ಅಂಗರಕ್ಷಕನ ಮನೆಗೆ ತೆರಳಿ ಸರಳತೆ ಮೆರೆದ ನ್ಯಾಯಮೂರ್ತಿ ಶ್ರೀಶಾನಂದ

Upayuktha
0


ಗೋಕಾಕ್‌: ಗೋಕಾಕ್‌ನಲ್ಲಿ ದಿನಾಂಕ ಇತ್ತೀಚಿಗೆ ನಡೆದ 21ನೇ ಶೂನ್ಯ ಸಂಪಾದನಾ ಮಠದ ಶರಣ ಸಂಸ್ಕೃತಿ ಉತ್ಸವದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ತಮ್ಮ ಅಂಗರಕ್ಷಕರಾದ ಆಂಜನೇಯ ಪಿ. ದುರ್ಗಣ್ಣವರ್ ಅವರ ನಿವಾಸಕ್ಕೆ ಭೇಟಿ ನೀಡಿದರು.


ಗೋಕಾಕ್ ತಾಲೂಕಿನ ಉಪ್ಪಾರಹಟ್ಟಿ ಗ್ರಾಮದ ನಿವಾಸಿಯಾಗಿರುವ ಆಂಜನೇಯ ಪಿ. ದುರ್ಗಣ್ಣವರ್ ಅವರು ನ್ಯಾಯಮೂರ್ತಿಗಳ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಮನೆಗೆ ನ್ಯಾಯಮೂರ್ತಿಗಳ ಭೇಟಿ ಕುಟುಂಬದವರಿಗೆ ಅಪಾರ ಸಂತೋಷ ತಂದಿತು. ನ್ಯಾಯಮೂರ್ತಿ ಶ್ರೀಶಾನಂದ ಅವರ ಸರಳತೆ, ಆತ್ಮೀಯತೆ ಹಾಗೂ ಗೌರವಪೂರ್ಣ ವರ್ತನೆಯ ಕುರಿತು ಕುಟುಂಬದ ಸದಸ್ಯರು ಹರ್ಷ ವ್ಯಕ್ತಪಡಿಸಿದರು.


ಈ ಭೇಟಿ ಗ್ರಾಮದಲ್ಲಿ ವಿಶೇಷ ಗೌರವ ಮತ್ತು ಸಂತಸದ ವಾತಾವರಣವನ್ನು ಸೃಷ್ಟಿಸಿತು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top