ಶ್ರೀ ವಿಷ್ಣುಮಂಗಲ ದೇವಳದ ಜಾತ್ರೋತ್ಸವ; ಭಜನಾಮೃತ ಕಾರ್ಯಕ್ರಮ

Upayuktha
0


ಕಾಸರಗೋಡು: ಎಡನೀರು ಮಠದ ಶ್ರೀ ವಿಷ್ಣುಮಂಗಲ ದೇವಳದ ಜಾತ್ರೋತ್ಸವದ ಪ್ರಯುಕ್ತ ಭಜನಾಮೃತ ಕಾರ್ಯಕ್ರಮ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ(ರಿ) ಕಾಸರಗೋಡು ಸಂಸ್ಥೆಯಿಂದ ನಡೆಯಿತು. ಸಂಸ್ಥೆಯ ಈ 176 ನೇ ಕಾರ್ಯಕ್ರಮದಲ್ಲಿ ದಿವಾಕರ ಕಾಸರಗೋಡು, ಸೀತಾರಾಮ ಮಲ್ಲ, ಮಧುಲತಾ ಪುತ್ತೂರು, ಅಮೃತ್ ಮೊದಲಾದ ಕಲಾವಿದರಿಂದ ಭಜನಾಮೃತ ಕಾರ್ಯಕ್ರಮ ‌ಜರಗಿತು.


ಹಾರ್ಮೋನಿಯಂನಲ್ಲಿ ನಳಿನಾಕ್ಷ ಮಣಿಯಾಣಿ ಸಹಕರಿಸಿದರು. ತಬಲಾದಲ್ಲಿ ಖ್ಯಾತ ತಬಲ ವಾದಕ ಹಾಗೂ ಸಂಗೀತ ಕಲಾವಿದರು ಮೇಘರಾಜ್ ಅವರು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು ಇವರನ್ನು ದೇವಳದ ಆಡಳಿತ ಮಂಡಳಿ ವತಿಯಿಂದ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಲಾಯಿತು. ಎಲ್ಲಾ ಕಲಾವಿದರನ್ನು ಗೌರವ ಧನನೀಡಿ ಗೌರವಿಸಲಾಯಿತು. ಸಂಸ್ಥೆಯ ವತಿಯಿಂದ ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದದ ಮೂಲಕ ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ವೆಂಕಟ ಭಟ್, ಸೂರ್ಯ ಭಟ್. ಉಮೇಶ್ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top