ಅಲೋಶಿಯಸ್‍ನಲ್ಲಿ ಹಿಂದಿ ಸಾಂಸ್ಕೃತಿಕ ಉತ್ಸವ "ಪ್ರೇರಣಾ - 2026"

Upayuktha
0


ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಭಾಷಾ ಮತ್ತು ಸಾಂಸ್ಕೃತಿಕ ಅಧ್ಯಯನ ಶಾಲೆಯ ಹಿಂದಿ ವಿಭಾಗ ಮತ್ತು ಹಿಂದಿ ಸಂಘವು "ದೇಸಿ ಕಲಾಕರ್" ಎಂಬ ವಿಷಯದ ಮೇಲೆ ಹಿಂದಿ ಸಾಂಸ್ಕೃತಿಕ ಉತ್ಸವ ‘ಪ್ರೇರಣಾ – 2026’ ಅನ್ನು ಫೆಬ್ರವರಿ 18, 2026 ರಂದು ಕ್ಯಾಂಪಸ್‌ನಲ್ಲಿ ಆಯೋಜಿಸಿತ್ತು.


ಮುಖ್ಯ ಅತಿಥಿಯಾಗಿ ಬಾಲಿವುಡ್ ತಾರೆ ಪ್ರೀತ್ ಕಮಾನಿ, ಮತ್ತು ಗೌರವಾನ್ವಿತ ಅತಿಥಿಯಾಗಿ ಅಲೋಶಿಯಸ್‍ನ ಹಿಂದಿ ವಿಭಾಗದ ಮಾಜಿ ಮುಖ್ಯಸ್ಥ ಡಾ. ಮುಕುಂದ ಪ್ರಭು, ಆಗಮಿಸಿದ್ದರು. ಕುಲಪತಿ ರೆ. ಫಾ. ಡಾ. ಪ್ರವೀಣ್ ಮಾರ್ಟಿಸ್, ಎಸ್‌ಜೆ, ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. ಕಾರ್ಯಕ್ರಮ ಸಂಯೋಜಕರಾದ, ಕು. ರಾಯ್ಸಿ ರೇಖಾ ಬ್ರಾಗ್ಸ್ ಮತ್ತು ಡಾ. ಸಂಧ್ಯಾ ಯು. ಸಿರ್ಸಿಕರ್, ವಿಭಾಗ ಮುಖ್ಯಸ್ಥರಾದ್ದ ಡಾ. ಎಂ ಎ ನದಾಫ್ ಮತ್ತು ವಿದ್ಯಾರ್ಥಿ ಸಂಯೋಜಕರಾದ ರಫನ್ ಮತ್ತು ತ್ರಿಶಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಕಾರ್ಯಕ್ರಮದ ಸಂದರ್ಭದಲ್ಲಿ, ಹಿಂದಿ ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸೃಜನಶೀಲ ಮತ್ತು ಸಾಹಿತ್ಯ ಕೃತಿಗಳನ್ನು ಒಳಗೊಂಡ "ಪ್ರೇರಣಾ" ನಿಯತಕಾಲಿಕೆಯನ್ನು ಬಿಡುಗಡೆ ಮಾಡಲಾಯಿತು.



18 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ 178 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಳು ರೋಮಾಂಚಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಉತ್ಸವವನ್ನು ಪ್ರತಿಭೆಯ ಉತ್ಸಾಹಭರಿತ ಮತ್ತು ವರ್ಣರಂಜಿತ ಆಚರಣೆಯನ್ನಾಗಿ ಮಾಡಿದರು.


ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಚಿವ, ಎಂ ಎ ಗಫೂರ್ ಅಗಮಿಸಿದ್ದರು. ಗೌರವ ಅತಿಥಿಯಾಗಿ ನಟ ಮತ್ತು ಸಂಗೀತಗಾರ ಸ್ವೀಟನ್ ಹಾರ್ಟ್‌ಮನ್ ಭಾಗವಹಿಸಿದ್ದರು. ವಿಜೇತರಿಗೆ ಟ್ರೋಫಿಗಳನ್ನು ನೀಡಲಾಯಿತು. ಎಸ್‌ಡಿಎಂ ಉಜಿರೆ ಕಾಲೇಜು ಚಾಂಪಿಯನ್‌ಶಿಪ್ ಅನ್ನು ಮತ್ತು ರನ್ನರ್ಸ್ ಅಪ್ ಅನ್ನು ಮಂಗಳೂರಿನ ಕೆನರಾ ಕಾಲೇಜು ಗೆದ್ದುಕೊಂಡಿತು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top