾರ ಸೇವಾ ಸಂಘದ ಕಾರ್ಯಾಧ್ಯಕ್ಷರಾದ ಡಾ. ಉಮೇಶ್ ಜಾಧವ್ ತಿಳಿಸಿದರು.


ದೆಹಲಿಯ ಕರ್ನಾಟಕ ಭವನದಲ್ಲಿ ಫೆಬ್ರುವರಿ 22ರಂದು ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ ದೇಶದಲ್ಲಿ 10ರಿಂದ 15 ಕೋಟಿ ಲಂಬಾಣಿ ಸಮುದಾಯದ ಜನರಿದು ತಮ್ಮ ಸಾಂಸ್ಕೃತಿಕ ಮತ್ತು ವಿಶಿಷ್ಟ ಜೀವನ ಪರಂಪರೆಯಿಂದ ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತಿದ್ದಾರೆ. ಜನ ಸಮುದಾಯದ ಗುರುಗಳಾದ ಶ್ರೀ ಸಂತ ಸೇವಾಲಾಲರ 287ನೇ ಜನ್ಮ ಜಯಂತಿ ಹಾಗೂ ರೂಪ್ ಸಿಂಗ್ ಮಹಾರಾಜರ (ಲಕ್ಕೀಶಾ ಬಂಜಾರ) ಪುಣ್ಯತಿಥಿಯನ್ನು ದೇಶದಾದ್ಯಂತ ಭಕ್ತಿ ಹಾಗೂ ಶ್ರದ್ಧೆಯಿಂದ ಆಚರಿಸುತ್ತಿದ್ದು ಇದೀಗ ರಾಷ್ಟ್ರದ ರಾಜಧಾನಿಯಲ್ಲಿ ದೇಶದ ಎಲ್ಲಾ ಭಾಗಗಳ ಜನರು ಒಟ್ಟಾಗಿ ಸೇರಿ ಆಚರಿಸುತ್ತಿರುವುದು ಅತ್ಯಂತ ವಿಶಿಷ್ಟವಾಗಿದೆ. ಇದರಿಂದಾಗಿ ದೇಶದ ಬಂಜಾರ ಜನರು ರಾಜಧಾನಿಯಲ್ಲಿ ಒಟ್ಟುಗೂಡಿ ಆಚರಿಸುವ ಈ ಜಯಂತಿಗೆ ವಿಶೇಷ ಗೌರವ ಇದ್ದು ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಸರ್ವ ರೀತಿಯ ಬೆಂಬಲವನ್ನು ನೀಡಿದ್ದಾರೆ. ಅದರ ಜೊತೆಗೆ ಕರ್ನಾಟಕದಿಂದ ಎರಡು ವಿಶೇಷ ರೈಲುಗಳನ್ನು ನೀಡಿ ಕೇಂದ್ರ ರೈಲ್ವೆ ಖಾತೆಯ ಸಚಿವರಾದ ಅಶ್ವಿನಿ ವೈಷ್ಣವ ಮತ್ತು ವಿ. ಸೋಮಣ್ಣ ಬಂಜಾರ ಸಮುದಾಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದು ಡಾ. ಜಾಧವ್ ಹೇಳಿದರು.


ದೆಹಲಿಯಲ್ಲಿ ಶನಿವಾರ 11 ಗಂಟೆಗೆ ಡಾ. ಅಂಬೇಡ್ಕರ್ ಅಂತರಾಷ್ಟ್ರೀಯ ಸೆಂಟರ್ ನಲ್ಲಿ ನಡೆಯುವ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ವಿವಿಧ ರಾಜ್ಯಗಳ ಸಚಿವರು ಮತ್ತು ಬಂಜಾರ ಸಮುದಾಯದ ಖ್ಯಾತ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top