ಸುದಾನ ಶಾಲೆಯಲ್ಲಿ ‘ವೃತ್ತಿ ಮಾರ್ಗದರ್ಶನ’ ಕಾರ್ಯಾಗಾರ

Upayuktha
0


ಪುತ್ತೂರು: ರೋಟರಿ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಫೆಬ್ರವರಿ 3 ರಂದು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸೈಂಟ್ ಅಲೋಶಿಯಸ್ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲರಾದ ಪ್ರೊ. ರೊನಾಲ್ಡ್ ಪಿಂಟೋ ರವರು ಹತ್ತನೇ ತರಗತಿಯ ನಂತರ ಆಯ್ಕೆಮಾಡಿಕೊಳ್ಳಬಹುದಾದ ವಿವಿಧ ಕೋರ್ಸ್ ಮತ್ತು ವೃತ್ತಿಗಳ ಬಗ್ಗೆ ವಿವರಿಸಿದರು. ಪರೀಕ್ಷೆ ಎದುರಿಸಲು ತಯಾರಿ ಹೇಗಿರಬೇಕು? ಎಂಬ ಸಲಹೆ ನೀಡಿದರು. ವಿದ್ಯಾರ್ಥಿಗಳ ಜೊತೆಗೆ ಸಂವಹನ ನಡೆಸಿದರು. 


ಮುಖ್ಯ ಅಧ್ಯಕ್ಷತೆವಹಿಸಿದ್ದ ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ರವರು   ‘ಸದವಕಾಶಗಳನ್ನು ಬಳಸಿಕೊಂಡು ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಿ’ ಎಂದು ಕರೆ ನೀಡಿದರು. 


ವೇದಿಕೆಯಲ್ಲಿ  ರೊಟರಿ ಎಲೈಟ್ ಸೆಕ್ರೆಟರಿ ರೊ. ಪದ್ಮಾವತಿ, ರೋಟರಿ ಕ್ಲಬ್ ನ ಅಸಿಸ್ಟೆಂಟ್ ಗವರ್ನರ್ ರೊ. ಅಬ್ದುಲ್ ರಜಕ್ ಕಬಕ್ಕಾರ್ ರೊಟರಿ ಎಲೈಟ್ ಅಧ್ಯಕ್ಷ ರೊ. ಶಕೀರ್, ಯುತ್ ಕ್ಲಬ್ ಚೆಯರ್‍ಮೆನ್ ರೊ. ಸುಶಾಂತ್ ಹಾರ್ವಿನ್ ಮತ್ತು ಸದಸ್ಯರಾದ ರೊ. ಆಸ್ಕರ್ ಆನಂದ್, ರೊ. ಮೌನೇಶ್ ವಿಶ್ವಕರ್ಮ, ರೊ. ಬಾಲು ನಾಯ್ಕ, ರೊ. ಜಾನ್ಸನ್, ರೊ. ಸ್ವೀಡಲ್, ರೊ. ರಂಜಿತ್ ಮಥಾಯಿಸ್, ಮತ್ತು ಉಪಮುಖ್ಯ ಶಿಕ್ಷಕಿ ಲವೀನ ಹನ್ಸ್ಲ್ ಉಪಸ್ಥಿತರಿದ್ದು ಸಹಕರಿಸಿದರು. 


ಸುದಾನ ಇಂಟ್ಯರಾಕ್ಟ್ ಕ್ಲಬ್‍ನ ವಿದ್ಯಾರ್ಥಿ ಪ್ರತಿನಿಧಿ ಸಿಯೋನಾ ಅಸುಂತಾ ಲೋಬೋ (10ನೇ) ಸ್ವಾಗತಿಸಿ, ವಿದ್ಯಾರ್ಥಿನಿ ಪೂಜಾ (10ನೇ)  ಧನ್ಯವಾದವನ್ನು ಅರ್ಪಿಸಿದರು. ವಿದ್ಯಾರ್ಥಿ ಪವನ್ ಕುಮಾರ್ (10ನೇ)  ಸಂಪನ್ಮೂಲ ವ್ಯಕ್ತಿ ಪ್ರೊ. ರೊನಾಲ್ಡ್ ಪಿಂಟೋ ಅವರನ್ನು ಪರಿಚಯಿಸಿದರು. ವಿದ್ಯಾರ್ಥಿ ಉಜ್ವಲ್ (10ನೇ)   ಕಾರ್ಯಕ್ರಮವನ್ನು ನಿರೂಪಿಸಿದರು. ಸುದಾನ ಇಂಟ್ಯರಾಕ್ಟ್ ಕ್ಲಬ್ ಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಹ ಶಿಕ್ಷಕಿ ಗ್ಲಾಡಿಸ್ ಶೆರೋನ್, ವಿನುತಾ ಸಹಕರಿಸಿದರು. 


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top