ಒಲವಿನ ಓಲೆ

Upayuktha
0



ಕೈಲಿ ಹಿಡಿದು ಲೇಖನಿ, ಮನದ ಪುಟವ ತೆರೆದವಳು,

ಒಲವ ನೆನಪ ಸಾಗರದಿ ಮೌನವಾಗಿ ಮುಳುಗಿದವಳು.

ಹೃದಯದ ಭಾವನೆಗಳಿಗೆ ಅಕ್ಷರ ರೂಪ ನೀಡಲು ಹೊರಟು,

ಪದಗಳ ಗೊಂದಲದಿ ಸಿಲುಕಿ, ಸುಮ್ಮನೆ ಕುಳಿತಳು ಬೆರಗಾಗಿ ಬಿಟ್ಟು ll೦೧ll 


ಕಣ್ಣ ಕಾಡಿಗೆಯ ಅಂಚಿನಲಿ ಕನಸಿನ ಕಥೆಯಿದೆ ನೂರು,

ತುಟಿಯ ಮೌನವ ಮುರಿಯಲು ಕಾಯುತ್ತಿದೆ ನಿನ್ನಯ ಹೆಸರು.

ಹಸಿರು ಗಿಳಿಯ ಸಾಕ್ಷಿಯಾಗಿ ಬರೆಯುವೆ ಈ ಪ್ರೇಮದ ಪತ್ರ,

ನಿನ್ನ ನೆನಪೇ ನನ್ನ ಉಸಿರು, ನೀನೇ ನನಗೆ ಬಹು ಹತ್ತಿರ ll೦೨ll 


ಕಾಯುವಿಕೆಗೆ ಮುಗಿವಿಲ್ಲ, ಈ ವಿರಹಕ್ಕೆ ಕೊನೆಯಿಲ್ಲ,

ನೀನಿರದ ಪ್ರತಿ ಕ್ಷಣವು ಮರುಭೂಮಿಯಂತೆ ಬೆಲೆ ಇಲ್ಲ.

ಬರೆದು ಮುಗಿಸುವೆ ಒಲವಿನ ಓಲೆಯನು ಕೊನೆಗೆ ನಿನಗಾಗಿ,

ಕಾದು ಕುಳಿತಿರುವೆ ಗೆಳೆಯಾ, ನಿನ್ನ ಪ್ರೀತಿಯ ನೆರಳಿಗಾಗಿ ll೦೩ll


- ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ


Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top