ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ: ನಾರಾಯಣ ಶೆಣೈ

Upayuktha
0


ಸುರತ್ಕಲ್‌: ಹಿಂದೂ ಸಂಗಮ ಆಯೋಜನಾ ಸಮಿತಿ ಕುಳಾಯಿ ವಸತಿ ವತಿಯಿಂದ ಭಾನುವಾರ ಹಿಂದೂ ಸಂಗಮ ಕಾರ್ಯಕ್ರಮವು ಕುಳಾಯಿ ಮಹಿಳಾ ಮಂಡಲ ಬಳಿಯ ಮೈದಾನದಲ್ಲಿ ಜರಗಿತು. ಸಾಯಂಕಾಲ 4 ಗಂಟೆಗೆ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಭವ್ಯ ಶೋಭಾ ಯಾತ್ರೆಯು ಪ್ರಾರಂಭಗೊಂಡು ವಿವಿಧ ಪುರಾಣ ವೇಷಧಾರಿಗಳು, ಭಜನೆ ಮತ್ತು ಚೆಂಡೆ ವಾದನದೊಂದಿಗೆ ಮೈದಾನ ತಲುಪಿತು.


ಸಭಾ ಕಾರ್ಯಕ್ರಮವು ವಕೀಲರಾದ ಸಂತೋಷ ಪಿ ಐತಾಳರ ಅಧ್ಯಕ್ಷತೆಯಲ್ಲಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಚಿತ್ರಾಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿದ್ದರು ಮುಖ್ಯ ಅತಿಥಿಗಳಾಗಿ ಜಗನ್ನಾಥ ಶೆಟ್ಟಿ ಕುಳಾಯಿ ಗುತ್ತು ಮತ್ತು ಕುಳಾಯಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ರೇವತಿ ನವೀನ್ ಭಾಗವಹಿಸಿದ್ದರು.


ಮಂಗಳೂರು ವಿಭಾಗದ ಸಂಘ ಸಂಚಾಲಕರಾದ ನಾರಾಯಣ ಶೆಣೈರವರು ದಿಕ್ಸೂಚಿ ಭಾಷಣದಲ್ಲಿ ವ್ಯಕ್ತಿ ನಿರ್ಮಾಣ ದಿಂದ ರಾಷ್ಟ್ರ ನಿರ್ಮಾಣ ಎಂಬ ಚಿಂತನೆ ಕಾರ್ಯಗತಗೊಂಡು ಸಾಕಾರಗೊಳ್ಳುವ ಭರವಸೆಯ ಕಾಲ ಘಟ್ಟದಲ್ಲಿದ್ದೇವೆ ಎಂದರು.


ಡಾಕ್ಟರೇಟ್ ಪದವಿ ಪಡೆದಿರುವ ಹಿಂದೂ ಸಂಗಮ ಆಯೋಜನಾ ಸಮಿತಿ ಸುರತ್ಕಲ್ ನಗರ ಇದರ ಗೌರವ ಅಧ್ಯಕ್ಷರು ನಾಗೇಂದ್ರ ಭಾರದ್ವಾಜ್ ರವರನ್ನು ಅಭಿನಂದಿಸಲಾಯಿತು. ಕುಮಾರಿ ಅನಘಾ ಐತಾಳ್ ರವರು ವಂದೇ ಮಾತರಂ ಹಾಡಿದ್ದು ಕೆ ಭರತ್ ಶೆಟ್ಟಿ ಸ್ವಾಗತಿಸಿದ್ದು, ಯಜ್ಞೇಶ್ ಐತಾಳ್ ಧನ್ಯವಾದ ಸಮರ್ಪಿಸಿದರು.


ಶ್ರೀನಿವಾಸ ಕುಳಾಯಿ ಮತ್ತು ಶ್ರೀಮತಿ ರಾಜೇಶ್ವರೀ ದಿನಕರ್ ರವರು ಸಭಾ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಸನಿಲ್ ಕುಳಾಯಿ ರವರು ಶೋಭಾ ಯಾತ್ರೆ ನಿರ್ವಹಣೆ ಮಾಡಿದ್ದರು. ದೇಶ ಭಕ್ತಿ ಗೀತೆ, ಭರತ ನಾಟ್ಯ ಮತ್ತು ಮನೋರಂಜನೆ ಕಾರ್ಯಕ್ರಮಗಳು ಜರಗಿತ್ತು, ಸಾರ್ವಜನಿಕ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ರಾಷ್ಟ್ರ ಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top