ಸಣ್ಣ ಕಥೆ: ಡ್ರಾಪ್

Upayuktha
0


ದ್ಯಾನದಲ್ಲಿ ಅವನು ಅವಳ ಪಕ್ಕದಲ್ಲಿ ಕುಳಿತಿದ್ದ, ಅವನಿಗೆ ಅವಳೆಂದರೆ ಪಂಚಪ್ರಾಣ. ಅವಳಿಗಾಗಿ ತನ್ನ ಜೀವವನ್ನೇ ಕೊಡಲು ಸಿದ್ಧನಿದ್ದ. ಆ ದಿನ ಅವಳು ಅವನ ಇಷ್ಟವಾದ ಕಡುನೀಲಿ ಸೀರೆ ಧರಿಸಿದ್ದಳು.


ಅವಳಿಗೆ ಇಷ್ಟವಾದಂತೆ ಅವನು ಬಿಳಿಯ ಅಂಗಿ ಹಾಗೂ ನಸು ಕಂದು ಪಾಂಟ್ ಧರಿಸಿದ್ದ. ಇಬ್ಬರ ಜೋಡಿ ಸೂರ್ಯಾಸ್ತ ಹೊಂದುವ ಸೂರ್ಯ ಸಮುದ್ರದ ತುದಿಯಲ್ಲಿ ಮುಳುಗುವ ಕಿರಣಗಳಂತೆ ಸುಂದರವಾಗಿ ಕಾಣುತ್ತಿತ್ತು. ಅವನು ಅವಳ ಹೆಗಲ ಮೇಲೆ ಕೈ ಇಟ್ಟು ಗಂಟೆಗಳ ಕಾಲ ಏನನ್ನೋ ಮಾತಾಡುತ್ತಲೇ ಇದ್ದ, ಅವಳೋ, ಅದನ್ನೇ ಇಂಪಾದ ಸಂಗೀತದಂತೆ ಕೇಳುತ್ತಲೇ ಇದ್ದಳು.


ಸಂಜೆಯ ಕಿರಣಗಳು ಅವಳ ಕೆನ್ನೆಯ ಮೇಲೆ ಮುತ್ತಿಟ್ಟು ಚಿನ್ನದಂತೆ ಹೊಳೆಯಿತು. ಅವನೋ ಅದನ್ನು ನೋಡಿ ಮೋಡಿಗೊಳಗಾದ. ಬಾ ನಾವೊಂದು ಪಾನಿಪುರಿ ತಿನ್ನುವ ಎಂದ. ಅವಳು ಇನ್ನೇನು ಏಳಬೇಕು ಎನ್ನುವಷ್ಟರಲ್ಲಿ ಇವನು ಅಧಿಕಪ್ರಸಂಗಿ ಅವಳನ್ನು ಸೊಂಟ ಬಳಸಿ ಎಳೆದೇ ಬಿಟ್ಟ ಅವನೆಡೆಗೆ. ಅವಳು ಮುಂಗಾರು ಮಳೆಗೆ ಸಿಲುಕಿದ ಕರಾವಳಿಯ ಅಡಿಕೆ ಮರದಂತೆ ಅವನೆಡೆಗೆ ಒಂದೇ ಸಮನೆ ಬಾಗಿದಳು. ಹುಸಿ ಮುನಿಸಿನಿಂದ ಬೆನ್ನಿಗೊಂದು ಬಾರಿಸಿದ ಅವಳು, ನಾ ನಿಂಜೊತೆ ಬರಲ್ಲ ಎಂದಳು.


ಅವನಿಗೆ ಗೊತ್ತು ಅವಳ ಸ್ವಭಾವ, ಕೈ ಹಿಡಿದು ಎಳೆದು ಕೊಂಡೊಯ್ದ. ಪಾನಿಪುರಿ ತಿನ್ನಲು ಹೆಚ್ಚು ಸಮಯ ಬೇಕಾಗಲಿಲ್ಲ, ತಿಂದ ನಂತರ, ಅವನು ಬೈಕ್ ಏರಿ, ಕುಳಿತುಕೋ, ನಿನ್ನ ಹಾಸ್ಟೆಲ್ ಗೆ ಡ್ರಾಪ್ ಮಾಡ್ತೇನೆ ಎಂದ. ಅವಳು ಎಷ್ಟೋ ದಿನ ಅವನ ಜೊತೆ ಹೋದವಳು ಅಂದು ಬೇಡ ಎಂದಳು. ನಾನು ರಿಕ್ಷಾದಲ್ಲಿ ಹೋಗುವೆ ಎಂದಳು. ಅವನು ಒತ್ತಾಯಪೂರ್ವಕವಾಗಿ ಅವಳನ್ನು ಕುಳ್ಳಿರಿಸಿದ, ಬೈಕ್ ಹೊರಟಿತು.  ಅರ್ಧ ದಾರಿಯಲ್ಲಿ ವೇಗವಾಗಿ ಹೋಗುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಿತ್ತು, ಬಿದ್ದ ಇಬ್ಬರ ಮೇಲೆ ಹಿಂದೆಯಿಂದ ಬಂದ ಲಾರಿ ಹರಿಯಿತು. ಸಂಜೆಯ ಸೂರ್ಯಾಸ್ತ ಸಂಪೂರ್ಣವಾಯಿತು.


ಬ್ಯಾಗ್ನಲ್ಲಿ ಇದ್ದ ಅವಳ ಮೊಬೈಲ್ ಗೊಣಗಲು ಸೇರಿದ ಜನರಲ್ಲೊಬ್ಬ ಎತ್ತಿದ, ಅದೊಂದ್ ಮೆಸೇಜ್ ಅಷ್ಟೇ “ಬೈಕ್ ಬ್ರೇಕ್ ಡಿಸ್ಕನೆಕ್ಟ್ ಮಾಡಿದೀನಿ, ಬೇಗ ರಿಕ್ಷಾದಲ್ಲಿ ನನ್ನ ಮನೆಗೆ ಬಾ, ಕಡುನೀಲಿ ಸೀರೆ ನಿಂಗೆ ತುಂಬಾ ಚೆನ್ನಾಗಿ ಕಾಣಿಸ್ತಿದೆ, ತಡಿಯೋಕೆ ಆಗ್ತಿಲ್ಲ ನಿನ್ ಸನಿಹ ಬರೋಕೆ” ಆಮೇಲೊಂದೆರಡು ಮುತ್ತಿನ ಎಮೋಜಿ. 


ಬೈಕ್ ಬಿಟ್ಟವ ಅವಳನ್ನು ಪ್ರೀತಿಸಿ ಸತ್ತ, ಅವಳು ಇನ್ನೊಬ್ಬನನ್ನು ಪ್ರೀತಿಸಿ ಸತ್ತಳು, ಇನ್ನೊಬ್ಬ ಬದುಕುಳಿದೂ ಸತ್ತ.


ನನ್ನೊಬ್ಬ ಗೆಳತಿ ಹೇಳುತ್ತಿದ್ದಳು, ಪ್ರೀತಿ ಕುರುಡು ಎಂದು, ಆದರೆ ಕೆಲವೊಮ್ಮೆ ಕುರುಡಿನ ಜೊತೆ ಕಿವುಡು ಹಾಗೂ ಮತಿಭ್ರಮೆಯೂ ಹೌದು ಎಂದು.


-ಸಚಿನ್ ಕುಳಮರ್ವ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top