ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ-ಭಕ್ತಿಗೀತೆ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟ

Upayuktha
0


ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ದೇವಸ್ಥಾನ ಹಾಗೂ ಭಕ್ತರನ್ನು ಜೋಡಿಸುವುದು, ಸಾಹಿತ್ಯ, ಇತಿಹಾಸ, ಐತಿಹ್ಯ, ಹಳೆಯ ನೆನಪುಗಳು, ಹಳೆಯ ವಸ್ತುಗಳು, ನಂಬಿಕೆಗಳು, ಕೊಡುಗೆಗಳನ್ನು ನೆನಪಿಸುವ ಸದುದ್ದೇಶದೊಂದಿಗೆ ಹಮ್ಮಿಕೊಂಡ `ಭಕ್ತಿಗೀತೆ ರಚನಾ ಸ್ಪರ್ಧೆ' ಯ ಫಲಿತಾಂಶವನ್ನು ಪ್ರಕಟಿಸಲಾಯಿತು. ನಾಡಿನ ನಾನಾ ಕಡೆಗಳಿಂದ ಒಟ್ಟು 105 ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಡಾ. ಬೇ.ಸೀ. ಗೋಪಾಲಕೃಷ್ಣ ಭಟ್, ಸುಂದರ ಬಾರಡ್ಕ ಹಾಗೂ ಡಾ. ಶ್ರೀಶ ಪಂಜಿತ್ತಡ್ಕ ತೀರ್ಪುಗಾರರಾಗಿ ಸಹಕರಿಸಿದ್ದರು.


ಎ.ಪಿ. ಉಮಾಶಂಕರಿ ಮರಿಕೆ ಪ್ರಥಮ, ವಿ.ಬಿ.ಕುಳಮರ್ವ ದ್ವಿತೀಯ, ಜಯಲಕ್ಷ್ಮಿ ಜೋಷಿ ತೃತೀಯ ಬಹುಮಾನ ಪಡೆದಿದ್ದರು. ವಾಸುದೇವ ಭಟ್ ಶೇಡಿಗುಮ್ಮೆ ಅವರಿಗೆ ಗೌರವ ಬಹುಮಾನವನ್ನು ನೀಡಲಾಗುವುದು. ಸ್ಪರ್ಧೆಗೆ ಬಂದAತಹ ಎಲ್ಲಾ ಕವನಗಳನ್ನು ಸೇರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಬೇರೆ ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಕವಿಗಳು ಕನ್ನಡ, ತುಳು, ಮಲಯಾಳ ಭಾಷೆಗಳಲ್ಲಿ ಕವನಗಳನ್ನು ಬರೆದು ನೀಡಿದ್ದರು. 2026 ಏಪ್ರಿಲ್ 17ರಿಂದ ಏ.28ರ ತನಕ ಬ್ರಹ್ಮಕಲಶೋತ್ಸವವು ನಡೆಯಲಿದೆ.



ಸ್ಪರ್ಧೆಗಾಗಿ ಬಂದ ಸುಮಾರು 100 ಕ್ಕೂ ಮಿಕ್ಕಿ ಕವನಗಳು ಒಂದಕ್ಕಿಂತ ಇನ್ನೊಂದು ಚೆನ್ನಾಗಿದ್ದವು, ಆದ ಕಾರಣ ಆಯ್ಕೆ ಮಾಡುವಲ್ಲೂ ಗೊಂದಲಪಡಬೇಕಾಯಿತು. ಇಲ್ಲಿ ಸಾಹಿತ್ಯದಲ್ಲಿ ಪಳಗಿದವರ ಸೃಷ್ಠಿಗಳು ಇವೆ. ಹೊಸಬರ ರಚನೆಗಳನ್ನು ಗುರುತಿಸಬಹುದು, ಆಯೋಜಕರ ಮಾನದಂಡವನ್ನು ಪಾಲಿಸಿ ನಮ್ಮ ದೃಷ್ಠಿಯಲ್ಲಿ ಉತ್ತಮವೆಂದು ಕಂಡ ಗೀತೆಗಳನ್ನು ಆಯ್ಕೆ ಮಾಡಲಾಗಿದೆ.

- ಸುಂದರ ಬಾರಡ್ಕ, ತೀರ್ಪುಗಾರರು



ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಸಂಭ್ರಮದ ಬ್ರಹ್ಮಕಲಶೋತ್ಸವದ ಅಂಗವಾಗಿ 'ಭಕ್ತಿ ಗೀತೆ ರಚನಾ ಸ್ಪರ್ಧೆ' ಏರ್ಪಡಿಸಿರುವುದು ಶ್ಲಾಘನೀಯ. ಅದಕ್ಕಾಗಿ ಬಂದ ಕವನಗಳ ದೊಡ್ಡ ಸಂಖ್ಯೆಯು ನಮ್ಮ ನಾಡಿನಲ್ಲಿ ಕವಿ ಹೃದಯದ ಭಕ್ತರು, ದೇಶಭಾಷಾಭಿಮಾನಿಗಳು  ಅಧಿಕ ಸಂಖ್ಯೆಯಲ್ಲಿ ಇದ್ದಾರೆನ್ನುವ ಮಹತ್ವದ ಅಂಶವನ್ನು ಹೊರಗೆಡಹಿದೆ. ಕವನಗಳೆಲ್ಲವೂ ಶ್ರೇಷ್ಠವೇ. ಆದರೆ ಸ್ಪರ್ಧೆಯೆಂದಾಗ ಶ್ರೇಷ್ಠ ಕನಿಷ್ಠ ಎಂಬ ತರತಮ ಭಾವ ಅನಿವಾರ್ಯವಾಗುತ್ತದೆ. ಮೂರು ನಾಲ್ಕು ಸುತ್ತಿನ ಮೌಲ್ಯಮಾಪನದ  ಬಳಿಕ ನಾಲ್ಕು ಕವನಗಳನ್ನು ಬಹುಮಾನಕ್ಕೆ ಆರಿಸಲಾಗಿದೆ. 

- ಡಾ. ಬೇಸಿ ಗೋಪಾಲಕೃಷ್ಣ ಭಟ್


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top