ಮಂಗಳೂರು: ಭರತಾಂಜಲಿ (ರಿ), ಕೊಟ್ಟಾರ ಸಂಸ್ಥೆಯು ಶಿವರಾತ್ರಿ ಪ್ರಯುಕ್ತ ಫೆಬ್ರವರಿ 14 ಮತ್ತು 15ರಂದು ತಮಿಳುನಾಡಿನ ವಿವಿಧ ಪ್ರಸಿದ್ಧ ದೇವಾಲಯಗಳಲ್ಲಿ ಆಯೋಜಿಸಿದ್ದ ನಾಟ್ಯಾಂಜಲಿ ಉತ್ಸವದಲ್ಲಿ ಸಂಸ್ಥೆಯ ಕಲಾವಿದರು ಮನಮುಟ್ಟುವ ನೃತ್ಯ ಪ್ರದರ್ಶನ ನೀಡಿದರು.
ವಿದುಷಿ ಪ್ರತಿಮಾ ಶ್ರೀಧರ್ ಮತ್ತು ವಿದುಷಿ ಪ್ರಕ್ಷಿಲ ಜೈನ್ ಅವರ ನಿರ್ದೇಶನದಲ್ಲಿ, ಗುರು ಶ್ರೀಧರ ಹೊಳ್ಳ ಅವರ ಸಾರಥ್ಯದಲ್ಲಿ ಈ ನೃತ್ಯೋತ್ಸವವು ತಮಿಳುನಾಡಿನ ಖ್ಯಾತ ದೇವಾಲಯಗಳಾದ ಚಿದಂಬರಂ ನಟರಾಜ ದೇವಾಲಯ, ಶ್ರೀ ಪಿರಿವಾಯಿ ಮರುಂಡಿಶ್ವರರ್ ದೇವಸ್ಥಾನ, ನಾಗಪಟ್ಟಿನಂ ನಿಲಾಯದಾಕ್ಷಿ ಅಮ್ಮೈ ದೇವಸ್ಥಾನ, ಗೋರಕ್ ಸಿದ್ಧರ್ ದೇವಸ್ಥಾನ ಹಾಗೂ ತಿರುಮಯಿಜ್ಞಾನಂ ಬ್ರಹ್ಮಪುರೀಶ್ವರಂ ದೇವಸ್ಥಾನಗಳಲ್ಲಿ ನಡೆಯಿತು.
ಈ ಉತ್ಸವದಲ್ಲಿ ಭರತಾಂಜಲಿ ಸಂಸ್ಥೆಯ ವಿದುಷಿಗಳಾದ ಮಾನಸ ಹರೀಶ್, ಅದಿತಿ, ವಂದನಾ ರಾಣಿ ಹಾಗೂ ಚಿನ್ಮಯಿ, ವರ್ಷಾ, ಧ್ರುವಿ, ರಮ್ಯಶ್ರೀ, ಅನನ್ಯ ಕೆ. ಭಟ್, ಹರಿಣಿ ವಿ. ಸೇರಿದಂತೆ ಹಲವು ವಿದ್ಯಾರ್ಥಿನಿಯರು ಭರತನಾಟ್ಯದ ಸುಂದರ ನೃತ್ಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಭಕ್ತರು ಮತ್ತು ಕಲಾರಸಿಕರಿಂದ ಪ್ರಶಂಸೆ ಗಳಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

