ಮಾನವೀಯ ಮೌಲ್ಯಗಳು: ಮಕ್ಕಳಿಗಾಗಿ ವಿಶೇಷ ಉಪನ್ಯಾಸ

Upayuktha
0


ಸುರತ್ಕಲ್‌: ಹಿಂದು ವಿದ್ಯಾದಾಯಿನೀ ಸಂಘದ ಆಡಳಿತಕ್ಕೆ ಒಳಪಟ್ಟ ಅನುದಾನಿತ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ ಮೈರ್ಪಾಡಿ ಕುಳಾಯಿ ಇಲ್ಲಿ ಜೆಸಿಐ ಸುರತ್ಕಲ್ ಇವರ ವತಿಯಿಂದ ಮಕ್ಕಳಿಗೆ "ಮಾನವೀಯ ಮೌಲ್ಯಗಳು" ಎಂಬ ವಿಷಯ ಬಗ್ಗೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಜೆಸಿಐ ಟ್ರೈನರ್ ಲೋಕೇಶ್ ಪೈ ಕಾರ್ಯಗಾರ ನಡೆಸಿಕೊಟ್ಟರು. ಮಕ್ಕಳು ಪ್ರಾರ್ಥನೆ ನಡೆಸಿಕೊಟ್ಟರು. ಜೆಸಿಐ ಅಶೋಕ್ ರವರು ಪ್ರಸ್ತಾಪಿಸಿ ಸ್ವಾಗತಿಸಿದರು.


ಕಾರ್ಯಕ್ರಮದಲ್ಲಿ ಜೆಸಿಐ ಸದಸ್ಯರಾದ ಶ್ರೀಮತಿ ಜ್ಯೋತಿ.ಪಿ.ಶೆಟ್ಟಿ, ಶ್ರೀಮತಿ ಭಾರತಿ ನಿರಂಜನ್, ಶ್ರೀಮತಿ ಜ್ಯೋತಿ ಜಯರಾಂ ಭಾಗವಹಿಸಿದ್ದರು. ಮುಖ್ಶೋಪಾಧ್ಯಾಯರಾದ ಗೋಪಾಲ್. ವಿ., ಅಧ್ಯಾಪಕ ವೃಂದದವರು, ಮಕ್ಕಳು ಉಪಸ್ಥಿತರಿದ್ದರು. ಸಹಶಿಕ್ಷಕ ಮಲಕಪ್ಪ ಹನುಮಪ್ಪರವರು ಧನ್ಯವಾದ ಗೈದರು.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top