ಜೆ ಇಇಮೈನ್ಸ್ ನಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿಶಾಲ್ ಪಿ. ಪುತ್ತೂರು ತಾಲೂಕಿಗೆ ಪ್ರಥಮ

Upayuktha
0

  • 98.23 ಪರ್ಸೆಂಟೈಲ್‍ಪಡೆದ ವಿಶಾಲ್ ಪಿ 
  • ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಲವು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ 




ಪುತ್ತೂರು: ಕೇಂದ್ರ ಸರಕಾರದ NTA ಪ್ರಾಧಿಕಾರವು ನಡೆಸುವ ರಾಷ್ಟ್ರ ಮಟ್ಟದ ಜೆಇಇ ಮೈನ್ಸ್-2026 ರ ಪ್ರಥಮ ಹಂತದ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ಅನೇಕ ವಿದ್ಯಾರ್ಥಿಗಳು 90 ಪರ್ಸೆಂಟೈಲ್‍ಗಳಿಗಿಂತಲೂ ಅಧಿಕ ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ವಿಶಾಲ್ ಪಿ (ಪುತ್ತೂರು ಪಡ್ನೂರಿನ ವಿಠ್ಠಲ ಪಿ ಹಾಗೂ ರೇಷ್ಮಾ ದಂಪತಿಗಳ ಪುತ್ರ) ಇವರು 98.23 ಪರ್ಸೆಂಟೈಲ್ ಗಳಿಸುವುದರ ಮೂಲಕ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.


ಅತ್ಯುತ್ತಮ ಅಂಕಗಳನ್ನು (ಪರ್ಸೆಂಟೈಲ್) ಪಡೆದ ವಿದ್ಯಾರ್ಥಿಗಳ ವಿವರ: 

ವಿಶಾಲ್ ಪಿ 98.23 ಪರ್ಸೆಂಟೈಲ್ (ಪಡ್ನೂರಿನ ವಿಠ್ಠಲ ಪಿ ಹಾಗೂ ರೇಷ್ಮಾ ದಂಪತಿಗಳ ಪುತ್ರ), ಧನ್ವಿ ಆರ್ ಬಿ 95.93 ಪರ್ಸೆಂಟೈಲ್ (ಉರಿಮಜಲಿನ ರಾಘವ ಗೌಡ ಹಾಗೂ ಭಾರತಿ ದಂಪತಿಗಳ ಪುತ್ರಿ), ಅದಿತಿ ಯು 94.70 ಪರ್ಸೆಂಟೈಲ್ (ಬೆಂಗಳೂರಿನ ಉಮಾ ಶಂಕರ್ ಹಾಗೂ ಸುಮಾ ಕೆ ಡಿ ದಂಪತಿಗಳ ಪುತ್ರಿ), ಚೇತನ್ ಕೆ ವಿ 94. 08 ಪರ್ಸೆಂಟೈಲ್  (ಪಡ್ನೂರಿನ ವಿಶ್ವನಾಥ ಗೌಡ ಕೆ ಹಾಗೂ ಗಿರಿಜಾ ದಂಪತಿಗಳ ಪುತ್ರ), ಮೋಕ್ಷಿತ್ ಪಿ ಎಸ್ 93.1 ಪರ್ಸೆಂಟೈಲ್  ( ಶಾಂತಿಗೋಡಿನ ಪಿ ಎಸ್ ಸತೀಶ್ ಹಾಗೂ ರೂಪಲತಾ ದಂಪತಿಗಳ ಪುತ್ರ), ಅಮೋಘ ಕೃಷ್ಣ ಕೆ 92.52 ಪರ್ಸೆಂಟೈಲ್  ( ನೆಹರೂ ನಗರದ ಬಾಲಕೃಷ್ಣಭಟ್ ಕೆ ಹಾಗೂ ಸುಮಿತ್ರಾ ಕೆದಂಪತಿಗಳ ಪುತ್ರ ), ಮಂಗಳಾಮೃತ ಕೆ ಆರ್ 91.98 ಪರ್ಸೆಂಟೈಲ್  ( ಸುಳ್ಯ ಜಾಲ್ಸೂರಿನ ರವಿರಾಜ್ ಕೆ ಹಾಗೂ ವಾಣಿ ಕುಮಾರಿ ಎ ದಂಪತಿಗಳ ಪುತ್ರಿ), ಪ್ರತ್ಯೂಷ್‌ ಆರ್ ವೈ 90.2 ಪರ್ಸೆಂಟೈಲ್  ( ಬನ್ನೂರಿನ ರಾಘವೇಂದ್ರ ಕೆ ಆರ್ ಹಾಗೂ ಶಾಂತಿ ಕೆ ಆರ್ ದಂಪತಿಗಳ ಪುತ್ರ), ಹೇಮಂತ್ ಕುಮಾರ್ ಕೆ ವೈ 89.74 ಪರ್ಸೆಂಟೈಲ್  ( ಪಾಣಾಜೆಯ ಕೃಷ್ಣಪ್ಪ ಮೂಲ್ಯ ಹಾಗೂಯಶೋಧ ವಿ ದಂಪತಿಗಳ ಪುತ್ರ)  ಪಡೆದಿದ್ದಾರೆ.

ಅಭಿರಾಮ್ ಭಟ್ 87.88 ಪರ್ಸೆಂಟೈಲ್  (ನರಿಕೊಂಬಿನ ವಸಂತ್ ಕುಮಾರ್ ಎನ್ ಹಾಗೂ ಸುಲೋಚನಾ ಕುಮಾರಿ ಬಿ ಕೆ ದಂಪತಿಗಳ ಪುತ್ರ), ಸಪ್ತಮಿ ವೈ ಪಿ 87.61 ಪರ್ಸೆಂಟೈಲ್  (ಮೈಸೂರಿನ ಹೂಟಗಳ್ಳಿಯ ಪೂಣಚ್ಚ ವೈ ಪಿ ಹಾಗೂ ಜಯಂತಿ ಕೆ ಪಿ ದಂಪತಿಗಳ ಪುತ್ರಿ), ಅಜೇಯ ರಾಮ್ 86.84 ಪರ್ಸೆಂಟೈಲ್  (ಉರಿಮಜಲಿನ ಕೇಶವ ಮೂರ್ತಿ ಸಿ ಹಾಗೂ ಗೀತಾಲಕ್ಷ್ಮೀ ದಂಪತಿಗಳ ಪುತ್ರ), ಡಿ ಬಿ ನಾಗ ಅಚ್ಯುತ್ 86.82 ಪರ್ಸೆಂಟೈಲ್  (ತುಮಕೂರು ತಿಪಟೂರಿನ ಡಿ ಎನ್ ಬದ್ರಿನಾಥ್ ಹಾಗೂ ಡಿ ಬಿ ರಶ್ಮಿ ದಂಪತಿಗಳ ಪುತ್ರ), ಪ್ರಾಪ್ತಿ ಆಳ್ವ 86.48 ಪರ್ಸೆಂಟೈಲ್  (ಬಂಟ್ವಾಳದ ಸರಪಾಡಿಯ ಪ್ರವೀಣ್ ಆಳ್ವ ಹಾಗೂ ಸವಿತಾ ದಂಪತಿಗಳ ಪುತ್ರಿ), ತೀರ್ಥಾ ಶೆಟ್ಟಿ 85.92 ಪರ್ಸೆಂಟೈಲ್  (ಬಂಟ್ವಾಳದ ಮಣಿನಾಲ್ಕೂರಿನ ರಾಜೇಶ್ ಶೆಟ್ಟಿ ಹಾಗೂ ಸುಮಲತಾ ದಂಪತಿಗಳ ಪುತ್ರಿ) ಪಡೆದಿರುತ್ತಾರೆ. ಇವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top