ಕವನ: ಕನಸಿನ ಗೊಂಬೆ

Upayuktha
0



ಕಣ್ಣಿನಲಿ ಅಡಗಿದೆ ನೂರಾರು ಮೌನ ಭಾವಗಳ ಮೆರವಣಿಗೆ,

ಹೃದಯದ ಬಡಿತಕ್ಕೆ ದನಿಯಾದಂತಿದೆ ಈ ಕುಂಚದ ಅಂದದ ಅಡುಗೆ ll೦೧ll 


ತಲೆಯ ಮೇಲಿನ ಮುಕುಟವು ನಿಸರ್ಗದ ಅಂದವ ಸಾರುತ್ತಿದೆ,

ನಗುವಿನಲಿ ಅಡಗಿದ ನೋವು ಮನವ ಮೆಲ್ಲಗೆ ಕೊರೆಯುತ್ತಿದೆ ll೦೨ll  


ಕೈಚಾಚಿ ಕರೆಯುವ ಒಲವಿನ ಈ ಅನಾಮಧೇಯ ರೂಪ,

ಮೌನದಲಿ ಅಡಗಿದ ಮಾತಿನಂತೆ ಕಾಣುವ ದೀಪದ ಧೂಪ ll೦೩ll 


ಬಣ್ಣವಿಲ್ಲದಿದ್ದರೂ ಬದುಕಿನ ನೈಜತೆಯ ಈ ಕನ್ನಡಿ,

ನೋಡುಗರ ಕಣ್ಣಿಗೆ ಕಾಣುವುದು ಮನದ ಅಳದ ಈ ಕುರುಹುಗಳ ಪಡಿ ll೦೪ll 


ಶರಣೆ: ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top