ಮಂಗಳೂರು: ಭಾರತದ ಪ್ರತಿಷ್ಠೆಯ ಸಂಸ್ಥೆ HAL ಬೆಂಗಳೂರು ಅವರ ಫ್ಯಾಮಿಲಿ ವೆಲ್‌ಫೇರ್ ಅಸೋಸಿಯೇಶನ್ (FWA) ಅಧಿಕಾರಿಗಳು ಸಕ್ಷಮ ದಕ್ಷಿಣ ಕನ್ನಡ ಘಟಕದ ಕೋರಿಕೆ ಮೇರೆಗೆ ಸೋಮವಾರ (ಫೆ.16) ಮಂಗಳೂರಿಗೆ ಬೇಟಿ ನೀಡಿ ಸಕ್ಷಮ ದಕ್ಷಿಣ ಕನ್ನಡ ಘಟಕದ ಕಾರ್ಯಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು. ಸಕ್ಷಮವು ದಿವ್ಯಾಂಗರ ಸಬಲೀಕರಣ ಮತ್ತು ಸಾಮಾಜಿಕ ಅರಿವು ಮೂಡಿಸುವ ಕೆಲಸವನ್ನು ತುಂಬು ಮನಸಿನಿಂದ ಶ್ಲಾಘಿಸಿದರು.
ಈ ಭೇಟಿಯನ್ನು ಸೇವಾ ಭಾರತಿ ಮಂಗಳೂರು ನಡೆಸುವ ಚೇತನ ಬಾಲ ವಿಕಾಸ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು. HAL FWA ಕಡೆಯಿಂದ ಮುಖ್ಯ ಸಂಚಾಲಕರಾದ ಡಾ. ಶುಭ ಸುನಿಲ್, ಸಂಚಾಲಕರಾದ ಶ್ರೀಮತಿ ಅಂಜಲಿ ಶ್ರೀವಾಸ್ತವ್, ಕಾರ್ಯದರ್ಶಿ ಶ್ರೀಮತಿ ರೇಷ್ಮಾ ರಮಾನಂದ, ಸದಸ್ಯರಾದ ಶ್ರೀಮತಿ ವಿಜಯಶಾಂತಿ, ಶ್ರೀಮತಿ ಮಾಧವಿ, ಶ್ರೀ ಚಕ್ರವರ್ತಿ ಅಲ್ಲದೆ HAL ಕುಂಬಳೆ ಘಟಕದ ಮುಖ್ಯಸ್ಥರಾದ ಶ್ರೀ ಜೋಸೆಫ್, ಮಾನವ ಸಮನ್ಮೂಲ ಅಧಿಕಾರಿ ಶ್ರೀ ಮಂಜುನಾಥ ಅವರನ್ನು ಚೇತನ ಶಾಲೆಯ ದಿವ್ಯಾಂಗ ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿ ಅವರೇ ತಯ್ಯಾರಿಸಿದ ಹೂಗುಚ್ಛ ಕೊಟ್ಟು ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಪ್ರೀತಾ ತನುಜ್ ಅವರು ಶಾಲು ಹೊದಿಸಿ ಗಣ್ಯರನ್ನು ಬರಮಾಡಿಕೊಂಡರು.
ಸೇವಾ ಭಾರತೀಯ ಖಜಾಂಚಿ ವಿನೋದ್ ಶೆಣೈ, ಮುಖ್ಯ ಕಾರ್ಯದರ್ಶಿ ನಾಗರಾಜ್ ಭಟ್ ಮತ್ತು ಶಾಲಾ ಸಿಬ್ಬಂದಿವರ್ಗ ಶಾಲೆಯ ಎಲ್ಲಾ ವ್ಯವಸ್ಥೆಯನ್ನು ತೋರಿಸಿ ವಿವರಿಸಿದರು. ಸೇವಾ ಭಾರತಿಯ ಸ್ವಯಂ ಸೇವಕರಾದ ಶ್ರೀ ಪ್ರಕಾಶ್ ಪೈ, ಗಣರಾಜ್ ಭಟ್ ಮತ್ತು ಶಾಂತಾರಾಮ್ ಪೈ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಂದ ಗಣ್ಯರು ದಿವ್ಯಾಂಗ ಮಕ್ಕಳ ಜೊತೆ ಸಂವಹನ ಮಾಡಿ ಖುಷಿ ಪಟ್ಟರು. ಗಣ್ಯರು ಶಾಲಾ ಚಟುವಟಿಕೆಗಳನ್ನು ಕಣ್ತುಂಬ ನೋಡಿ ಮನಮೆಚ್ಚಿ ಶ್ಲಾಘಿಸಿದರು.
ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ, ಕಾರ್ಯದರ್ಶಿ ಹರೀಶ್ ಪ್ರಭು, ಸಹ ಕಾರ್ಯದರ್ಶಿ ಭಾಸ್ಕರ ಹೊಸಮನೆ ಮತ್ತು ಉಪಾಧ್ಯಕ್ಷರು ಏವಂ ವಿಕಾಸಂ ಸೇವಾ ಫೌಂಡೇಷನ್ ಸ್ಥಾಪಕ ನಿರ್ದೇಶಕರಾದ ಗಣೇಶ ಭಟ್ ದಂಪತಿಗಳು ಹಾಜರಿದ್ದು ದಿವ್ಯಾಂಗರು ಸಮಾಜದಲ್ಲಿ ಎದುರಿಸುವ ಅಡತಡೆಗಳನ್ನು ಮತ್ತು ತೊಂದರೆಗಳನ್ನು ಗಣ್ಯರಿಗೆ ಸೂಕ್ತ ಉದಾಹರಣೆಗಳ ಮೂಲಕ ತಿಳಿಯಪಡಿಸಿದರು. ಅಲ್ಲದೆ ಸಂಘಟನೆಗಳು ಹೇಗೆ ದಿವ್ಯಾಂಗರ ಸಬಲೀಕರಣದಲ್ಲಿ ಕೈ ಜೋಡಿಸಬಹುದು ಎಂಬುದರ ಬಗ್ಗೆ ವಿಸ್ತೃತವಾದ ಮಾಹಿತಿಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ HAL FWA ಅವರ 50 ನೇ ವಾರ್ಷಿಕೋತ್ಸವದ ನೆನಪಿನಲ್ಲಿ ಸಕ್ಷಮ ದ ಕ ಕ್ಕೆ ಸುಮಾರು ಅಂದಾಜು ಒಂದು ಲಕ್ಷ ಮೊತ್ತದ ದಿವ್ಯಾಂಗ ಉಪಯೋಗಿ ಉಪಕರಣಗಳನ್ನು ಸಮಾಜದಲ್ಲಿ ವಿತರಿಸುವ ಸಲುವಾಗಿ ಕೊಡಮಾಡಿದರು.
HAL FWA ಅಧಿಕಾರಿಗಳು ಇನ್ನು ಮುಂದೆಯೂ ಶಾಲೆಗೆ ಬರುವುದಾಗಿ ಭರವಸೆ ಕೊಟ್ಟು ಮುಂದಿನ ಕೆಲಸಕ್ಕೆ ತೆರಳುವಾಗ ಶಾಲಾ ಮಕ್ಕಳು ಮಾಡಿದ ನೆನಪಿನ ಕಾಣಿಕೆಯನ್ನು ಸ್ವೀಕರಿಸಿ ಧನ್ಯತಾ ಭಾವದಿಂದ ತೆರಳಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

