ಇಡಿಯಡ್ಕ ಜಾತ್ರಾ ಮಹೋತ್ಸವ: ಗಡಿನಾಡ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ

Upayuktha
0


ಕಾಸರಗೋಡು: ಇಡಿಯಡ್ಕ ಪೆರ್ಲದ ಶ್ರೀ ದುರ್ಗಾಪರಮೇಶ್ವರಿ ವಿಷ್ಣುಮೂರ್ತಿ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಸಂಸ್ಥೆಯ 171ನೆಯ ಕಾರ್ಯಕ್ರಮದಲ್ಲಿ ಕಾಸರಗೋಡಿನ ಡಾ. ವಾಣಿಶ್ರೀ ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಾದರಪಡಿಸಿತು.


ಸಾಹಿತ್ಯಾಮೃತ ಗಾನಾಮೃತ ಕಾರ್ಯಕ್ರಮ ಕನ್ನಡ ಕೋಗಿಲೆಗಳ ಸ್ವರ ನಿನಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಗೀತ ಕಲಾರತ್ನಗಳಾದ ವಿಶ್ವನಾಥ ಪುತ್ತಿಗೆ. ದಿವಾಕರ ಕಾಸರಗೋಡು, ಮುರಳಿ ನೀರ್ಚಾಲ್ ಹಾಗೂ ಮಧುಲತಾ ಪುತ್ತೂರು ಶೇಷ್ಠ ಗಾಯನ ಪ್ರಸ್ತುತ ಪಡಿಸಿದರು. ಡಾ. ವಾಣಿಶ್ರೀ ಅವರು ಸಾಹಿತ್ಯ ಸಾದರ ಪಡಿಸಿದರು. ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಗಾಯನವು ನೆರೆದಿದ್ದ ಜನರ ಕಣ್ಮನ ಸೆಳೆಯಿತು.


ದೇವಸ್ಥಾನದ ಪ್ರಮುಖರಾದ ಪ್ರಸಾದ ಪೆರ್ಲ ಅವರು ಸಂಸ್ಥೆಯ ಮುಖ್ಯಸ್ಥೆ ಡಾ ವಾಣಿಶ್ರೀ ಅವರನ್ನು ಸನ್ಮಾನಿಸಿ ಗೌರವಿಸಿ ಸಂಸ್ಥೆಗೆ ಶುಭಾಶಿರ್ವಾದ ಮಾಡಿದರು. ಎಲ್ಲಾ ಕಲಾಮಾಣಿಕ್ಯಗಳಿಗೆ ಸಂಸ್ಥೆಯ ವತಿಯಿಂದ ಗೌರವ ಧನ ಹಾಗೂ ಪುಸ್ತಕ ಕೊಟ್ಟು ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ಗಣ್ಯರಾದ ಅಚ್ಯುತ ಭಟ್, ಶಿವಪ್ರಸಾದ, ಶಶಿಕಲಾ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top