ಕಣ್ಣಿನೊಳಗಿನ ಬ್ರಹ್ಮಾಂಡ

Upayuktha
0


ರೆಪ್ಪೆಯ ಅಂಚಲಿ ಅಡಗಿದೆ ನೋಡು ನೂರು ಕನಸಿನ ಲೋಕ,

ಹೃದಯದ ಮಿಡಿತಕೆ ಕನ್ನಡಿ ಹಿಡಿದಿದೆ ಈ ಮೌನದ ಶ್ಲೋಕ ll೦೧ll 


ಬಾಹ್ಯ ಜಗತ್ತಿನ ಅರಿವ ಮೀರಿ ಒಳಗಣ್ಣಿನ ಈ ಪಯಣ,

ಭಾವನೆಗಳ ಅಲೆಗೆ ಸಿಲುಕಿ ಸೋತಿದೆ ಇಂದು ಈ ಮನ ll೦೨ll 


ಕಣ್ಣ ಹನಿಯಲಿ ಗ್ರಹಗಳ ಚಲನೆ, ಮನದ ಗಹನ ಮೌನ,

ಹೃದಯದ ಗೂಡಲಿ ಅಡಗಿದೆ ಯಾವುದೋ ನಿಗೂಢ ತಲ್ಲಣ ll೦೩ll 


ಕನಸಿನ ತೂಗುವ ಮಾಲೆಗಳಲಿ ನಕ್ಷತ್ರಗಳದ್ದೇ ಸಂತೆ,

ಪ್ರೀತಿಯ ಸೆಲೆಯಲಿ ಅರಳಿದೆ ಇಲ್ಲಿ ಅರಿಯದ ಭಾವದ ಕವಿತೆ ll೦೪ll 


ನೋಟದ ಆಳದಿ ಅಡಗಿದೆ ನೋಡು ನೂರಾರು ಜನ್ಮದ ಹಪಹಪಿ,

ಮೌನದ ಭಾಷೆಗೆ ಸಿಗಲಾರದು ಎಂದು ಈ ಹೃದಯದ ಸಂಕಲೆ ತಪ್ಪಿ ll೦೫ll 


ಕಣ್ಣೆಂಬ ಕಿಟಕಿಯಲಿ ಕಾಣುತ್ತಿದೆ ಹೊಸದೊಂದು ಸುಂದರ ಸೃಷ್ಟಿ,

ಮನದ ಭಾವಕೆ ಜೀವ ತುಂಬಿದೆ ಈ ಅದ್ಭುತ ಕಲಾ ದೃಷ್ಟಿ ll೦೬ll 


- ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top