ಉಡುಪಿ ಮೂಲದ ಕೃಷ್ಣರಾಜರಿಗೆ ಪಿಎಚ್.ಡಿ ಪದವಿ

Upayuktha
0



ಉಡುಪಿ: ಉಡುಪಿ ಮೂಲದ ಕೃಷ್ಣರಾಜ ಅವರು ಗುಜರಾತ್‌ನ ಸೂರತ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (ಎಸ್‌ವಿಎನ್‌ಐಟಿ)ಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಿಂದ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ.


ಅವರ ಮಹಾಪ್ರಬಂಧದ ಶೀರ್ಷಿಕೆ “ಅನಾಲಿಸಿಸ್ ಆಂಡ್ ಆಪ್ಟಿಮೈಸೇಶನ್ ಆಫ್ ಅಟಾಕ್-ರೆಸಿಸ್ಟಂಟ್ ಸೀಕ್ರೆಟ್ ಇಮೇಜ್ ಶೇರಿಂಗ್ ಸ್ಕೀಮ್ಸ್” ಆಗಿದ್ದು, ಸೀಕ್ರೆಟ್ ಇಮೇಜ್ ಶೇರಿಂಗ್ ವ್ಯವಸ್ಥೆಗಳ ಭದ್ರತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನವೀನ ವಿಧಾನಗಳ ಅಧ್ಯಯನಕ್ಕೆ ಈ ಸಂಶೋಧನೆ ಕೇಂದ್ರೀಕೃತವಾಗಿದೆ.


ಈ ಸಂಶೋಧನಾ ಕಾರ್ಯಕ್ಕೆ ಎಸ್‌ವಿಎನ್‌ಐಟಿ, ಸೂರತ್‌ನ ಪ್ರೊ. ಡಾ. ದೇವೇಶ್ ಸಿ. ಜಿನ್ವಾಲಾ ಮತ್ತು ಪ್ರೊ. ಡಾ. ಮುಖೇಶ್ ಎ. ಝಾವೇರಿ ಅವರ ಮಾರ್ಗದರ್ಶನ ಲಭಿಸಿದ್ದು, ಭಾರತೀಯ ತಾಂತ್ರಿಕ ಸಂಸ್ಥೆ, ಜಮ್ಮುನ ಡಾ. ಯಮುನಾ ಪ್ರಸಾದ್ ಸಹ ಮಾರ್ಗದರ್ಶಕರಾಗಿ ಸಹಕರಿಸಿದ್ದಾರೆ.


ಕೃಷ್ಣರಾಜ ಅವರು ಉಡುಪಿಯ ನಿವೃತ್ತ ಶಿಕ್ಷಕ ಎಂ. ಶ್ರೀನಿವಾಸ ಭಟ್ ಹಾಗೂ ಬಿಎಸ್‌ಎನ್‌ಎಲ್ ಉದ್ಯೋಗಿಯಾಗಿದ್ದ ಗಾಯತ್ರಿ ಎಸ್. ಭಟ್ ಅವರ ಪುತ್ರ. ಅವರು ನಿಧಿ ಕೆ. ಅವರ ಪತಿ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top