ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ: ಫೆಬ್ರವರಿ ತಿಂಗಳ ಸ್ವಚ್ಛತಾ ಶ್ರಮದಾನಕ್ಕೆ ಚಾಲನೆ

Upayuktha
0


ಮಂಗಳೂರು: ರಾಮಕೃಷ್ಣ ಮಿಷನ್– ಸ್ವಚ್ಛ ಮಂಗಳೂರು ಅಭಿಯಾನದ ಫೆಬ್ರವರಿ ತಿಂಗಳ ಸ್ವಚ್ಛತಾ ಅಭಿಯಾನಕ್ಕೆ ಕಂಕನಾಡಿ ಓಲ್ಡ್ ರೋಡಿನಲ್ಲಿ ಅಧಿಕೃತ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮವನ್ನು ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ಜಾರ್ಜ್ ಜೀವನ್ ಸಿಕ್ವೇರಾ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ  ಅನಿಲ್ ಕುಮಾರ್ ಎಸ್. ಭೂಮರೆಡ್ಡಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಲಿಲಿಯಾ ಆರ್ಚ್ಡ್ ಸಂಸ್ಥೆಯ ಮಾಲೀಕರಾದ ಜೋಸೆಫ್ ಹಾಗೂ ಡಾ. ಶೇಷಪ್ಪ ಅಮೀನ್ ಅವರು ಉಪಸ್ಥಿತರಿದ್ದು ಸ್ವಯಂಸೇವಕರನ್ನು ಪ್ರೋತ್ಸಾಹಿಸಿದರು.


ಸಭೆಯನ್ನು ಉದ್ದೇಶಿಸಿ ಮಾತನಾಡಿದ ಫಾ. ಜಾರ್ಜ್ ಜೀವನ್ ಸಿಕ್ವೇರಾ ಅವರು, “ಶಿಕ್ಷಿತರು ಕೂಡ ಕೆಲವೊಮ್ಮೆ ಪ್ಲಾಸ್ಟಿಕ್ ಬಳಕೆ ತಪ್ಪಿಸುವಂತಹ ಸರಳ ಜವಾಬ್ದಾರಿಗಳನ್ನು ಮರೆತು ಬಿಡುತ್ತಾರೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಬಗ್ಗೆ ನಾವು ಹೆಚ್ಚು ಗಮನ ಹರಿಸುವುದಿಲ್ಲ. ಈ ನಿಟ್ಟಿನಲ್ಲಿ ನಿರಂತರ ಜಾಗೃತಿ ಅಗತ್ಯವಿದೆ” ಎಂದು ತಿಳಿಸಿದರು. ಈ ಅಭಿಯಾನವನ್ನು ಕೈಗೊಂಡು ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುತ್ತಿರುವ ರಾಮಕೃಷ್ಣ ಮಿಷನ್‌ನ್ನು ಅಭಿನಂದಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ ಅವರು, “ಸ್ವಚ್ಛ ಮಂಗಳೂರು ಒಂದು ಸುಂದರ ಹಾಗೂ ಮೌಲ್ಯಾಧಾರಿತ ಪರಿಕಲ್ಪನೆ. ಇದು ‘ವಸುಧೈವ ಕುಟುಂಬಕಂ’—ಒAದು ಜಗತ್ತು, ಒಂದು ಕುಟುಂಬ ಎಂಬ ತತ್ವವನ್ನು ಪ್ರತಿಬಿಂಬಿಸುತ್ತದೆ. ಪ್ರಕೃತಿ ನಮಗೆ ಎಲ್ಲವನ್ನೂ ನೀಡುತ್ತಿದೆ; ಆದರೆ ನಾವು ಪ್ರಕೃತಿಗೆ ಏಕೆ ಕೃತಜ್ಞತಾಪೂರ್ವಕವಾಗಿ ಸೇವೆ ನೀಡುತ್ತಿಲ್ಲ? ಯುವಕರು ಇಂತಹ ಅಭಿಯಾನಗಳಲ್ಲಿ ಸೇರಿ ಸಕ್ರಿಯವಾಗಿ ಸೇವೆ ಸಲ್ಲಿಸಬೇಕು” ಎಂದು ಕರೆ ನೀಡಿದರು.


ಶ್ರಮದಾನ ಚಟುವಟಿಕೆಗಳ ಭಾಗವಾಗಿ, ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಧನೇಶ್ ಕುಮಾರ್ ಅವರ ನೇತೃತ್ವದಲ್ಲಿ ಡಾ. ಜಯೇಶ್ ಚಂದ್ರನ್, ಡಾ. ರಾಕೇಶ್ ಕೃಷ್ಣ, ಡಾ. ಅರುಣ್ ವರ್ಗೀಸ್, ಸೊಕ್ರೆಟಸ್ ಹಾಗೂ ಅವರ ವಿದ್ಯಾರ್ಥಿಗಳು ಫಾದರ್ ಮುಲ್ಲರ್ ಆಸ್ಪತ್ರೆಯನ್ನು ಸಂಪರ್ಕಿಸುವ ಮೇಲ್ಮಾರ್ಗವನ್ನು ಸ್ವಚ್ಛಗೊಳಿಸಿದರು. ಈ ವೇಳೆ ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ಕಸವನ್ನು ತೆರವುಗೊಳಿಸಲಾಯಿತು, ಅತಿಯಾಗಿ ಬೆಳೆದ ಗಿಡಗಳನ್ನು ಕತ್ತರಿಸಲಾಯಿತು ಹಾಗೂ ಅನಧಿಕೃತ ಬ್ಯಾನರ್‌ಗಳನ್ನು ತೆಗೆದುಹಾಕಲಾಯಿತು.


ಅದೇ ಸಮಯದಲ್ಲಿ, ಹಿರಿಯ ಸ್ವಯಂಸೇವಕರಾದ ಉದಯ್ ಕೆ.ಪಿ., ತಾರಾನಾಥ್ ಆಳ್ವ, ರಾಜೀವಿ ಚಂದ್ರಶೇಖರ, ವಸಂತಿ ನಾಯಕ್, ಬಬಿತಾ ಶೆಟ್ಟಿ, ನೈತಿಕ್ ಶೆಟ್ಟಿ, ಕಮಲಾಕ್ಷ ಪೈ, ಬಾಲಕೃಷ್ಣ ಭಟ್, ಗೋಪಿನಾಥ್ ರಾವ್, ಅನಿರುದ್ಧ ನಾಯಕ್, ಪ್ರೊ. ಪ್ರಕಾಶ್, ಶ್ರೀಹರ್ಷ ಮತ್ತು ಭವಿತ್ ಸಾಲಿಯನ್ ಅವರು ಪಂಪ್‌ವೆಲ್ ಸಂಪರ್ಕಿಸುವ ಕೆಳಮಾರ್ಗದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಅವರು ಪ್ಲಾಸ್ಟಿಕ್ ಕಸವನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದ ಬಿದ್ದ ಮರದ ಕೊಂಬೆಗಳನ್ನು ತೆಗೆದುಹಾಕಿದರು. ಅಲ್ಲದೆ, ಕಾಲುವೆಗಳಲ್ಲಿ ಇಳಿದು ಜಮಾಗಿದ್ದ ಪ್ಲಾಸ್ಟಿಕ್ ಕಸವನ್ನು ಹೊರತೆಗೆಯಲಾಯಿತು. ಈ ಕಾರ್ಯದಲ್ಲಿ ಸೇಂಟ್ ಜೋಸೆಫ್ ಎಂಜಿನಿಯರಿAಗ್ ಕಾಲೇಜಿನ ವಿದ್ಯಾರ್ಥಿಗಳಾದ ಕೀರ್ತನ್, ರಂಜನ್, ಲಿಕಿತ್, ವಿವೇಕ್, ಉಜ್ವಲ್, ತರುಣ್, ತೇಜಸ್ ಮತ್ತು ಶ್ರೇಯಸ್ ಅವರು ಉತ್ಸಾಹದಿಂದ ಭಾಗವಹಿಸಿ ಶ್ರಮದಾನಕ್ಕೆ ಶಕ್ತಿ ತುಂಬಿದರು.


ಈ ಮಾಸಿಕ ಸ್ವಚ್ಛತಾ ಅಭಿಯಾನದಲ್ಲಿ ಸಾರ್ವಜನಿಕರು ಸ್ವಯಂಸೇವಕರಾಗಿ ಭಾಗವಹಿಸಬೇಕೆಂದು ಮನವಿ ಮಾಡಲಾಗಿದೆ. ಈ ಉಪಕ್ರಮವು ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯುತ್ತಿದ್ದು, ಪರಿಸರ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಎಂಆರ್‌ಪಿಎಲ್ ಸಂಸ್ಥೆಯ ಬೆಂಬಲವನ್ನು ಹೊಂದಿದೆ.


ಬ್ಲ್ಯಾಕ್‌ಸ್ಪಾಟ್ ತೆರವು ಕಾರ್ಯ

ಕಂಕನಾಡಿ ಓಲ್ಡ್ ರೋಡಿನಲ್ಲಿನ ಮೂರು ಪ್ರಮುಖ ಕಸದ ಬ್ಲ್ಯಾಕ್‌ಸ್ಪಾಟ್‌ಗಳನ್ನು ತೆರವುಗೊಳಿಸುವ ವಿಶೇಷ ಕಾರ್ಯವನ್ನು ಹಿರಿಯ ಸ್ವಯಂಸೇವಕರಾದ ದಿಲ್ ರಾಜ್ ಆಳ್ವ, ಸಂದೀಪ್ ಗರೋಡಿ, ಪ್ರಕಾಶ್ ಗರೋಡಿ, ಸಚಿನ್ ಶೆಟ್ಟಿ, ಸೌರಾಜ್ ಮಂಗಳೂರು, ಯೋಗೀಶ್ ಕಾರ್ಯತಡ್ಕ, ನಾಗೇಶ್ ಹಾಗೂ ಪದ್ಮನಾಭ ಸಾಲಿನ್ ಅವರು ಕೈಗೊಂಡರು. ಅವರ ನಿರಂತರ ಶ್ರಮದಿಂದ 1.5 ಟನ್ ಹೆಚ್ಚು ಕಸವನ್ನು ಸಂಗ್ರಹಿಸಲಾಯಿತು. ಜೊತೆಗೆ, ಸುತ್ತಮುತ್ತಲಿನ ಅಪಾರ್ಟ್ಮೆಂಟ್ ನಿವಾಸಿಗಳಲ್ಲಿ ಜಾಗೃತಿ ಮೂಡಿಸಿ, ತಮ್ಮ ಪರಿಸರವನ್ನು ಸ್ವಚ್ಛವಾಗಿ ಕಾಯ್ದುಕೊಳ್ಳುವ ಹೊಣೆಗಾರಿಕೆಯನ್ನು ಸ್ವೀಕರಿಸುವಂತೆ ಪ್ರೇರೇಪಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top