ವರ್ಕ್‍ಮಾಸ್ಟರ್- 105 ಟ್ರ್ಯಾಕ್ಟರ್ ಅನಾವರಣ

Upayuktha
0


ಮಂಗಳೂರು: ಸಿಎನ್‍ಎಚ್ ಕಂಪನಿಯ ಬ್ರ್ಯಾಂಡ್ ಆದ ನ್ಯೂ ಹಾಲೆಂಡ್ ಕಂಪನಿಯು ಕರ್ನಾಟಕದಲ್ಲಿ ತನ್ನ ಹೆಚ್ಚಿನ ಹಾರ್ಸ್ ಪವರ್ ಟ್ರ್ಯಾಕ್ಟರ್ ಸರಣಿಯ, ಎಚ್‍ವಿಎಸಿ ಕ್ಯಾಬಿನ್ ಹೊಂದಿರುವ ವರ್ಕ್ ಮಾಸ್ಟರ್ 105 ಟ್ರ್ಯಾಕ್ಟರ್ ಅನ್ನು ಬಿಡುಗಡೆ ಮಾಡಿದೆ.


ಈ ಹೊಸ ಮಾದರಿಯು ನ್ಯೂ ಹಾಲೆಂಡ್‍ನ 106 ಎಚ್‍ಪಿ ಟ್ರ್ಯಾಕ್ಟರ್ ಶ್ರೇಣಿಗೆ ಸೇರಿದ್ದು, ಎಲ್ಲ ಹವಾಮಾನಗಳಲ್ಲೂ ಚಾಲಕರಿಗೆ ಆರಾಮದಾಯಕ ಅನುಭವ ಮತ್ತು ಸುಧಾರಿತ ಕಾರ್ಯಕ್ಷಮತೆ ಒದಗಿಸುವ ಸಾಮಥ್ರ್ಯವನ್ನು ಪರಿಚಯಿಸಿದೆ. ಈ ಹೊಸ ಟ್ರ್ಯಾಕ್ಟರ್ ಕಠಿಣ ಕೃಷಿ ಪರಿಸ್ಥಿತಿಗಳಲ್ಲಿ ಅನುಕೂಲತೆ, ಬಾಳಿಕೆ ಮತ್ತು ಉತ್ಪಾದಕತೆ ಒದಗಿಸಲಿದ್ದು, ಈ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲಿದೆ ಎಂದು ಸಿಎನ್‍ಎಚ್ ಇಂಡಿಯಾದ ಅಧ್ಯಕ್ಷ ಮತ್ತು ಎಂಡಿ ನಾರೀಂದರ್ ಮಿತ್ತಲ್ ಹೇಳಿದ್ದಾರೆ.


ವರ್ಕ್ ಮಾಸ್ಟರ್ 105 ಟ್ರ್ಯಾಕ್ಟರ್, 106 ಎಚ್‍ಪಿ ಸಾಮಥ್ರ್ಯದ 3.4- ಲೀಟರ್ ಎಫ್ ಪಿ ಟಿ (ಫಿಯಟ್ ಪವರ್ ಟ್ರೇನ್ ಟೆಕ್ನಾಲಜೀಸ್) ಟ್ರೆಮ್-4 ಎಂಜಿನ್ ಹೊಂದಿದ್ದು, ಕಡಿಮೆ ಆರ್‍ಪಿಎಂನಲ್ಲಿ ಅಸಾಧಾರಣ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ನೀಡುತ್ತದೆ. ಎಚ್‍ವಿಎಸಿ ಕ್ಯಾಬಿನ್ ಹೊಂದಿರುವ ಈ ಹೊಸ ಮಾದರಿಯು ಆರು ರೂಫ್ ವೆಂಟ್ ಗಳಿರುವ ಹೀಟಿಂಗ್ ಮತ್ತು ಏರ್ ಕಂಡೀಷನಿಂಗ್ ವ್ಯವಸ್ಥೆಯೊಂದಿಗೆ ಎಲ್ಲಾ ಋತುಗಳಲ್ಲೂ ಆರಾಮದಾಯಕ ಚಾಲನಾ ಅನುಭವ ಒದಗಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಇದು ಶಬ್ದ ಮುಕ್ತವಾಗಿ ಕಾರ್ಯಾಚರಿಸುತ್ತದೆ ಮತ್ತು ಆಯಾಸವಿಲ್ಲದೆ ಕಾರ್ಯಾಚರಣೆ ಮಾಡಲು ಅನುವು ಮಾಡಿಕೊಡಲು 'ಏರ್- ಸಸ್ಪೆಂಡೆಡ್' ಸೀಟನ್ನು ಸಹ ಹೊಂದಿದೆ. ಅಲ್ಲದೆ, ಇದರಲ್ಲಿರುವ 'ನ್ಯೂಮ್ಯಾಟಿಕ್ ರಿವರ್ಸಿಬಲ್ ಫ್ಯಾನ್' ಧೂಳಿನಿಂದ ಕೂಡಿದ ಸುಗ್ಗಿಯ ನಂತರದ ಸಂದರ್ಭದಲ್ಲಿ, ವಿಶೇಷವಾಗಿ ಭತ್ತದ ಕಟಾವಿನ ನಂತರದ ಬೇಲಿಂಗ್ ಕಾರ್ಯಾಚರಣೆ ಸಂದರ್ಭದಲ್ಲಿ ಅಡೆತಡೆಯಿಲ್ಲದೆ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ ಎಂದು ವಿವರಿಸಿದ್ದಾರೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top