ಜೆಇಇ ರಾಷ್ಟ್ರೀಯ ಪರೀಕ್ಷೆ: ಬಪ್ಪಳಿಗೆ ಅಂಬಿಕಾ ಪ.ಪೂ. ವಿದ್ಯಾಲಯದ ಮತ್ತೆ ಆರು ಮಂದಿಗೆ ಅರ್ಹತೆ

Upayuktha
0


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರಾಯೋಜಿತ ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಹೆಚ್ಚುವರಿ ಆರು ಮಂದಿ ವಿದ್ಯಾರ್ಥಿಗಳು ಇಂಜಿನಿಯರಿಂಗ್‍ಗೆ ಸಂಬಂಧಿಸಿದ ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆ ಜಿಇಇಯಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಇದರೊಂದಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಿಂದ ಒಟ್ಟು 35 ಮಂದಿ ಶೇಕಡಾ 85ಕ್ಕಿಂತಲೂ ಅಧಿಕ ಪರ್ಸೆಂಟೈಲ್ ಗಳಿಸುವ ಮೂಲಕ ತಾಲೂಕಿನಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳು ಜೆಇಇ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಶಿಕ್ಷಣ ಸಂಸ್ಥೆ ಎಂಬ ಕೀರ್ತಿಗೆ ಅಂಬಿಕಾ ಪಾತ್ರವಾಗಿದೆ.


ಕಾಸರಗೋಡು ಜಿಲ್ಲೆಯ ಏತ್ತಡ್ಕದ ಕೃಷ್ಣ ಕುಮಾರ್ ಪಿ.ಕೆ ಮತ್ತು ಶುಭ ಎಂ ದಂಪತಿಯ ಪುತ್ರ ತೇಜಸ್ವಿ ಕೆ. (89.53%), ಕಡಬ ತಾಲೂಕಿನ ಎಸ್.ರಾಜಶೇಖರ್ ಮತ್ತು ಪಿ.ಎನ್ ಮಲ್ಲಿಕಾ ದಂಪತಿಯ ಪುತ್ರ ಎಸ್.ಚಿನ್ಮಯ್ (88.85%), ಬೆಂಗಳೂರಿನ ರಾಮಕಿಶೋರ್ ಶಾಸ್ತ್ರಿ ಮತ್ತು ಲಲಿತಾ ಆರ್ ದಂಪತಿಯ ಪುತ್ರ ಓಂಕಾರ್ ಶಾಸ್ತ್ರಿ (88.03%), ಕಾಸರಗೋಡಿನ ಮೊವ್ವಾರು ನ ವೆಂಕಟೇಶ್ ರಮೇಶ್ ಶರ್ಮಾ ಮತ್ತು ಜಯಲಕ್ಷ್ಮೀ ಯು. ದಂಪತಿಯ ಪುತ್ರ ಜಯೇಶ್ (86.34%), ಕಲ್ಬುರ್ಗಿಯ ರವೀಂದ್ರ ಕುಮಾರ್ ಮತ್ತು ಶಿಲ್ಪ ದಂಪತಿಯ ಪುತ್ರ ಶ್ರೀಶಾಂತ್ (86.34%),  ಕಾಸರಗೋಡು ಜಿಲ್ಲೆಯ  ಪೈವಳಿಕೆಯ ಗಣೇಶ್ ಐ. ಮತ್ತು ಸುಪ್ರಿಯಾ ಎಂ.ಕೆ. ದಂಪತಿಯ ಪುತ್ರ ಅಭಿನವ್ ಐ.ಜಿ (85.41%) ಇವರುಗಳು ಜೆಇಇ ಅರ್ಹತೆ ಪಡೆದುಕೊಂಡಿದ್ದಾರೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top