ಪಾಂಡವರಿಗಾಗಿ ಪಂಚಗ್ರಾಮಗಳ ಬೇಡಿಕೆ ಹಿಂದೆ ಕೃಷ್ಣನ ಕಾರ್ಯತಂತ್ರ

Upayuktha
0


ಸಂಧಾನ ವಿಫಲಗೊಂಡಾಗಲೂ ಶ್ರೀಕೃಷ್ಣ ಮತ್ತು ಪಾಂಡವರು ಐದು ಹಳ್ಳಿಗಳನ್ನು ಕೇಳುತ್ತಾರೆ. ಆದರೆ, ದುರ್ಯೋಧನ ಆ ಐದು ಗ್ರಾಮಗಳನ್ನು ಕೊಡಲು ಸುತಾರಾಂ ಒಪ್ಪುವುದೇ ಇಲ್ಲ. ಪಾಂಡವರ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾನೆ. ಆ ಐದು ಗ್ರಾಮಗಳನ್ನೇ ಯಾಕೆ ಕೃಷ್ಣ ಕೇಳಿದ. ಅದಕ್ಕಾಗಿಯೇ ದುರ್ಯೋಧನ ಕೆರಳಿ ಕೆಂಡವಾದನೆ? ಹಾಗಾದರೆ ಆ ಗ್ರಾಮಗಳು ಅಷ್ಟು ಮಹತ್ವವನ್ನು ಪಡೆದಿದ್ದವೆ? ಆಫ್ ಕೋರ್ಸ್!


ಶ್ರೀಕೃಷ್ಣ ಕೇಳಿದ ಐದು ಗ್ರಾಮಗಳಿವು: ಇಂದ್ರಪ್ರಸ್ಥ (ಶ್ರೀಪಟ), ಭಾಗ್ಪತ್ (ವ್ಯಾಘ್ರಪ್ರಸ್ಥ), ಪಾಣಿಪತ್ (ಪಾಂಡುಪ್ರಸ್ಥ), ತಿಲಪ್ರಸ್ಥ, (ತಿಲಪತ್), ಸ್ವರ್ಣಪ್ರಸ್ಥ (ಸೋನಿಪತ್). ಇವುಗಳನ್ನು ಕುಶಸ್ಥಲ, ವೃಕಸ್ಥಲ, ಮಾರ್ಕಂಡಿ, ವರ್ಣವ್ರತ ಮತ್ತು ಅವಿಷ್ಠಲ ಅಂತಲೂ ಕರೆಯಲಾಗಿದೆ.


ಈ ಗ್ರಾಮಗಳನ್ನು ಹಸ್ತಿನಾಪುರ ದೃಷ್ಟಿಕೋನದಿಂದ ನಕ್ಷೆಯನ್ನು ನೋಡಿದರೆ, ಹೆಚ್ಚುಪಾಲು ರೇಖೀಯ ರೀತಿಯಲ್ಲಿ ಜೋಡಿಸಲ್ಪಟ್ಟಿವೆ. ಈ ಗ್ರಾಮಗಳಲ್ಲಿ, ಬಾಗ್‌ಪತ್ ಮಾತ್ರ ಯಮುನಾ ನದಿಯ ಹಸ್ತಿನಾಪುರದ ದಿಕ್ಕಿಗಿದೆ. ಉಳಿದ ನಾಲ್ಕು ಗ್ರಾಮಗಳು ಯಮುನಾ ನದಿಯ ಇನ್ನೊಂದು ಬದಿಯಲ್ಲಿವೆ. ಕುತೂಹಲವೇನೆಂದರೆ, ಬಾಗ್‌ಪತ್ ಗ್ರಾಮ ಐದು ಗ್ರಾಮಗಳ ಮಧ್ಯದಲ್ಲಿದೆ. ದೂರದ ಗ್ರಾಮಗಳಾದ ತಿಲ್ಪತ್ ಮತ್ತು ಪಾಣಿಪತ್ 55 ಕಿ.ಮೀ.ಗಳಿಂದ ಬಹುತೇಕ ಸಮಾನ ದೂರದಲ್ಲಿದೆ. ಇದು ಕಾರ್ಯತಂತ್ರದ ಪ್ರಧಾನ ಸ್ಥಾನದಲ್ಲಿದೆ. ಅಂದರೆ, ಪಾಂಡವರು ಕೌರವರ ಮೇಲೆ ಸುಲಭವಾಗಿ ಆಕ್ರಮಣವನ್ನು ಆರಂಭಿಸಬಹುದು. ಯಮುನಾ ನದಿಯ ಮತ್ತೊಂದು ಬದಿಯಲ್ಲಿರುವ ಉಳಿದ ನಾಲ್ಕು ಗ್ರಾಮಗಳು ನೈಸರ್ಗಿಕ ತಡೆಗೋಡೆಯಾಗಿ ನದಿಯನ್ನು ರಕ್ಷಣೆಗಾಗಿ ಬಳಸಬಹುದು. ಇದಲ್ಲದೆ, ಬಾಗ್‌ಪತ್‌ನಲ್ಲಿ ಪಡೆಗಳು ಮತ್ತು ಸಂಪನ್ಮೂಲಗಳ ಕೊರತೆಯಿಂದ ಆಕ್ರಮಣ ನಡೆಸುವುದು ನಿಧಾನವಾಗಬಹುದು.


ಬಹುದೂರದ ಗ್ರಾಮಗಳಾದ ಪಾಣಿಪತ್ ಮತ್ತು ತಿಲಪತ್ ನಡುವಿನ ಅಂತರ 110 ಕಿ.ಮೀ. ಹಸ್ತಿನಾಪುರಕ್ಕೆ ಪ್ರತಿಯೊಂದು ಗ್ರಾಮಗಳ ನಡುವಿನ ಅಂತರವು ಬಹುತೇಕ ಒಂದೇ ಆಗಿರುತ್ತದೆ, ಅಂದರೆ 101-102 ಕಿ.ಮೀ. ಇದು ಬಹುತೇಕ ಸಮದ್ವಿಬಾಹು ತ್ರಿಕೋನದಲ್ಲಿದೆ. ಆದ್ದರಿಂದ, ಈ ಎರಡೂ ಗ್ರಾಮಗಳಲ್ಲಿ ಯಾವುದಾದರೂ ಒಂದನ್ನು ಆಕ್ರಮಿಸಲು ಕೌರವರು ತೆಗೆದುಕೊಳ್ಳುವ ಸಮಯವು ಒಂದೇ ಆಗಿರುತ್ತದೆ. ಇದರ ಲಾಭವೇನೆಂದರೆ, ಯಾವುದೇ ದಾಳಿಗೆ ಪಾಂಡವರು ಸಕಾಲದಲ್ಲಿ ಸಿದ್ಧರಾಗಬಹುದು. ಸೈನ್ಯದ ಸ್ಥಳಾಂತರಕ್ಕೆ ಬೇಕಾಗುವ ಸಮಯದ ಅವಧಿಯು ಇಬ್ಬರಿಗೂ ಒಂದೇ ಆಗಿರುತ್ತದೆ. ಇದರರ್ಥ ದುರ್ಯೋಧನನು ಭಾರೀ ಹಾನಿಯನ್ನು ಅನುಭವಿಸಿಯೇ ಪಾಂಡವರ ಮೇಲೆ ದಾಳಿ ಮಾಡಬೇಕಾಗುತ್ತದೆ. ಈ ಕಾರ್ಯತಂತ್ರದ ಕಾರಣದಿಂದಾಗಿ ದುರ್ಯೋಧನನು ಶ್ರೀಕೃಷ್ಣನ ಪಂಚಗ್ರಾಮಗಳ ಪ್ರಸ್ತಾಪವನ್ನು ನಿರಾಕರಿಸಿದ್ದು. ನಖಶಿಖಾಂತ ಉರಿದುಕೊಂಡಿದ್ದು!


ಒಬ್ಬ ಮನುಷ್ಯನಲ್ಲಿ ನಿನ್ನ ಪಂಚೇಂದ್ರಿಯಗಳನ್ನು ದಾನವಾಗಿ ಕೊಡು ಎಂದು ಕೇಳಿದರೆ ಏನಾಗುತ್ತದೆ?


- ಟಿ. ದೇವಿದಾಸ್


إرسال تعليق

0 تعليقات
إرسال تعليق (0)
To Top