ರಾಜ್ಯಮಟ್ಟದ ಅನಿತಾಕೌಲ್ ಪ್ರಶಸ್ತಿಗೆ ಭಾಜನರಾದ ಹಾಸನದ ಶಿಕ್ಷಕರು

Upayuktha
0


ಹಾಸನ: ಶಿಕ್ಷಣ ಹಕ್ಕು ಕಾಯಿದೆ ರೂಪಿಸುವಲ್ಲಿ ಅನಿತಾಕೌಲ್ ರವರದ್ದು ಬಹುಮುಖ್ಯ ಪಾತ್ರವಾಗಿತ್ತು. ಅವರು ಮೈಸೂರಿನ ಎ.ಟಿ.ಐ ನ ಮಹಾನಿರ್ದೇಶಕನಾಗಿದ್ದ ಸಂದರ್ಭದಲ್ಲಿ ಜನಾಧಿಕಾರ ಜಾಥಾ, ಪಂಚಾಯತ್ ಸದಸ್ಯರ ತರಬೇತಿಗಳಿಗೆ ಜೀವ ತುಂಬಿದ್ದವರು. ಭಾರತ ಸರ್ಕಾರದ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಕೆ.ಜೆ.ವಿ.ಎಸ್. ನ ರಾಜ್ಯ ಕಾರ್ಯದರ್ಶಿ ಈ. ಬಸವರಾಜು ಹೇಳಿದರು. 


ಬೆಂಗಳೂರಿನ ಬಸವನಗುಡಿಯ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ನಡೆದ ಅನಿತಾಕೌಲ್ ರಾಜ್ಯ ಮಟ್ಟದ ಉತ್ತಮ  ಶಿಕ್ಷಕರ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಎಲ್ಲರನ್ನು ಉದ್ದೇಶಿಸಿ ಮಾತನಾಡುತ್ತ ವೈಜ್ಞಾನಿಕ ಮನೋಭಾವನೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು ಮತ್ತು ಅನಿತಾಕೌಲ್ ನಡೆದು ಬಂದ ದಾರಿಯ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.


ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅತೀಕ್ ರವರು ಶಿಕ್ಷಕರು ಉತ್ತಮ ಸಮಾಜದ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದ್ದು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ಯೋಚಿಸಬೇಕಾಗಿದೆ ಎಂದರು. ರಾಜನಾಯಕ್ ರವರು ಮಾತನಾಡಿ ಅನಿತಾಕೌಲ್ ರವರು ಭಾರತೀಯ ಆಡಳಿತ ಸೇವೆಗೆ ಸೇರಿದ ಪ್ರಾರಂಭದಿಂದಲೂ ಸಾಕ್ಷರತೆ, ಪ್ರಾಥಮಿಕ ಶಿಕ್ಷಣ, ಮಹಿಳಾ ಸಬಲೀಕರಣ ಹಾಗೂ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆ, ನವದೆಹಲಿಯಲ್ಲಿ ಸಾಕ್ಷರತಾ ಮಿಷನ್ ಪ್ರಾಧಿಕಾರದಲ್ಲಿ ಹಗಲಿರುಳೂ ಶ್ರಮಿಸಿದ್ದಾರೆ ಎಂದು ಹೇಳಿದರು. 


ಮುಕುಂದರಾಜ್ ರವರು ಮಾತನಾಡಿ ಅನಿತಾಕೌಲ್ ರವರು ಡಿಪಿಐಪಿ ರಾಜ್ಯ ಯೋಜನಾ ನಿರ್ದೇಶಕರಾಗಿ ಅದನ್ನು ಯಶಸ್ವಿಗೊಳಿಸುವಲ್ಲಿ, ಶಿಕ್ಷಕರ ತರಬೇತಿ, ಮೈಕ್ರೋ ಪ್ಲಾನಿಂಗ್, ಸಂತನ ಕಲಿಕೆಯ ಚಿಣ್ಣರಮೇಳ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿದ್ದ ದಿನಗಳಲ್ಲಿ ಮಹಿಳೆ ಮತ್ತು ಕಾನೂನು ಶಿಬಿರಗಳನ್ನು ರಾಜ್ಯದೆಲ್ಲೆಡೆ ಸಂಘಟಿಸಲು ನೆರವು, ಮಾರ್ಗದರ್ಶನ ಮಾಡಿದ್ದರು ಹಾಗೂ ಅವರ ಕೆಲಸಗಳು ಹಾಗೂ ವ್ಯಕ್ತಿತ್ವವನ್ನು ಇಂದಿನ ಜನಮಾನಸಕ್ಕೆ ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರತಿವರ್ಷ ಅವರ ಸ್ಮರಣೆಯಲ್ಲಿ ಶೈಕ್ಷಣಿಕ ವಿಚಾರ ಸಂಕಿರಣ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸುವ ಶಿಕ್ಷಕರು, ಉಪನ್ಯಾಸಕರು, ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಎಂದು ತಿಳಿಸಿದರು


ಇದೇ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಹಲವು ಶಿಕ್ಷಕರಿಗೆ ಅನಿತಾ ಕೌಲ್ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಗರದ ಆರ್. ಸಿ. ರಸ್ತೆಯಲ್ಲಿರುವ ಜಿ.ಜಿ.ಜೆ.ಸಿ. ಪ್ರಧಾನ ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಮಂಜುನಾಥ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಬೆಳಗುಲಿ ಶಿಕ್ಷಕರಾವ ಹೆಚ್.ಎ. ಉದಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  ಬ್ಯಾಡರಹಳ್ಳಿಯ ಶಿಕ್ಷಕರಾದ ಕೆ.ಎಚ್. ಚಂದ್ರಶೇಖರ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೃಷ್ಣಾಪುರದ ಶಿಕ್ಷಕರಾದ ಎನ್.ಎಮ್.ಗೊಹರ್ ಜಾನ್, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೋಡಂಗಿ ಕೊಪ್ಪಲು ಇಲ್ಲಿನ ಶಿಕ್ಷಕರಾದ ಎಮ್.ಎಸ್. ಗೀತಾ , ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಮೆನಹಳ್ಳಿಯ ಶಿಕ್ಷಕರಾದ ರುಕ್ಮಿಣಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಗಲಬೀಡು ಶಾಲಾ ಶಿಕ್ಷಕರಾದ ಎಮ್. ಪಿ. ಹೇಮಕುಮಾರೇಗೌಡ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಾಯ ಶಾಲಾ ಶಿಕ್ಷಕರಾದ ಡಿ. ಜೆ. ಶಾಂತರಾವ್ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುರುಬರಹಳ್ಳಿ ಶಿಕ್ಷಕರಾದ ಮೋಹನ ರವರು ರಾಜ್ಯಮಟ್ಟದ ಅನಿತಾ ಕೌಲ್ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top