ಸುದಾನ ಶಾಲೆಯಲ್ಲಿ ಕೃತಕ ಬುದ್ಧಿಮತ್ತೆ- ಎಐ ಕಾರ್ಯಾಗಾರ

Upayuktha
0


ಪುತ್ತೂರು: ಸುದಾನ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಎ ಐ ಬೇಸಿಕ್ಸ್ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ.ಕಾರ್ಯಾಗಾರವನ್ನು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರಾಜೇಶ್ವರಿ ಅವರು ನಡೆಸಿಕೊಟ್ಟರು.


ಕೃತಕ ಬುದ್ಧಿಮತ್ತೆಯ ಅರ್ಥ, ಲಾಭಗಳು ಹಾಗೂ ಬಳಕೆಗಳನ್ನು ವಿವರಿಸಿ, ಸಾಮಾನ್ಯ ಎಐ ಸಾಧನಗಳು, ಪ್ರಾಂಪ್ಟ್ ಎಂಜಿನಿಯರಿಂಗ್, ಕೋಡಿಂಗ್, ಅಧ್ಯಯನ ಹಾಗೂ ಉತ್ಪಾದಕತೆಗೆ ಉಪಯೋಗವಾಗುವ ಎಐ ಸಾಧನಗಳ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ GCS Global, ChatGPT ಹಾಗೂ Notebook LM ನಡುವಿನ ನೇರ ಪ್ರದರ್ಶನವೂ ನಡೆಯಿತು.


ಎಐಯನ್ನು ಜವಾಬ್ದಾರಿಯುತವಾಗಿ ಬಳಸುವ ಅಗತ್ಯವನ್ನು ವಿವರಿಸಲಾಯಿತು. ಸಭಾಧ್ಯಕ್ಷತೆಯನ್ನು ವಹಿಸಿದ್ದ  ಮುಖ್ಯೋಪಾಧ್ಯಾಯಿನಿ ಶೋಭಾ ನಾಗರಾಜ್  ಅವರು ಕೃತಕ ಬುದ್ಧಿಮತ್ತೆಯ ಅಗತ್ಯ ಮತ್ತು ಎಚ್ಚರದ ಬಗ್ಗೆ ವಿವರಿಸಿದರು. ಈ ಕಾರ್ಯಕ್ರಮವನ್ನು ಸುದಾನ ಐಟಿ ಕ್ಲಬ್ ದೃಷ್ಟಿ ಆಯೋಜಿಸಿತ್ತು, 


ಉಪಮುಖ್ಯ ಶಿಕ್ಷಕಿ ಶ್ರೀಮತಿ ಲವೀನಾ ನವೀನ್  ಹನ್ಸ್, ಐಟಿ ಶಿಕ್ಷಕರಾದ ರಂಜಿತ್ ಮಥಾಯಿಸ್, ಸುಂದರ್ ನಾವೂರು, ಶ್ರೀಮತಿ ಶೈನಿ, ಶ್ರೀಮತಿ ಗಾಯತ್ರಿ. ಎಂ ಹಾಗೂ ಲೈಬ್ರೇರಿಯನ್  ಶ್ರೀಮತಿ ಪ್ರಿಯಾ ಅನಿಲ್ ಕುಮಾರ್ ಉಪಸ್ಥಿತರಿದ್ದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top