ಸ್ಪೂರ್ತಿ ಸೆಲೆ: ಮೌನವೇ ಮಾತಾದಾಗ

Upayuktha
0


ಲೋ, ಹೇಗಿದ್ದೀರಾ? ಮಾತು ಬೆಳ್ಳಿ, ಮೌನ ಬಂಗಾರ ಎಂಬುದು ಸಾರ್ವಕಾಲಿಕ ಸತ್ಯ. ಎಷ್ಟೋ ಸಾರಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಮಗೆ ಪದಗಳು ಸಿಗುವುದಿಲ್ಲ. ಆಗ ಮೌನವೇ ನಮ್ಮ ಪಾಲಿನ ಆಂಗಿಕ ಭಾಷೆಯಾಗಿ ಪರಿವರ್ತನೆಗೊಳ್ಳುತ್ತದೆ. ಬದುಕಿನಲ್ಲಿ ಮಾತು ಎಷ್ಟು ಮುಖ್ಯವೋ, ನಮ್ಮ ಮೌನ ಕೂಡ ಅಷ್ಟೇ ಮುಖ್ಯ. ಬದುಕಿನಲ್ಲಿ ಎಷ್ಟೋ ಸಾರಿ ಮೌನ ನಮ್ಮ ಪಾಲಿನ ಸಂಗಾತಿ ಕೂಡ. ಒಮ್ಮೊಮ್ಮೆ ಪರಿಸ್ಥಿತಿ ಕೈ ಮೀರಿ ಹೋದಾಗ, ನಾವು ಮೌನವಾಗಿದ್ದಷ್ಟು ಉತ್ತಮ ಅನಿಸುತ್ತದೆ.


ಎಷ್ಟೊ ಸಾರಿ ಎದುರಿಗಿನ ವ್ಯಕ್ತಿ ನಮ್ಮ ಮೌನ ನೋಡಿಯೇ ಉತ್ತರ ಕಂಡುಕೊಳ್ಳುತ್ತಾರೆ. ಮೌನಂ ಸಮ್ಮತಿ ಲಕ್ಷಣಂ ನಮ್ಮ ಪಾಲಿನ ವೇದವಾಕ್ಯ ಆಗಿ ಬಿಡುತ್ತದೆ. ನಮ್ಮ ಎದುರಾಳಿಗಳು ನಮ್ಮ ಮೇಲೆ ವಾಕ್ ಪ್ರಹಾರ ಮಾಡಿದಾಗ, ನಾವು ಸುಮನಿದ್ದಷ್ಟು ಅವರ ವೇಗ ಅವರಿಗೆ ತಿಳಿಯದಂತೆ ಕಡಿಮೆ ಆಗಿ ಬಿಡುತ್ತದೆ.


ಸ್ಕೂಲಿನಲ್ಲಿ ಟೀಚರ್ ಬೈದಾಗ, ಮಕ್ಕಳು ಮೌನವಾಗಿದ್ದು ಪಾರಾಗಿ ಬಿಡುತ್ತವೆ. ಆಫೀಸಿನಲ್ಲಿ ಬಾಸ್ ವೈದಾಗ ಸುಮ್ಮನಿದ್ದರೆ ಅರ್ಧ ಪಾರಾದಂತೆಯೇ ಅರ್ಥ. ನಮ್ಮನ್ನು ಯಾರಾದರೂ ಹೀಯಾಳಿಸಿ ಮಾತನಾಡಿದರೆ, ನಾವುಸುಮ್ಮನಿದ್ದು ಅವರ ಹಣೆ ನೋಡಿದರೆ ಅವರು ಬೆಚ್ಚಿ ಬೀಳುವುದು ಖಂಡಿತ.

 

ಎಷ್ಟೋ ಸಾರಿ ಮೌನ  ಒನ್ ವೇ ಟ್ರಾಫಿಕ್ ಆಗಿ ಕೆಲಸ ಮಾಡುತ್ತದೆ. ಎದುರಿಗಿನ ವ್ಯಕ್ತಿ ನಮ್ಮ ಮೇಲೆ ಮಾತಿನ ವೆಹಿಕಲ್ ಬಿಟ್ಟಾಗ, ನಾವು ಸುಮ್ಮನಿದ್ದರೆ  ಆಕ್ಸಿಡೆಂಟ್ ನಿಂದ ಪಾರಾಗಿದ್ದೇವೆ ಎಂತಲೇ ಅರ್ಥ. ಎಷ್ಟೋ ಸಾರಿ ನಾವು ಮೌನವಾಗಿದ್ದು ಕೊಂಡು ಇನ್ನೊಬ್ಬರನ್ನು ಒಬ್ಸರ್ವೇಷನ್ ಮಾಡಬಹುದು.


ಬದುಕಿನಲ್ಲಿ ನಾವು ತುಂಬ ಸೋತು ಬಿಟ್ಟಿದ್ದೇವೆ ಅನ್ನಿಸಿದಾಗ, ಕೆಲ ಕಾಲದಲ್ಲಿ ಮೌನವಾಗಿದ್ದುಕೊಂಡು ನಮ್ಮ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳಬಹುದು ಮೌನದ ಶಕ್ತಿ ನೋಡಿಯೇ ಬಾಯಿ ಮುಚ್ಚಿ ಕೊಂಡಿರುವ ಮೀನು ಗಾಳಕ್ಕೆ ಬೀಳುವುದಿಲ್ಲ ಎಂದು ಹೇಳುತ್ತಾರೆ.


Face is the index of mind ಅನ್ನುವಂತೆ ನಮ್ಮ ಮುಖದ ಮೇಲಿನ ಭಾವನೆಗಳೇ ನಮ್ಮನ್ನು ಅಳೆಯ ಬಲ್ಲವು. ಬನ್ನಿ, ಒಂದು ಸಾರಿ ಮೌನವನ್ನೇ ಮಾತಾಡಿ ಬಿಡೋಣ. ಏನಂತೀರಾ?


- ಗಾಯತ್ರಿ ಸುಂಕದ, ಬದಾಮಿ


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top