ಅಮೆರಿಕದಲ್ಲಿ ಹಿಮಪಾತ; ಹೆಪ್ಪುಗಟ್ಟಿರುವ ನಯಾಗರಾ ಜಲಪಾತ

Upayuktha
0


ಕಳೆದೊಂದು ವಾರದಿಂದ ಅಮೆರಿಕದ ಪೂರ್ವಭಾಗವೆಲ್ಲ ಚಳಿಯಿಂದ ನಡುಗುತ್ತಿರುವ ಸಮಾಚಾರವನ್ನು ಮಾಧ್ಯಮಗಳಲ್ಲಿ ನೋಡಿಯೇ ಇರುತ್ತೀರಿ. ಜನವರಿ 24,25ರ ವಾರಾಂತ್ಯದಲ್ಲಿ ಒಂದೂವರೆಯಿಂದ ಮೂರುನಾಲ್ಕು ಅಡಿಗಳಷ್ಟು ಬಿದ್ದಿರುವ ಹಿಮ ಆಮೇಲೆ ಕರಗಿಯೇ ಇಲ್ಲ. ಏಕೆಂದರೆ ಹಗಲಲ್ಲಿ ಬಿಸಿಲು ಬಂದರೂ ತಾಪಮಾನ ಸೊನ್ನೆ ಡಿಗ್ರೀ ಸೆಂಟಿಗ್ರೇಡ್‌ಗಿಂತ ಹೆಚ್ಚಿಲ್ಲ. ಮುಖ್ಯ ರಸ್ತೆಗಳನ್ನು ಉಪ್ಪಿನಹರಳು ಚೆಲ್ಲಿ ಹಿಮಕರಗುವಂತೆ ಮಾಡಿ ವಾಹನಗಳಿಗೆ ತೆರವುಗೊಳಿಸಲಾಗಿದೆ ಯಾದರೂ  ರಸ್ತೆಬದಿಗಳಲ್ಲಿ ಮತ್ತು ಪಾರ್ಕಿಂಗ್ ಲಾಟ್‌ಗಳಲ್ಲಿ  ಹಿಮದ ರಾಶಿ ಜಮೆಯಾಗಿದೆ, ಅದು ಕಾಂಕ್ರೀಟ್‌ನಂತೆ ಗಟ್ಟಿಯಾಗಿದೆ. ಅದನ್ನು "ಸ್ನೋಕ್ರೀಟ್" (snowcrete) ಎಂದು ಕರೆದು ಜನರು ಹಿಡಿಶಾಪ ಹಾಕುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ಕಳೆದೊಂದು ವಾರದಿಂದ ವಿದ್ಯುತ್ ಸರಬರಾಜು ಸಹ ಇಲ್ಲ. ಮತ್ತೆ ಕೆಲವು ರಾಜ್ಯಗಳಲ್ಲಿ ಈ ವಾರಾಂತ್ಯ ಮತ್ತೊಮ್ಮೆ ಹಿಮಪಾತ ಆಗಿದೆ. ಇನ್ನೂ ಒಂದುವಾರ ಪರಿಸ್ಥಿತಿ ಸುಧಾರಿಸುವ ದೇಖಿ ಇಲ್ಲ. ಇದುವರೆಗೆ ನೂರಕ್ಕೂ ಹೆಚ್ಚು ಸಾವು ಸಂಭವಿಸಿದ್ದು ಈ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ.


ಏತನ್ಮಧ್ಯೇ ನಯಾಗರಾ ಜಲಪಾತದ ಅವಸ್ಥೆ ಏನಾಗಿದೆ ಎಂದು ಈ ಚಿತ್ರಗಳಲ್ಲಿ ನೋಡಿ!


- ಶ್ರೀವತ್ಸ ಜೋಶಿ; ವಾಷಿಂಗ್ಟನ್ ಡಿಸಿ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top