'ವಿಶ್ವ ಚೈತನ್ಯರು ಶ್ರೀಸತ್ಯಾತ್ಮತೀರ್ಥರು'

Upayuktha
0


ಅಪರಿಮಿತ ಕತ್ತಲೆಯಲಿ ಕಂಡ ಬೆಳಕು ಸತ್ಯಾತ್ಮರು 

ಜಗದ ಪುಣ್ಯ ಪ್ರಭೆಯ ಮಧುರ ಮಧುರತೆ ನೀವು

ಅಂಧಕಾರವನೊಡಿಸುವ ಪುಣ್ಯ ಪ್ರಭೆಯು ನೀವು

ಮನಶುದ್ಧಿಯ ವೈಕುಂಠದ ಅರಸು ನೀವೇ ನೀವು!


ಅಕ್ಷಯ ತೃತಿಯಾದ ಶುಭೋದಯವೇ ಶ್ರೀಸತ್ಯರು

ಸ್ವರ್ಗವೇ ಇಲ್ಲಿಹುದು ಆಗ ಇದು ಸತ್ಯವು ನೋಡು

ಬ್ರಹ್ಮ ವಿಷ್ಣು ಮಹೇಶ್ವರ ಎಲ್ಲರೂ ನಿಮ್ಮ ಶ್ರೀವಾಣಿ

ಶ್ರೀಹರಿ ದರುಶನ ನಿಮ್ಮ ಮುದ್ರೆ ಅಕ್ಷತೆಯಲ್ಲಡಗಿದೆ!


ವಿಶ್ವಚೇತನದೊಡಲು ಭರತ ಭೂಮಿಯ ನೆಲವು

ಸಕಲ ಶಕ್ತಿಯ ತಾಣವು ಮೂಲರಾಮನ ಸೊಬಗು 

ರಾಮ ಹನುಮರ ಜೋಡಿ ತುಂಬ ಮನಮೋಹಕವು

ಹದಿನೆಂಟು ತೀರ್ಥ ಪುಣ್ಯಸ್ನಾನದ ದೀಪದಾರತಿಯು!


ಶ್ರದ್ದೆಯಿಂದಲಿ ಪೂಜಿಸುವ ಮನುಜರಿಗೆ ದೊರೆವುದು

ಸೂರ್ಯಸ್ನಾನದ ಸುಪ್ರಭಾತದ ಒಲುಮೆ ಅನುರಾಗ

ಸಕಲ ಕಾರ್ಯಗಳು ಕೈಗೂಡುವವು ಹೂವನೆತ್ತಿದಂತೆ

ಮಂಗಳಕರ ಶುಭಕರ ದಿನಕರ ಸರ್ವಫಲ ಸಿದ್ಧಿರಸ್ತು!


ಅನಂತನೇ ಜಗದೀ ತಾನು ಅನಂತವಾದಾಗ

ಅಲ್ಲಿರುವುದೇನು? ಬರೀ ಸಮರ್ಪಣಾಭಾವ

ನಿಶ್ಯಬ್ದಶೂನ್ಯಧ್ಯಾನ ಸಿರಿಸಮರ್ಥ ಯೋಗಿರತ್ನ

ಓಂಕಾರ ದುಂಧುಬಿ ರವಿರಥದ ಜೇನು ಸಾರಥಿ!


ಶುಭವಾಗಲಿ ಎಂದೆಂದಿಗೂ ಸತ್ಯದ ಬೆಳಕೇ

ಹೀಗೇ ನಗುತಲಿರಲಿ ಸದಾ ಸಾಲು ದೀಪಗಳು

ಹೆಪ್ಪಿಟ್ಟ ಪ್ರೀತಿಯ ಒಡಲು ಕಾರುಣ್ಯದ ಕಡಲು

ಶ್ರೀಗುರು ಜ್ಞಾನ ಲೋಕದ ಅಮೃತ ಸಿಂಚನವು! 


ಕಾರ್ಯದಲಿ ಮಾತಿನಲಿ ಕೃತಿಯಲಿ

ಎಲ್ಲವೂ ಒಂದೇ ಸುಸ್ವರ ಭಾವಗೀತೆ!

ದೇಹ ಉಸಿರು ಮನಸ್ಸು ಬುದ್ಧಿ  ಆತ್ಮವು

ಅದೃಶ್ಯ ದೈವ ಪ್ರೇರಣೆಯ ಜೀವನಗಾಥೆಯು

ಶ್ರೀಮದಾನಂದತೀರ್ಥರ ತಪಃಫಲ ಸಿದ್ಧಿಯೇ

ಸರ್ವಪರಿಪೂರ್ಣ ಶ್ರೀಸತ್ಯಾತ್ಮ ಯಶೋಗಾಥೆ! 


ಶುಭೋದಯ ತೆರೆದಿದೆ ಮನೆ ಮನಗಳ ಅಂಗಣದಿ

ಸತ್ಯಾತ್ಮಶ್ರೀಗಳ ತೇಜಸ್ಸಿನ ರಂಗೋಲಿ ಅರಳಿತಿಲ್ಲಿ 

ಬರುವ ಭಾಗ್ಯವ ಬರಲಿ ಬಂದ ಹರುಷವ ಇರಿಸು

ಎದೆತುಂಬಿ ಹಾಡೊಮ್ಮೆ ಶ್ರೀಸತ್ಯಾತ್ಮತೀರ್ಥರ ಗೀತೆ!



- ಶ್ರೀನಿವಾಸ ಜಾಲವಾದಿ, ಸುರಪುರ

9886563179


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Tags

Post a Comment

0 Comments
Post a Comment (0)
To Top