ಹಾಸನ ಕಸಾಪದಲ್ಲಿ ರಂಗಗೀತೆಗಳ ಸಂಭ್ರಮ

Upayuktha
0


ಹಾಸನ: ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾಸನ ಜಿಲ್ಲಾ ಕನ್ನಡ ರಂಗಭೂಮಿ ಕಲಾವಿದರ ಸಂಘ (ರಿ), ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಕಲಾ ಸಂಘಗಳ ಸಹಯೋಗದಲ್ಲಿ ನಗರದಲ್ಲಿನ ಸಾಹಿತ್ಯ ಪರಿಷತ್ತಿನಲ್ಲಿ ರಂಗಗೀತೆ ಗಾಯನ ಕಾರ್ಯಕ್ರಮ ಜರುಗಿತು.


ಕಾರ್ಯಕ್ರಮವನ್ನು ಕಲಾವಿದ ಗ್ಯಾರಂಟಿ ರಾಮಣ್ಣ ಉದ್ಘಾಟಿಸಿ ಮಾತನಾಡಿ, ರಂಗಭೂಮಿ ಎಂದರೆ ನಿರ್ದಿಷ್ಟ ವೇದಿಕೆಯಷ್ಟೇ ಅಲ್ಲ; ಭೂಮಿಯ ಎಲ್ಲಿಯಾದರೂ ಕಲೆಯ ಪ್ರದರ್ಶನ ನಡೆಯುವ ಸ್ಥಳವೇ ರಂಗಭೂಮಿ ಎಂದು ಅಭಿಪ್ರಾಯಪಟ್ಟರು.


ಸಾಹಿತಿ ಗೊರೂರು ಅನಂತರಾಜು ಮಾತನಾಡಿ, 1948ರಲ್ಲಿ ಯುನೆಸ್ಕೋ ಆಶ್ರಯದಲ್ಲಿ ಇಂಟರ್‌ನ್ಯಾಷನಲ್ ಥಿಯೇಟರ್ ಇನ್‌ಸ್ಟಿಟ್ಯೂಟ್ ಸ್ಥಾಪನೆಯಾಗಿ, 1961ರಲ್ಲಿ ನಡೆದ ಅಂತರಾಷ್ಟ್ರೀಯ ಥಿಯೇಟರ್ ಕಾಂಗ್ರೆಸ್‌ನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಅದರಂತೆ 1962ರಿಂದ ಈ ದಿನಾಚರಣೆ ನಡೆದುಬರುತ್ತಿದೆ ಎಂದರು. ರಂಗಭೂಮಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶ ಎಂದು ಹೇಳಿದರು.


ಈವರೆಗೆ 60ಕ್ಕೂ ಹೆಚ್ಚು ಖ್ಯಾತ ನಾಟಕಕಾರರು ಮತ್ತು ರಂಗಕರ್ಮಿಗಳು ವಿಶ್ವ ರಂಗಭೂಮಿ ದಿನದ ಸಂದೇಶ ನೀಡಿದ್ದಾರೆ. ಭಾರತೀಯರಲ್ಲಿ 2002ರಲ್ಲಿ ಡಾ. ಗಿರೀಶ್ ಕಾರ್ನಾಡ್ ಹಾಗೂ 2018ರಲ್ಲಿ ರಾಮ್ ಗೋಪಾಲ್ ಬಜಾಜ್ ಅವರಿಗೆ ಈ ಗೌರವ ದೊರೆತಿದೆ. ಈ ಸಂದೇಶವು 50ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾಗುತ್ತದೆ ಎಂದು ತಿಳಿಸಿದರು.


ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಹೆಚ್. ಎಲ್. ಮಲ್ಲೇಶ್ ಗೌಡರು ಮಾತನಾಡಿ, ನಿರ್ದೇಶಕರು ಮತ್ತು ಹಾರ್ಮೋನಿಯಂ ಮಾಸ್ತರರ ಪಾತ್ರವನ್ನು ಕಲಾವಿದರು ಮರೆಯಬಾರದು; ಅವರಿಗೆ ಗುರುಸ್ಥಾನದಲ್ಲಿ ಗೌರವ ನೀಡಿದಾಗಲೇ ಕಲೆಗೆ ಮೌಲ್ಯ ಸಿಗುತ್ತದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ನಿವೃತ್ತ ತಹಸೀಲ್ದಾರ್ ಎ. ವಿ. ರುದ್ರಪ್ಪಾಜಿರಾವ್, ಸಂಘದ ಅಧ್ಯಕ್ಷ ರಾಮಘಟ್ಟ ಜಗದೀಶ್, ನಟರಾದ ಹೆಚ್. ಎಂ. ಪ್ರಭಾಕರ್, ಆಡುವಳ್ಳಿ ಸುನೀಲ್, ಕಾರ್ಲೆ ಗೋವಿಂದೇಗೌಡ, ಪ್ರದೀಪ್ ಗವೇನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


50ಕ್ಕೂ ಹೆಚ್ಚು ಕಲಾವಿದರು, ಮಹಿಳೆಯರನ್ನು ಒಳಗೊಂಡು, ರಂಗಗೀತೆ ಗಾಯನವನ್ನು ಮನೋಜ್ಞವಾಗಿ ಪ್ರಸ್ತುತಪಡಿಸಿದರು. ಬೆಳ್ಳೂರು ಕ್ರಾಸ್‌ನ ಡಿ. ಸಿ. ಮಂಜುನಾಥ್ (ಹಾರ್ಮೋನಿಯಂ) ಹಾಗೂ ಅಶ್ವಥ್ ಕುಮಾರ್ (ಕೀಬೋರ್ಡ್) ಸಂಗೀತ ಸಹಕಾರ ನೀಡಿದರು.


ಇದೇ ವೇಳೆ 50 ಮಂದಿ ರಂಗಕಲಾವಿದರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮವನ್ನು ಗೌರವ ಕಾರ್ಯದರ್ಶಿ ಬೊಮ್ಮೇಗೌಡರು ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top