ಎಲ್ಲರ ನೋವಿನಲಿ
ಇವರದೆ ಮುತುವರ್ಜಿ.
ಅಯ್ಯಯ್ಯೋ ...
ಅನ್ಯಾಯ...
ಎಂದು
ಬೊಬ್ಬಿಡುವ ಮೋಡಿ.
ಪ್ರಗತಿಯ ಹೋರಾಟದ
ನೆಪದಲ್ಲಿ
ಮಾತ್ರ ಇವರದು
ಬೆಕ್ಕಿನಾಟದ ನೋಟ
ಉತ್ತರನ ಪ್ರಲಾಪ
ಸತ್ಯವನ್ನೇ ಮರೆಮಾಚಿ
ಅಸತ್ಯವನ್ನೇ ಬಂಡವಾಳವಾಗಿಸುವ
ಇವರದು
ಸಂಚಕಾರದ ಪ್ರವೃತ್ತಿ
ಒಳಿತು ಮಾಡುವವರಲ್ಲ
ಒಳಿತು ಬಯಸುವವರೂ ಅಲ್ಲ
ಒಳಿತಾಗದಂತೆ ತಡೆಯಲು
ಸದಾ ಕಸರತ್ತಲ್ಲೇ ಇರುವ
ಇವರು ಕಸರತ್ತುಗಾರರು
ಮಸಲತ್ತುಗಾರರು
ಅನ್ಯರ ಏಳಿಗೆ ಸಹಿಸುವವರಲ್ಲ
ಮತ್ಸರದಲಿ ಇವರದು
ಸದಾ ಕಿಚ್ಚು ಹಚ್ಚಿಸುವ ಕಾಯಕ
ಕಿಚ್ಚಿನಲಿ ಅವರಿವರು ಕುದಿವಾಗ
ಒಳಗೊಳಗೆ
ಅದೇನೋ ವಿಕೃತ
ಮಂದಹಾಸ ಇವರದು
ಸಂಚಿಗಾಗಿಯೇ ಸದಾ
ಇನ್ನಷ್ಟು ಮತ್ತಷ್ಟು
ಕನಸು ಕಾಣುವ
ಇವರದು ಎಂದಿಗೂ
ಕಳಚಿಡದ ಮುಖವಾಡ.
- ಉಮೇಶ ಮುಂಡಳ್ಳಿ ಭಟ್ಕಳ. ಉ.ಕ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


