ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಕಾಶಪ್ಪನವರ

Upayuktha
0


ಹುನಗುಂದ: ತಾಲೂಕಿನ ಬಿಸಲದಿನ್ನಿ ಗ್ರಾಮದಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ (ಸಿಎಂಡಿಪಿ) ಯೋಜನೆ ಅಡಿಯಲ್ಲಿ ಪಂಚಾಯತ ರಾಜ್ ಇಲಾಖೆಯಿಂದ 80 ಲಕ್ಷ ಅನುದಾನದಲ್ಲಿ ಗ್ರಾಮದ ಮುಖ್ಯ ರಸ್ತೆಯಿಂದ ತಿಪ್ಪವ್ವ ಭರಮಗೌಡರ ಹೊಲದ ವರೆಗಿನ ಸಿಸಿ ರಸ್ತೆ ಕಾಮಗಾರಿಗೆ ಶುಕ್ರವಾರ ಶಾಸಕ ವಿಜಯಾನಂದ ಕಾಶಪ್ಪನವರ ಭೂಮಿ ಪೂಜೆ ನೆರವೇರಿಸಿದರು.


ಈ ವೇಳೆ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಮ್ಮ ಸರ್ಕಾರ ಗ್ರಾಮೀಣ ಪ್ರದೇಶದ ರಸ್ತೆ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ರೈತರು ತಮ್ಮ ಹೊಲಗಳಿಗೆ ಸುರಳಿತವಾಗಿ ಹೋಗಿ ಬರಲು ಅನುಕೂಲವಾಗಲಿ ಎಂದು ಈ ಸಿಸಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಾಮಗಾರಿ ನಿಗದಿತ ಅವಧಿಯಲ್ಲಿ ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.


ಈ ಸಂದರ್ಭದಲ್ಲಿ ಗಂಗಣ್ಣ ಬಾಗೇವಾಡಿ, ಭೀಮಪ್ಪ ಯರಝರಿ, ಮಹಾಂತೇಶ ಲಗ್ಮನ್ನವರ, ಚಂದ್ರಾಮಪ್ಪಗೌಡ ಭರಮಗೌಡರ, ಶ್ರೀಕಾಂತ ಹಿರೇಮಠ, ಎಸ್.ಎಸ್ ಪುರೋಹಿತ, ಮುತ್ತಣ್ಣ ಬರಮಗೌಡ, ಮಾನನಗೌಡ ಪಾಟೀಲ, ಸಂಗಪ್ಪ ಶಿರೂರ, ದ್ಯಾಮಣ್ಣ ವಡ್ಡರ, ಪಂಚಾಯತ್ ರಾಜ್ ಇಲಾಖೆಯ ಎಇಇ ಕೆ.ಡಿ. ನಾಯಕ, ಜೆಇ ಸೌಮ್ಯ ಭಾವಿಕಟ್ಟಿ, ಪಿಡಿಓ ಹನಮಂತ ವಕ್ರ, ಗುತ್ತಿಗೆದಾರರ ಶಂಕರ್ ಜಗ್ಗಲ ಸೇರಿದಂತೆ ಅನೇಕರು ಇದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top