ಗತವೈಭವ ನೆನಪಿಸುವ ದೊಂದಿ ಬೆಳಕಿನಲ್ಲಿ ಯಕ್ಷಗಾನ ಬಯಲಾಟ

Upayuktha
0


ಉಡುಪಿ ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಬಾಲ ಪ್ರತಿಭಾ ವಿದ್ಯಾರ್ಥಿಗಳಿಂದ ವೀರ ಅಭಿಮನ್ಯು ಪ್ರಸಂಗ.ಯಾವುದೇ ವಿದ್ಯುತ್‌ ದೀಪದ ಪ್ರಕಾಶವಿಲ್ಲದೆ ಪೂತಿ೯ಯಾಗಿ ದೊಂದಿ ಬೆಳಕಿನಲ್ಲಿಯೇ ಅಲಂಕರಿಸಿದ ಯಕ್ಷ ವೇದಿಕೆ. ಹಡಿ ಮಂಚದ ಚಾಪೆಯ ಮೇಲೆ ಕೂತ ಭಾಗವತರು ಮದ್ದಲೆಗಾರರು ಹಿಮ್ಮೇಳನದಲ್ಲಿ ಗತವೈಭವದ ಯಕ್ಷಗಾನ ಕಲೆಯ ಪರಂಪರೆಯನ್ನು ನೆನಪಿಸಿಕೊಟ್ಟರು. ನೆಲದ ಮೇಲೆ ಹಾಕಿದ ಜಮಖಾನ್ ಮೇಲೆ ಕೂತು ನಗುಮೊಗದಲ್ಲಿಯೇ ಯಕ್ಷಗಾನ ವನ್ನು ವೀಕ್ಷಿಸಿದ ಮಕ್ಕಳನ್ನು ನೇೂಡಿದಾಗ ನನಗೆ ನಮ್ಮ ಬಾಲ್ಯದ ನೆನಪಾಯಿತು.


ರಂಗ ಸ್ಠಳದ ಮುಂಭಾಗದಲ್ಲಿ ಚಾಪೆಯ ಮೇಲೆ ಕೂತು ಯಕ್ಷಗಾನ ನೇೂಡುತ್ತಾ ನಿದ್ರೆ ಮಾಡಿದ್ದು; ರಾಕ್ಷಸ ಪಾತ್ರಗಳು ಬಂದಾಗ ನಿದ್ರೆಯ ಕಣ್ಣಿನಲ್ಲಿಯೇ ಹೆದರಿ ಕೂತು  ನೇೂಡಿದ್ದು... ಎಲ್ಲವೂ ಒಮ್ಮೆ ನೆನಪಿನಂಗಳದಲ್ಲಿ ಮೂಡಿ ಬಂತು.. ಇಂದಿನ ಯಕ್ಷಗಾನದ ಬಾಲಪ್ರತಿಭೆಗಳಿಗೆ ಯಕ್ಷ ಕಲೆಯ ಗತವೈಭವ ನೆನಪಿಸುವಲ್ಲಿ ಇದೊಂದು ಯಶಸ್ವಿ ಪ್ರಯೇೂಗ.


- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top