ಪೆರ್ನಾಜೆಗೆ ಬಂದು ದಾಂಧಲೆ ಮಾಡಿ ತೆರಳಿದ ಕಾಡಾನೆ

Upayuktha
0

 



ಪುತ್ತೂರು: ನಿನ್ನೆ ರಾತ್ರಿ ಬಂದ ಗಜರಾಜ ಫೆ.12 ರಂದು ಮತ್ತೆ ಕುಮಾರ್ ಪೆರ್ನಾಜೆಯವರ ಕೆರೆಯಲ್ಲಿ ಈಜಾಡಿ ಗಜರಾಜ ಒಂದು ಅಡಿಕೆ ಮರ ಈಚಲ ಮರ ತಿಂದು ತೇಗಿದೆ. ತದನಂತರ ಸಮೀಪದ ರಾಘವೇಂದ್ರ ಭಟ್ರ ತೋಟಕ್ಕೆ ನುಗ್ಗಿ ಹತ್ತಕ್ಕೂ ಹೆಚ್ಚು ಬಾಳೆ ಗಿಡಗಳನ್ನು ಧ್ವಂಸ ಮಾಡಿ ಬಂದ ದಾರಿಯಲ್ಲೇ ಹಿಂತಿರುಗಿ ಮುಗೇರು ಗುಡ್ಡಡ್ಕ ಆನೆಗುಂಡಿ ಕಡೆ ತೆರಳಿದೆ.


ರಾತ್ರಿ ಅರಣ್ಯ ಇಲಾಖೆಯವರು ಸೈರನ್ ಮೊಳಗಿಸಿದರೂ ಆನೆ ದಾಂಧಲೆ ಮಾಡಿದೆ. ಸರಕಾರ ಲಕ್ಷಾಂತರ ರೂ ಖರ್ಚು ಮಾಡಿ ಸೋಲಾರ್ ಬೇಲಿ  ಅಳವಡಿಸಿದರೂ ಅದರ ನಿರ್ವಹಣೆಯಿಲ್ಲದ ಕಾರಣ ಅದು ಊಟಕ್ಕೆ ಇಲ್ಲದ ಉಪ್ಪಿನ ಕಾಯಂತಾಗಿದೆ. ಈ ಭಾಗದ ಕೃಷಿಕರ ಅಳಲನ್ನು ಕೇಳುವವರೇ ಇಲ್ಲದಂತಾಗಿದೆ.


ಸರಕಾರ ಇದರ ಬಗ್ಗೆ ಸೂಕ್ತ ಕ್ರಮ ವಹಿಸಿಕೊಳ್ಳಬೇಕೆಂದು ಊರಿನ ಕೃಷಿಕರು ಗ್ರಾಮಸ್ಥರು ಒತ್ತಾಯಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top