ಕರ್ಕಶ ಸೈಲೆನ್ಸರ್ ಗಳ ವಿರುದ್ಧ ಮಣಿಪಾಲ ಪೊಲೀಸರ ಕಾರ್ಯಾಚರಣೆ

Upayuktha
0

125ಕ್ಕೂ ಅಧಿಕ ಕರ್ಕಶ ಸೈಲೆನ್ಸರ್ ಗಳ ನಾಶ, ವಾಹನಗಳ ಮಾಲೀಕರಿಗೆ ದಂಡ




ಮಣಿಪಾಲ: ಕರ್ಕಶ ಸೈಲೆನ್ಸರ್ ಗಳನ್ನು ಅಳವಡಿಸಿದ ವಾಹನಗಳ ವಿರುದ್ಧ ಮಣಿಪಾಲದ ಪೊಲೀಸರು ಇಂದು ಬೃಹತ್ ಕಾರ್ಯಾಚರಣೆ ನಡೆಸಿ ಸುಮಾರು 125ಕ್ಕೂ ಅಧಿಕ ಕರ್ಕಶ ಸೈಲೆನ್ಸರ್ ಗಳನ್ನು ನಾಶಪಡಿಸಿದರು. ಅಲ್ಲದೆ ವಾಹನಗಳ ಮಾಲೀಕರಿಗೆ ಒಟ್ಟಾರೆ 1,05,000 ರೂ.ಗಳ ದಂಡ ವಿಧಿಸಿದರು.


ಸಾರ್ವಜನಿಕ ಸಂಚಾರ ವ್ಯವಸ್ಥೆಯ ಸುಗಮ ನಿರ್ವಹಣೆಗಾಗಿ ಕರ್ಕಶ ಸೈಲೆನ್ಸರ್ ಗಳ ವಿರುದ್ಧ ಈ ಕಾರ್ಯಾಚರಣೆ ನಡೆಸಲಾಗಿದೆ. ಕೆಲವು ಬುದ್ಧಿಹೀನ ವಾಹನಗಳ ಮಾಲೀಕರು, ಸವಾರರು ನಿಯಮಗಳನ್ನು ಉಲ್ಲಂಘಿಸಿ, ಶೋಕಿಗಾಗಿ ತಮ್ಮ ವಾಹನಗಳಿಗೆ ಕರ್ಕಶ ಸದ್ದು ಮಾಡುವ ಸೈಲೆನ್ಸರ್ ಗಳನ್ನು ಅಳವಡಿಸಿಕೊಳ್ಳುತ್ತಾರೆ.

   

 ಇದರಿಂದಾಗಿ ರಸ್ತೆಗಳಲ್ಲಿ ಶಬ್ದ ಮಾಲಿನ್ಯದ ಜತೆಗೆ ಇತರ ವಾಹನಗಳ ಚಾಲಕರ ಗಮನ ವಿಚಲಿತಗೊಂಡು ಅಪಘಾತಗಳೂ ಸಂಭವಿಸುತ್ತವೆ. ಈ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸರು ನಡೆಸಿದ ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top