ಕವನ: ನನ್ನೊಳಗಿನ ಮೌನ

Upayuktha
0


ಕತ್ತಲ ಕವಚದಲಿ ಅಡಗಿದೆ ನೂರು ನೋವಿನ ಕಥೆ,

ಜೊತೆಗ್ಯಾರೂ ಇಲ್ಲದಾಗ ನಾನೇ ನನಗೆ ಜೊತೆ ll೦೧ll 


ಹೊರಗಿನ ಜಗತ್ತಿಗೆ ಮುಗುಳುನಗೆಯ ಮುಖವಾಡ,

ನನ್ನೀ ಮೌನದಲಿ ಅಡಗಿದೆ ಒಂದು ದೊಡ್ಡ ಹೋರಾಟ ll೦೨ll 


ನನ್ನ ತೋಳ ಬಂಧನವೇ ನನಗೆ ಸಾಂತ್ವನದ ಗೂಡು,

ಕಣ್ಣೀರು ಒರೆಸುವ ಕೈಗಳಿಗಾಗಿ ಏಕೆ ಈ ಹುಡುಕಾಟದ ಹಾಡು? ll೦೩ll 


ನೆರಳಾಗಿ ಕಾಡುವ ನೆನಪುಗಳ ನಡುವೆ ನಾನು ನನಗಾಗಿ ಬದುಕುವೆ,

ನನ್ನನ್ನೇ ನಾನು ಪ್ರೀತಿಸುತ್ತಾ, ಈ ಒಂಟಿತನವ ಸವಿಯುವೆ ll೦೪ll 


 ಶರಣೆ: ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Tags

إرسال تعليق

0 تعليقات
إرسال تعليق (0)
To Top